ಬಿಸಿ ಬಿಸಿ ಸುದ್ದಿ

ಅಕಾಡೆಮಿ ವತಿಯಿಂದ ಅರ್ಥಪೂರ್ಣ ‘ಬಸವ ಪಂಚಮಿ’ ಆಚರಣೆ: ‘ಹಾಲು’ ಮಣ್ಣು ಪಾಲು ಮಾಡಬೇಡಿ

ಕಲಬುರಗಿ: ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಕಲಬುರಗಿಯ ಗೋದುತಾಯಿ ನಗರದಲ್ಲಿನ ಸೋ ಕೇರ್ ಇಂಡ್ ಮಕ್ಕಳ ಮನೆಯ ಬಡ-ನಿರ್ಗತಿಕ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಹಾಲು ಮತ್ತು ಹಣ್ಣು ಕೊಡುವ ಮೂಲಕ ಅರ್ಥಪೂರ್ಣ ಬಸವ ಪಂಚಮಿಯನ್ನು ಸೋಮವಾರ ಆಚರಿಸಲಾಯಿತ್ತು.

ಸಾನಿಧ್ಯ ವಹಿಸಿದ್ದ ಸಾರಂಗಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಅತ್ಯಂತ ಸಮೃದ್ಧವಾದ ಆಹಾರ ಹಾಲು. ಇಂಥ ಹಾಲನ್ನು ಕಲ್ಲಿನ ಮೇಲೆ ಸುರಿದು ಮಣ್ಣುಪಾಲು ಮಾಡುವ ಬದಲಾಗಿ, ಬಡ ಅಥವಾ ನಿರ್ಗತಿಕ ಮಕ್ಕಳಿಗೆ ನೀಡುವ ಮೂಲಕ ಪರೋಪಕಾರವನ್ನು ಮೆರೆಯಬೇಕೆಂದರು.

ರಾಷ್ಟ್ರೀಯ ಬಸವ ದಳದ ಜಗದೇವಿ ಚೆಟ್ಟಿ ಮಾತನಾಡಿ, ಹಬ್ಬ-ಹರಿದಿನಗಳ ಆಚರಣೆಯಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿ ವಿಶೇಷ ಆಸಕ್ತಿ ಮತ್ತು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ, ಅವರು ಇಂಥ ಆಚರಣೆಗಳ ಕುರಿತು ವೈಚಾರಿಕವಾಗಿ ಆಲೋಚಿಸಿದರೆ ಒಂದು ಕುಟುಂಬ ಹಾಗೂ ಸಮಾಜ ಪರಿವರ್ತನೆಗೆ ನಾಂದಿಯಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಆಶಯ ನುಡಿಗಳನ್ನಾಡಿದ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಹಬ್ಬದ ಆಚರಣೆಯನ್ನು ವಿರೋಧಿಸುವುದು ಕಾರ್ಯಕ್ರಮದ ಉದ್ದೇಶವಲ್ಲ. ಕುಟುಂಬದ ಸದಸ್ಯರು ಒಂದೆಡೆ ಸೇರಿ ಆಚರಿಸುವ  ಹಬ್ಬಗಳು ಪರಸ್ಪರ ಪ್ರೀತಿ-ವಿಶ್ವಾಸಗಳನ್ನು ಇಮ್ಮಡಿಗೊಳಿಸುತ್ತವೆ. ವೈಜ್ಞಾನಿಕ ಮತ್ತು ವೈಚಾರಿಕ ನೆಲೆಗಟ್ಟಿನಲ್ಲಿ  ಶರಣರು ಸಾರಿದ ತಾತ್ವಿಕ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸುವುದೇ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆವೆಂದರು.

ಸಂಸ್ಥೆ ಕಾರ್ಯದರ್ಶಿ ಪರಮೇಶ್ವರ ವಾಗ್ಧರ್ಗಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ಹುಲಿಗೆಪ್ಪ ಕನಕಗಿರಿ, ಬಸವ ಸೇವಕರಾದ ವಿಜಯಲಕ್ಷ್ಮೀ ಪಾಟೀಲ ಬಿರಾಳ, ಸಂಗೀತಾ ಕಾಡಾದಿ, ಶ್ರೀದೇವಿ ಶಟಕಾರ, ಸೃಷ್ಠಿ ಪಾಟೀಲ ತೇಗಲತಿಪ್ಪಿ, ಪರಮೇಶ್ವರ ಶಟಕಾರ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಸತೀಶ ಸಜ್ಜನ್, ಡಾ.ಕೆ.ಗಿರಿಮಲ್ಲ, ಬಿ.ಎಂ.ಪಾಟೀಲ ಕಲ್ಲೂರ, ಶಿವಶರಣ ಕುಸನೂರ, ಮಹಾಂತೇಶ ಕಲಬುರಗಿ, ಅಯ್ಯಣ್ಣಗೌಡ ಪಾಟೀಲ, ಪ್ರಸನ್ನ ವಾಂಜರಖೇಡೆ, ಶರಣರಾಜ್ ಛಪ್ಪರಬಂದಿ, ನಾಗೇಂದ್ರಪ್ಪ ಮಾಡ್ಯಾಳೆ, ಶಿವಕುಮಾರ ದೊಡ್ಡಮನಿ, ಡಾ.ಗೀತಾ ಪಾಟೀಲ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು…

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

2 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

2 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

2 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

21 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago