ಬಿಸಿ ಬಿಸಿ ಸುದ್ದಿ

ಸಮಸ್ಯೆಗಳಿಗೆ ಆತ್ಮಹತ್ಯೆಯೆ ಪರಿಹಾರವಲ್ಲ

ಆನೇಕಲ್: ತಾಲೂಕಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯ ಕ್ರಮವನ್ನು ಕೌಶಲ್ಯ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟಣೆ ಮಾಡಿ ಮಾತನಾಡಿದ ಅವರು ಹೆಣ್ಷುಮಕ್ಕಳು ಸಮಾಜದಲ್ಲಿ ತುಂಬಾ ಹಿಂದೆ ಉಳಿದ್ದಾರೆ. ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಮುಂದೆಬರಬೇಕು,ಮಹಿಳೆಯರಿಗೆ ಆಗುತ್ತಿರುವಂತಹ ದೌರ್ಜನ್ಯವನ್ನು ವಿರೋಧಿಸಿ ಧ್ವನಿ ಎತ್ತಬೇಕು ಮತ್ತು ಕಾನೂನಿನ ಬಗ್ಗೆ ಮಾಹಿತಿಗಳನ್ನು ತಿಳಿಸಿದರಬೇಕು ಎಂದು ಹೇಳಿದರು.

ಟೆಲಿ ಲಾ ಕರ್ನಾಟಕ ವಕೀಲರಾದ ಪುರುಷೋತ್ತಮ ಎ ಮಾತನಾಡಿ ನ್ಯಾಯಾಧೀಶರು ಜನರ ಬಳಬರಬೇಕು, ಸಾಮಾನ್ಯ ಜನರಿಗೂ ಕಾನೂನು ತಲುಪಬೇಕು, ನಂಬರ್ ತಿಂಗಳ 9 ನೇ ತಾರೀಖು ರಾಷ್ಟ್ರೀಯ ಕಾನೂನು ಸೇವೆಗಳ ದಿನ ಆಚರಣೆ ಮಾಡಿ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ಉಚಿತವಾಗಿ ಸಿಗಬೇಕು ಎಂಬುದೇ 1987 ರ ಕಾನೂನು ಸೇವೆಗಳ ಕಾಯ್ದೆಯ ಉದ್ದೇಶ ಎಂದರು.

ಆರ್.ಚಂದ್ರಶೇಖರ ಸಹಾಯಕ ಸರ್ಕಾರಿ ಅಭಿಯೋಜಕರು ಮಾತನಾಡಿ, ಹೊಲಿಗೆ ಯಂತ್ರದಿಂದ ಒಂದು ಕುಟುಂಬವನ್ನು ಸಾಕಬಹುದು, ನಮ್ಮ ತಂದೆ ಕೂಡ ಹೊಲಿಗೆ ಯಂತ್ರದಿಂದ ನಾವು ಈ ಮಟ್ಟಕ್ಕೆ ಬಂದಿದ್ದೇವೆ, ಕಾನೂನು ತಿಳಿದುಕೊಳ್ಳುವುದು ನಮ್ಮ ಜವಾಬ್ದಾರಿ ಎಲ್ಲರೂ ಕಾನೂನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಆರ್.ರಮೇಶ ಅಧ್ಯಕ್ಷರು ವಕೀಲರ ಸಂಘ, ಇವರು ಮಾತನಾಡಿ ಮನುಷ್ಯ ‌ಹುಟ್ಟಿದಾಗಿನಿಂದ ಕಾನೂನು ನಿಮ್ಮನ್ನು ಹಿಂಬಾಲಿಸುತ್ತದೆ ಹಾಗೆಯೇ ಸತ್ತಮೇಲೂ ಕೂಡ ಕಾನೂನು ಬೇಕಾಗುತ್ತದೆ ಎಂದರು, ಕಾರ್ಯಕ್ರಮದಲ್ಲಿ ವಕೀಲರ ಸಂಘ ಕಾರ್ಯದರ್ಶಿ ವೈ ಮಂಜುನಾಥ, ಕಖಜಾಂಚಿ ಕೆ ವಿ ರವಿ, ವಕೀಲರಾದ ಶಿವರಾಜು, ಭಾಗ್ಯ, ನಾಗರತ್ನ, ನಿರ್ಮಲ, ಕೌಶಲ್ಯ ತರಬೇತಿ ಕೇಂದ್ರದ ರಾಜು, ಸೌಮ್ಯ, ಮಂಜುಳಾ, ಮುರಳಿ, ಜಯಶ್ರೀ ಮತ್ತು ಕಂಪ್ಯೂಟರ್ ತರಬೇತಿ ವಿದ್ಯಾರ್ಥಿಗಳು, ಮತ್ತು ಹೊಲಿಗೆ ತರಬೇತಿ ಶಿಬಿರದ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

emedialine

Recent Posts

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹ

ಕಲಬುರಗಿ: ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದು ಅಖಿಲ ಭಾರತ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ಡಾ. ಸಿದ್ದನಗೌಡ…

3 mins ago

ವಾಡಿಯಲ್ಲಿ ಕಲರ್ ಕಲರ್ ಕುಡಿಯುವ ನೀರು ಪೂರೈಕೆ

ವಾಡಿ: ಮಾಡುತ್ತಿರುವ ಕುಡಿವ ನೀರಿನಲ್ಲಿ ಚರಂಡಿ ನೀರು ಹಾಗೂ ಮಳೆಯಿಂದ ಕಲುಷಿತ ನೀರು ಸೇರ್ಪಡೆಯಾಗಿ ಸಾರ್ವಜನಿಕರು ಅನಿವಾರ್ಯವಾಗಿ ರಾಡಿ ನೀರು…

6 mins ago

ಬಸವರಾಜ್ ಎಸ್ ಜಿಳ್ಳೆಗೆ ಸನ್ಮಾನ ನಾಳೆ

ಕಲಬುರಗಿ; ಬಸವರಾಜ್ ಎಸ್ ಜಿಳ್ಳೆ ಅಭಿಮಾನಿ ಬಳಗದ ವತಿಯಿಂದ ಡೆಪ್ಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ ಎಸ್ ಆರ್…

5 hours ago

ಐಆರ್‌ಎಸ್‌ಒ ಕರ್ನಾಟಕ ರಾಜ್ಯ ಕಾರ್ಯಕರ್ತರ ಸಭೆ

ರಾಯಚೂರು; ಮಾರ್ಕ್ಸ್ ಭವನದಲ್ಲಿ ಎಐಆರ್‌ಎಸ್‌ಒ ಕರ್ನಾಟಕ ರಾಜ್ಯ ಮಟ್ಟದ ಕಾರ್ಯಕರ್ತರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕರ್ತರ ಸಭೆಯಲ್ಲಿ, ಕೇಂದ್ರ ಸಂಘಟನಾ…

5 hours ago

ಶೈಲಜಾ ಶರಣಗೌಡಗೆ ಪಿಎಚ್. ಡಿ. ಡಾಕ್ಟರೇಟ್ ಪದವಿ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಶೋಧನಾ ವಿಭಾಗದ ವಿದ್ಯಾರ್ಥಿನಿ, ಶೈಲಜಾ ಶರಣಗೌಡ ಇವರು ಡಾ. ಶಾರದಾ ದೇವಿ ಎಸ್.…

5 hours ago

ಜನಪದ ಕಲಾವಿದರು ಸಮಾಜದ ಆಸ್ತಿ

ಕಲಬುರಗಿ; ಗ್ರಾಮೀಣ ಭಾಗದಲ್ಲಿ ಅನೇಕ ಜನ ಕಲಾವಿದರು ಹಗಲಿರುಳು ಸೇವೆಗೈದು ಜನಪದ ಉಳಿಸುವುದರೊಂದಿಗೆ ಸಮಾಜದ ಆಸ್ತಿಯಾಗಿದ್ದಾರೆ ಎಂದು ನ್ಯಾಯವಾದಿ ಹಣಮಂತರಾಯ…

5 hours ago