ಇತ್ತೀಚಿಗೆ ಕಾಂತಾರ ಸಿನಿಮಾ ಕುರಿತ ನಟ ಚೇತನ್ ಹೇಳಿಕೆಗೆ ನಟ ಉಪೇಂದ್ರ ಅವರು ಪ್ರತಿಕ್ರಿಯಿಸಿ, ಕೆಲವು ವಿಚಾರಗಳನ್ನು ನೆಗ್ಲೆಕ್ಟ್ ಮಾಡಬೇಕು ಎಂದು ಹೇಳಿದರು. ಆ ಕುರಿತು ಶುಕ್ರವಾರ ನಗರದಲ್ಲಿ ನಟ ಚೇತನ್ ಮಾತನಾಡಿ, ವಿಷಯಗಳನ್ನ ನಿರ್ಲಕ್ಷ್ಯ ಮಾಡಿದರೆ ನಮಗೆ ಅಪಾಯ ಗ್ಯಾರೆಂಟಿ. ಹಿಂದಿನ ಹಲವು ವಿಚಾರವನ್ನ ನಿರ್ಲಕ್ಷ್ಯ ಮಾಡಿದಕ್ಕೆ ಇಂದು ಸಮಸ್ಯೆ ಹೆಚ್ಚಾಗಿದೆ. ಐಷಾರಾಮಿ ಜೀವನ ನಡೆಸುವವರು, ಕಾರು, ಎಸಿಗಳಲ್ಲಿ ಕುಳಿತುಕೊಳ್ಳುವರು ಮಾತ್ರ ವಿಷಯಗಳನ್ನು ನಿರ್ಲಕ್ಷ ಮಾಡುತ್ತಾರೆ ಎಂದರು.
ಕಲಬುರಗಿ: ಆಳಂದ ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಘೋರ ಕೃತ್ಯ ವೆಸಗಿ,, ಕೊಲೆ ಮಾಡಿರುವ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಚಿತ್ರ ನಟ ಚೇತನ್ ಅಹಿಂಸಾ ಅವರು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿಯಲ್ಲಿ ಅಮಾನವೀಯ ಕೃತ್ಯ ನಡೆದಿದ್ದು, ಬಾಲಕಿ ಮೇಲೆ ಘೋರ ಕೃತ್ಯ ವೆಸಗಿ ಕೊಲೆಯಾಗಿದೆ. ಇದು ಇಡೀ ಕರ್ನಾಟಕದ ಜನತೆಗೆ ಬಹಳ ನೋವಾಗಿದೆ. ಬಾಲಕಿ ಒಂದು ಕುಟುಂಬದ ಮಗಳಲ್ಲ , ಕರ್ನಾಟಕದ ಮಗಳು ಹೀಗಾಗಿ, ಇಂತಹ ಪ್ರಕರಣ ನಡೆದಾಗ ಜಾತಿ ಲೇಪನ ಕಟ್ಟುವ ಕೆಲಸ ಆಗುತ್ತೆ. ಆದರೆ, ಈ ಪ್ರಕರಣದಲ್ಲಿ ಎಲ್ಲರು ಬಾಲಕಿ ಪರವಾಗಿ ನಿಂತಿದ್ದು, ಸಂತಸದ ಸಂಗತಿಯಾಗಿದೆ. ಸರಕಾರ ಬಾಲಕಿಯ ಕುಟುಂಬಕ್ಕೆ ಆರ್ಥಿಕ ನೆರವಾಗುವ ನಿಟ್ಟಿನಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಘಟನೆಯು ಬಯಲು ಶೌಚಾಲಯಕ್ಕೆ ಹೋಗಿದ ವೇಳೆ ನಡೆದಿದೆ ಎಂದು ತಿಳಿದು ಬಂದಿದ್ದು, ಇನ್ನು ಹಳ್ಳಿಗಳಲ್ಲಿ ಮನೆಗಳಲ್ಲಿ ಶೌಚಾಲಯಗಳಿಲ್ಲ. ಹೀಗಾಗಿ ಎಲ್ಲರೂ ಮನೆಗಳಲ್ಲಿ ಶೌಚಾಲಯಗಳನ್ನು ಹೊಂದುವ ನಿಟ್ಟಿನಲ್ಲಿ ಸರಕಾರ ಜಾಗೃತಿ ಮೂಡಿಸಬೇಕು. ಇದಲ್ಲದೇ ಕೇರಳ ಮಾದರಿಯಲ್ಲೇ ಕರ್ನಾಟಕದಲ್ಲೂ ಸಹ ಬಾಲಕಿಯ ಹೆಸರಲ್ಲಿ ಶಾಲೆಯಲ್ಲಿ ಲಿಂಗ ಸಮಾನತೆ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿನೇಶ್ ದೊಡ್ಡಮನಿ, ರೇಣುಕಾ ಸರಡಗಿ, ಸಂತೋಷ್, ದಿನೇಶ್ ಇದ್ದರು.