ಬಿಸಿ ಬಿಸಿ ಸುದ್ದಿ

ಸ್ವಚ್ಚತಾ ಕಾರ್ಯ ಕೈಗೊಳ್ಳುವಲ್ಲಿ ಚುರುಕಾದ ಶಹಾಬಾದ ನಗರಸಭೆ

ಶಹಾಬಾದ: ನಗರದಲ್ಲಿ ಕಳೆದ ಹಲವು ವರ್ಷಗಳಿಂದ ವಿವಿಧ ಭಾಗಗಳಲ್ಲಿ ಬಿದ್ದ ಕಸದ ಸ್ವಚ್ಚತೆ, ತುಂಬಿದ ಚರಂಡಿಗಳ ಹೂಳೆತ್ತುವದು, ಕಸದ ವಿಲೇವಾರಿ ಚುರುಕುಗೊಳಿಸುವ ನಿಟ್ಟಿನಲ್ಲಿ ನಗರ ಸ್ವಚ್ಚತಾ ಕಾರ್ಯಕ್ಕೆ ನಗರಸಭೆ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದೆ.

ನಗರದ ವಿವಿಧ ವಾರ್ಡಗಳಲ್ಲಿ ಕಳೆದ ಹಲವು ವರ್ಷಗಳಿಂದ ಮುಚ್ಚಿಹೋದ ಚರಂಡಿಗಳ ಹೂಳೆತ್ತುವದು, ಆಯಾ ವಾರ್ಡಗಳಲ್ಲಿ ಶೇಖರಗೊಂಡ ಕಸವನ್ನು ವಿಲೇವಾರಿ ಮಾಡುವದು, ಸೇರಿದಂತೆ ಸಂಪೂರ್ಣ ವಾರ್ಡನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ ನಗರಸಭೆಯ ಎಲ್ಲಾ ವಾರ್ಡಗಳಲ್ಲಿ ಪೌರ ಸಿಬ್ಬಂದಿಯೊಂದಿಗೆ ಸ್ವಚ್ಚತೆ ಕೈಗೊಳ್ಳಲಾಗುತ್ತಿದೆ.

ಈ ಹಿಂದೆ ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇರುವ ಕಾರಣ ನಗರದ ಎಲ್ಲಾ ವಾರ್ಡಗಳಲ್ಲಿ ಸ್ವಚ್ಛತೆ ಮಾಡುವಲ್ಲಿ ತೊಂದರೆಯಾಗುತ್ತಿತ್ತು. ಅಲ್ಲದೇ ನಿತ್ಯ ಸಾರ್ವಜನಿಕರಿಂದ ಹಾಗೂ ನಗರಸಭೆಯ ಸದಸ್ಯರಿಂದ ದೂರುಗಳ ಸರಮಾಲೆಯೇ ಬರುತ್ತಿರುವುದರಿಂದ ನೈರ್ಮಲ್ಯ ಸಮಸ್ಯೆಯೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.ಅಲ್ಲದೇ 27 ವಾರ್ಡಗಳಿಗೆ ಕೇವಲ ಒಬ್ಬನೇ ಆರೋಗ್ಯ ನಿರೀಕ್ಷಕರಿದ್ದರು.ಸದ್ಯ ನಾಲ್ಕು ಜನ ಆರೋಗ್ಯ ನಿರೀಕ್ಷಕರು ಹಾಗೂ ಒಬ್ಬ ಪರಿಸರ ಅಭಿಯಂತರರು ಇದ್ದಾರೆ. ಅಲ್ಲದೇ ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇರುವ ಕಾರಣ ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ತೆಗೆದುಕೊಳ್ಳಲಾಗಿದೆ.ಅಂದಿನಿಂದ ನಗರದಲ್ಲಿ ನೈರ್ಮಲ್ಯದ ಬಗ್ಗೆ ಬಹುತೇಖ ದೂರುಗಳು ಬರುತ್ತಿಲ್ಲ.ಬಂದರೂ ಅದನ್ನು ಬೇಗನೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ.

ಪೌರ ನೌಕರರು ಚರಂಡಿ ಹೂಳೆತ್ತುವದು, ಚರಂಡಿ ಸ್ವಚ್ಚತೆ, ರಸ್ತೆ ಗುಡಿಸುವದು, ಕಸವನ್ನು ವಿಲೇವಾರಿ ಮಾಡುವ ಕೆಲಸವನ್ನು ಯುದ್ದೋಪಾದಿಯಲ್ಲಿ ಇಡಿ ದಿನ ಕೈಗೊಂಡು ನಗರದ ಅಂದವನ್ನು ಹೆಚ್ಚಿಸುತ್ತಿದ್ದಾರೆ.ಇದರಿಂದ ನಗರಸಭೆಯ ಹಾಗೂ ಪೌರಕಾರ್ಮಿಕರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಗರಸಭೆಯ ಪೌರಾಯುಕ್ತರು ಬಂದು ಕೇವಲ ಎರಡೂವರೆ ತಿಂಗಳಾಗಿವೆ.ಅಷ್ಟರಲ್ಲಿಯೇ ಆಡಳಿತಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ. ಕಸ ವಿಲೇವಾರಿ ಶೀಘ್ರವಾಗಿ ನಡೆಯುತ್ತಿದೆ. ಅಲ್ಲದೇ ಕಟ್ಟಡ ತ್ಯಾಜ್ಯವನ್ನು ಮನೆ ಮಾಲೀಕರು ಎಲ್ಲೆಂದರಲ್ಲಿ ಎಸೆಯಬಾರದು.ನಗರದ ನೈರ್ಮಲ್ಯ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಮುಖ್ಯ –ಅಂಜಲಿ ಗಿರೀಶ ಕಂಬಾನೂರ ಅಧ್ಯಕ್ಷೆ ನಗರಸಭೆ ಶಹಾಬಾದ.

ಸಾರ್ವಜನಿಕರು ಪ್ರತ್ಯೇಖವಾಗಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ನೀಡಿದರೇ ಅನುಕೂಲವಾಗುತ್ತದೆ. ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ನಗರದಲ್ಲಿ ನೈರ್ಮಲ್ಯ ಸಮಸ್ಯೆಯನ್ನು ಬಗೆಹರಿಸಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. – ಅಶೋಕ ಬಿಲಗುಂದಿ ಪೌರಾಯುಕ್ತರು ನಗರಸಭೆ ಶಹಾಬಾದ.

ಬೆಳಿಗ್ಗೆ ಬಂದು ಪೌರಾಯುಕ್ತರು ಕಸ ವಿಲೇವಾರಿ ನಡೆಯುತ್ತಿರುವ ಬಗ್ಗೆ ಗಮನಹರಿಸುತ್ತಿದ್ದಾರೆ. ಮುಟೇಷನ್, ಖಾತಾ ತೆಗೆದುಕೊಳ್ಳಬೇಕಾದರೆ ಪರದಾಡಬೇಕಾಗಿತ್ತು.ಅಲ್ಲದೇ ಹಣಕೊಡಬೇಕಾದ ಪರಿಸ್ಥಿತಿ ಉಂಟಾಗಿತ್ತು.ಅದಕ್ಕೆ ಬ್ರೇಕ್ ಹಾಕಿದ್ದಾರೆ.ಅಲ್ಲದೇ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. -ಮಲ್ಲಿಕಾರ್ಜುನ ಜಲಂಧರ್ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

16 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

2 days ago