ಬಿಸಿ ಬಿಸಿ ಸುದ್ದಿ

ಆಳಂದ; ಘೋರ ಕೃತ್ಯ ವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಒಳಪಡಿಸಲು ನಟ ಚೇತನ್ ಅಹಿಂಸಾ ಆಗ್ರಹ

ಇತ್ತೀಚಿಗೆ ಕಾಂತಾರ ಸಿನಿಮಾ ಕುರಿತ ನಟ ಚೇತನ್ ಹೇಳಿಕೆಗೆ ನಟ ಉಪೇಂದ್ರ ಅವರು ಪ್ರತಿಕ್ರಿಯಿಸಿ, ಕೆಲವು ವಿಚಾರಗಳನ್ನು ನೆಗ್ಲೆಕ್ಟ್ ಮಾಡಬೇಕು ಎಂದು ಹೇಳಿದರು. ಆ ಕುರಿತು ಶುಕ್ರವಾರ ನಗರದಲ್ಲಿ ನಟ ಚೇತನ್ ಮಾತನಾಡಿ, ವಿಷಯಗಳನ್ನ ನಿರ್ಲಕ್ಷ್ಯ ಮಾಡಿದರೆ ನಮಗೆ ಅಪಾಯ ಗ್ಯಾರೆಂಟಿ. ಹಿಂದಿನ ಹಲವು ವಿಚಾರವನ್ನ ನಿರ್ಲಕ್ಷ್ಯ ಮಾಡಿದಕ್ಕೆ ಇಂದು ಸಮಸ್ಯೆ ಹೆಚ್ಚಾಗಿದೆ. ಐಷಾರಾಮಿ ಜೀವನ ನಡೆಸುವವರು, ಕಾರು, ಎಸಿಗಳಲ್ಲಿ ಕುಳಿತುಕೊಳ್ಳುವರು ಮಾತ್ರ ವಿಷಯಗಳನ್ನು ನಿರ್ಲಕ್ಷ ಮಾಡುತ್ತಾರೆ ಎಂದರು.

ಕಲಬುರಗಿ: ಆಳಂದ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಘೋರ ಕೃತ್ಯ ವೆಸಗಿ,, ಕೊಲೆ ಮಾಡಿರುವ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಚಿತ್ರ ನಟ ಚೇತನ್ ಅಹಿಂಸಾ ಅವರು ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ಬಾಲಕಿ ಮೇಲೆ ಘೋರ ಕೃತ್ಯ ವೆಸಗಿ ಕೊಲೆಯಾಗಿದೆ. ಇದು ಇಡೀ ಕರ್ನಾಟಕದ ಜನತೆಗೆ ಬಹಳ ನೋವಾಗಿದೆ. ಬಾಲಕಿ ಒಂದು ಕುಟುಂಬದ‌ ಮಗಳಲ್ಲ , ಕರ್ನಾಟಕದ ಮಗಳು ಹೀಗಾಗಿ, ಇಂತಹ ಪ್ರಕರಣ ನಡೆದಾಗ ಜಾತಿ ಲೇಪನ ಕಟ್ಟುವ ಕೆಲಸ ಆಗುತ್ತೆ. ಆದರೆ, ಈ ಪ್ರಕರಣದಲ್ಲಿ ಎಲ್ಲರು ಬಾಲಕಿ ಪರವಾಗಿ ನಿಂತಿದ್ದು, ಸಂತಸದ ಸಂಗತಿಯಾಗಿದೆ. ಸರಕಾರ ಬಾಲಕಿಯ ಕುಟುಂಬಕ್ಕೆ ಆರ್ಥಿಕ ನೆರವಾಗುವ ನಿಟ್ಟಿನಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಘಟನೆಯು ಬಯಲು ಶೌಚಾಲಯಕ್ಕೆ ಹೋಗಿದ ವೇಳೆ ನಡೆದಿದೆ ಎಂದು ತಿಳಿದು ಬಂದಿದ್ದು, ಇನ್ನು ಹಳ್ಳಿಗಳಲ್ಲಿ ಮನೆಗಳಲ್ಲಿ ಶೌಚಾಲಯಗಳಿಲ್ಲ. ಹೀಗಾಗಿ ಎಲ್ಲರೂ ಮನೆಗಳಲ್ಲಿ ಶೌಚಾಲಯಗಳನ್ನು ಹೊಂದುವ ನಿಟ್ಟಿನಲ್ಲಿ ಸರಕಾರ ಜಾಗೃತಿ ಮೂಡಿಸಬೇಕು. ಇದಲ್ಲದೇ ಕೇರಳ ಮಾದರಿಯಲ್ಲೇ ಕರ್ನಾಟಕದಲ್ಲೂ ಸಹ ಬಾಲಕಿಯ ಹೆಸರಲ್ಲಿ ಶಾಲೆಯಲ್ಲಿ ಲಿಂಗ ಸಮಾನತೆ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ದಿನೇಶ್ ದೊಡ್ಡಮನಿ, ರೇಣುಕಾ ಸರಡಗಿ, ಸಂತೋಷ್, ದಿನೇಶ್ ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

52 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

53 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

56 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

20 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago