ಬಿಸಿ ಬಿಸಿ ಸುದ್ದಿ

ಚಿಕುಖ್ಯಾತ ರೌಡಿ ಕರ್ಣ ಗಡಿಪಾರು

ಕಲಬುರಗಿ: ಕುಖ್ಯಾತ ರೌಡಿ ಕರ್ಣ ಅಲಿಯಾಸ್ ರಾಕ್ಸ್ ರಮೇಶ ಜಮಾದಾರನನ್ನು ಗಡಿಪಾರು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ ತಿಳಿಸಿದ್ದಾರೆ.

ನಗರದ ಜಿಡಿಎ ಕಾಲನಿ ಯಲ್ಲಮ್ಮ ಗುಡಿ ನಿವಾಸಿಯದ ಕರ್ಣ ದರೋಡೆ ಕಳ್ಳತನ, ಸುಲಿಗೆ ಸೇರಿದಂತೆ ಹಲವರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜಾಮೀನಿನ ಬಿಡುಗಡೆಯಾದ ಮೇಲೂ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು ಒಂದು ವರ್ಷದ ಅವಧಿವರೆಗೆ ಶಿವಮೊಗ್ಗ ಜೈಲಿಗೆ ಗಡಿಪಾರು ಮಾಡಲಾಗಿದೆ.

ಕರ್ಣ ಸೇರಿದಂತೆ ಈವರೆಗೆ ಆರು ಜನ ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಬಿಲಾಲಬಾದನ ಮಿರ್ಜಾ ಮೊಹ್ಮದ್, ಬಾಪು ನಗರದ ವಿಜಯಕುಮಾರ ಕಾಂಬಳೆ, ಆರ್.ಎಸ್. ಕಾಲನಿಯ ರಾಜಶೇಖರ ಉಮಾಶೆಟ್ಟಿ, ಯಾದಗಿರಿ ಜಿಲ್ಲೆಯ ಮಣಿಕಂಠ ಮತ್ತು ಕೃಷ್ಣ ಕಾಲನಿಯ ಶೇರ್ ಅಲಿ ಅವರು ಗಡಿಪಾರಾದ ರೌಡಿಗಳಾಗಿದ್ದಾರೆ. ಮಣಿಕಂಠ ರಾಠೋಡ್ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ತಂದಿದಾರೆ ಎಂದು ಅವರು ತಿಳಿಸಿದರು.

emedialine

Recent Posts

ಈಡಿಗ ನಿಗಮ ಅನುದಾನಕ್ಕೆ ವಿಧಾನಸಭೆಯಲ್ಲಿ ಧ್ವನಿಯಾಗುವೆ: ಶಾಸಕ ಗವಿಯಪ್ಪ

ಕಲಬುರಗಿ : ರಾಜ್ಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಘೋಷಣೆ ಮಾಡಿದ ಬ್ರಹ್ಮಶ್ರೀ ನಾರಾಯಣ…

3 mins ago

ಕಲ್ಯಾಣ ಕರ್ನಾಟಕದ 18 ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣ: ಡಾ. ಅಜುಸಿಂಗ್

ಕಲಬುರಗಿ: ಕಂದಾಯ ಇಲಾಖೆಯ ಸಹಯೋಗದೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ನೂತನ 18 ತಾಲೂಕು ಕೇಂದ್ರಗಳಲ್ಲಿ ಆಡಳಿತ ವಿಧಾನಸೌಧಗಳನ್ನು ನಿರ್ಮಿಸಲು ತಲಾ…

6 mins ago

ಅಧ್ಯಾತ್ಮದ ಜ್ಞಾನ ಬದುಕಿಗೆ ಬೆಳಕು ನೀಡುತ್ತದೆ

ಕಲಬುರಗಿ:ಮಾನವನ ಬದುಕಿಗೆ ಅಧ್ಯಾತ್ಮದ ಜ್ಞಾನವು ಅರಿವು ಮೂಡಿಸುವುದಲ್ಲದೆ,ಬೆಳಕು ನೀಡುತ್ತದೆ ಎಂದು ಪುರಾಣ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ. ಜಯನಗರ…

4 hours ago

ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಸಮೀಕ್ಷೆ : ಡಾ. ಶಾಲಿನಿ ರಜನೀಶ್

ಬೆಂಗಳೂರು: ಮೊಬೈಲ್ ಆಪ್ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಲು ಜುಲೈ 15 ರಿಂದ 30 ರವರೆಗೆ ಸಮೀಕ್ಷೆ ನಡೆಸಲಾಗುವುದು…

6 hours ago

ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ: ಸಿಎಂ ಸಿದ್ದು

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ…

6 hours ago

ಕನ್ನಡದ ನೆಲದಲ್ಲಿ ಕನ್ನಡಿಗರ ಮಕ್ಕಳೇ ಉದ್ಯೋಗ ಮಿಸಲಾತಿ ಕೇಳುವಂತಹ ಪರಸ್ಥಿತಿ ಆಘಾತಕಾರಿ

ಕಲಬುರಗಿ: ಡಾ.ಸರೋಜನಿ ಮಹಿಷಿ ವರದಿ ಅನುಷ್ಠಾನಕ್ಕೆ ನಡೆದ, ನಡೆಯುತ್ತಿರುವ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಮಹಿಷಿ ವರದಿಯ ಹೆಸರು ಹೇಳಿ ಆಳಿದ…

7 hours ago