ಬಿಸಿ ಬಿಸಿ ಸುದ್ದಿ

ವಿವಿಧ ಬೇಡಿಕೆಗಳ ಈಡೇರಿಕ್ಕೆಗೆ ಆಗ್ರಹಿಸಿ ಕೆಪಿಆರ್ಎಸ್ ಪ್ರತಿಭಟನೆ

ಶಹಾಬಾದ: ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಶನಿವಾರ ತಹಸೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯದಲ್ಲಿ ಶ್ರಿಮಂತರು ಬಡವರು ಹಾಗೂ ದಲಿತರು ಮತ್ತು ಮಹಿಳೆಯ್ಮರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳು ಬೆಳೆಯುುತ್ತಲೇ ಇವೆ. ರಾಜ್ಯದಲ್ಲಿ ಭ್ರμÁ್ಠಚಾರ ತಾಂಡವವಾಡುತ್ತಿದೆ. ಮಂತ್ರಿ ಮಂಡಲ ಹಾಗೂ ಉನ್ನತ ಅಧಿಕಾರಿಗಳ ಶಾಮೀಲುತನ ಬೆಳಕಿಗೆ ಬರುತ್ತಿದೆ. ಅತಿವೃಷ್ಠಿ ಹಾಗು ಪ್ರವಾಹದಿಂದ ರಾಜ್ಯ ನಲುಗುತ್ತಿದ್ದರೂ ಸಮರ್ಪಕ ಪರಿಹಾರ ಒದಗಿಸಲಾಗುತ್ತಿಲ್ಲ. ಸರಕಾರವೇ ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯವನ್ನು ಬೆಳೆಸುತ್ತಿದೆ.

ಕೋಮುವಾದಿ ಶಕ್ತಿಗಳು ಬಹಿರಂಗವಾಗಿ ಕಾದಾಟಕ್ಕಿಳಿದಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಸಂರಕ್ಷಿಸಲು ಮತ್ತು ರಾಜ್ಯದ ಜನತೆಯ ತಲಾ ಆದಾಯವನ್ನು ಹೆಚ್ಚಿಸುವ ನೈಜ ಅಭಿವೃದ್ಧಿಯ ಕಡೆ ರಾಜ್ಯವನ್ನು ಮುನ್ನಡೆ ಸುವಂತಾಗಬೇಕೆಂದು ಒತ್ತಾಯಿಸಿದರಲ್ಲದೇ
ಪ್ರಕೃತಿ ವಿಕೋಪಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸಬೇಕು. ಕಳೆದ ನಾಲ್ಕುವರ್ಷಗಳಲ್ಲಿ ಎರಡುವರ್ಷ ಅತಿವೃಷ್ಠಿ ಮತ್ತು ಪ್ರವಾಹ ಹಾಗೂ ಎರಡು ವರ್ಷ ಕೋವಿಡ್ ಸಂಕಷ್ಠದಿಂದ ರಾಜ್ಯ ನಲುಗಿ ಹೋಗಿದೆ. ಈ ನೆಲೆಯಲ್ಲಿ ಈ ಸಂಕಷ್ಠದಿಂದ ಪಾರು ಮಾಡಲು,ಮನೆ ಬಿದ್ದು ಹೋಗಿ ವಸತಿಯಿಂದ ವಂಚಿತರಾದವರಿಗೆ ಪಕ್ಕಾ ಮನೆಗಳನ್ನು ಕಟ್ಟಿಸಿಕೊಡಬೇಕು.

ಬೆಳೆ ಹಾನಿಗೆ ತಲಾ ಎಕರೆಗೆ ಕನಿಷ್ಠ 25,000 ರೂಗಳ ಪರಿಹಾರ ಮತ್ತು ಬೆಳೆ ವಿಮೆ ಒದಗಿಸಬೇಕು. ರೈತರು, ಕೂಲಿಕಾರರು ಕಸುಬುದಾರರು ಮತ್ತು ಮಹಿಳೆಯ್ಮರ ಖಾಸಗೀ ಹಾಗೂ ಸಾರ್ವಜನಿಕ ಸಾಲವೂ ಸೇರಿದಂತೆ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡಬೇಕು.ರಾಜ್ಯದ ಎಲ್ಲ ರೈತರು, ಕೂಲಿಕಾರರು, ಕಾರ್ಮಿಕರು ಹಾಗೂ ಎಲ್ಲ ಬಡವರ ಮಕ್ಕಳ ಶಾಲಾ ಹಾಗೂ ಕಾಲೇಜು ಶುಲ್ಕವನ್ನು ಮನ್ನಾ ಮಾಡಬೇಕು.ರಾಜ್ಯ ಸರಕಾರದ ಎಲ್ಲ ಗುತ್ತಿಗೆ ಕೆಲಸಗಳಲ್ಲಿ ಶೇ 40 ರಷ್ಠು ಕಮಿಷನ್ ಕೊಡಬೇಕಾಗಿದೆಯೆಂಬ ಗುತ್ತಿಗೆದಾರರ ಸಂಘದ ಗಂಭೀರ ಆರೋಪ ಬಹಿರಂಗ ಗೊಂಡಿದೆ.

ಈಎಲ್ಲ ಭ್ರμÁ್ಟಚಾರವನ್ನು ತನಿಖೆಗೊಳಪಡಿಸಲು ಸ್ವತಂತ್ರ ನ್ಯಾಯಾಂಗ ತನಿಖೆ ಹಾಗೂ ಸಿಬಿಐ ತನಿಖೆಗೆ ಮತ್ತು ಸದನ ಸಮಿತಿ ರಚಿಸಿ ತನಿಖೆಗೆ ಕ್ರಮವಹಿಸಬೇಕು.ಅಲ್ಲದೇ ಆಳಂದ ಅಪ್ರಾಪ್ತ ಬಾಲಕಿಯ ಮೇಲೆ ನಡೆಸಿದ ಅತ್ಯಾಚಾರಿಯನ್ನು ಗಲ್ಲಿಗೇರಿಸಬೇಕು.ಅವಳ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಸೇರಿದಂತೆ ಅನೇಕ ಬೇಡಿಕೆಗಳನ್ನು ಆಗ್ರಹಿಸಿದರು.

ಪ್ರಾಂತ ರೈತ ಸಂಘದ ಶಹಾಬಾದ ತಾಲೂಕಾಧ್ಯಕ್ಷ ರಾಯಪ್ಪ ಹುರಮುಂಜಿ, ಚಿತ್ತಾಪೂರ ಅಧ್ಯಕ್ಷ ಸಾಯಿಬಣ್ಣ ಗುಡುಬಾ, ಸಿಐಟಿಯು ತಾಲೂಕಾಧ್ಯಕ್ಷೆ ಶೇಖಮ್ಮ ಕುರಿ,ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಮು ಜಾಧವ, ತಾಲೂಕಾ ಪ್ರಧಾನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್,ಖಜಾಂಚಿ ಮಲ್ಲಮ್ಮ ಸಂಕಾ, ಕೆಪಿಆರ್‍ಎಸ್ ತಾಲೂಕಾ ಕಾರ್ಯದರ್ಶಿ ವೀರಯ್ಯಸ್ವಾಮಿ ತರನಳ್ಳಿ, ಸಿಐಟಿಯು ಮುಖಂಡ ಮಲ್ಲಣ್ಣ ಕಾರೊಳ್ಳಿ,ಕೆಪಿಆರ್‍ಎಸ್ ತಾಲೂಕಾ ಸಮಿತಿ ಸದಸ್ಯ ಮಲ್ಲಿಕಾರ್ಜುನ ಬುರ್ಲಿ,ಕೃಷಿ ಕೂಲಿಕಾರ ಸಂಘದ ಕಾರ್ಯದರ್ಶಿ ತಿಪ್ಪಣ್ಣ ಪೂಜಾರಿ, ಇತರರು ಇದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

16 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

22 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

23 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

23 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago