ಚಿಟಗುಪ್ಪ : ನಾವೆಲ್ಲರೂ ದೊಡ್ಡ ದೊಡ್ಡ ವ್ಯೆಕ್ತಿಗಳಾಗಬೇಕು ಎಂದೆಲ್ಲ ಬಯಸುತ್ತೇವೆ. ಆದರೆ ದೊಡ್ಡ ವ್ಯೆಕ್ತಿ ಅಂತಾ ಅನ್ನಿಸಿಕೊಳ್ಳಬೇಕಾದರೆ ಮೊದಲು ನಮ್ಮ ವೈಯಕ್ತಿಕ ಜೀವನವನ್ನು ಅತ್ಯಂತ ಪರಿಶುದ್ಧವಾಗಿ ಅಷ್ಟೇ ಪ್ರಾಮಾಣಿಕತೆ, ಪ್ರಬುದ್ಧತೆ, ನಿಷ್ಕಲ್ಮಶ ಮನಸ್ಸಿನಿಂದ ಚನ್ನಾಗಿ ಇಟ್ಟುಕೊಳ್ಳಬೇಕು. ಅಂದಾಗಲೇ ಮಾತ್ರ ನಾವೆಲ್ಲರೂ ಮನುಷ್ಯರಾಗಿ ಹುಟ್ಟಿದಕ್ಕೂ ಸಾರ್ಥಕವಾಗುತ್ತದೆ ಎಂದು ಬಸವ ತತ್ವ ಪ್ರಚಾರಕ ಶರಣ ಚಂದ್ರಶೇಖರ ತಂಗಾ ಹೇಳಿದರು.
ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ವಿಶ್ವ ಬಸವ ಧರ್ಮ ಟ್ರಸ್ಟ್ ಹಾಗೂ ಅನುಭವ ಮಂಟಪ ಬಸವಕಲ್ಯಾಣ ರವರ ವತಿಯಿಂದ ಆಯೋಜಿಸಿದ್ದ ೪೩ನೇ ಶರಣ ಕಮ್ಮಟ,ಅನುಭವ ಮಂಟಪ ಉತ್ಸವ ಆಚರಣೆ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ವಚನ ಭಾಷಣ ಸ್ಪರ್ಧೆ,ಕವಿ ಶ್ರೇಷ್ಠ ಕನಕ ದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಕನಕದಾಸರು ಜಾತಿ ಪದ್ಧತಿಯ ತಾರತಮ್ಯಗಳನ್ನು ತೊಡೆದ ಹಾಕಿದ ಶ್ರೇಷ್ಠ ಮನುಕುಲದ ಸಂತ. ಸರ್ವರೂ ಸಮಾನರು ಎಂದು ನಾಡಿಗೆ ಸಾರಿದ್ದಾರೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಮಾಹಾರುದ್ರಪ್ಪ ಅಣದೂರ ಮಾತನಾಡಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಚನ ಗಾಯನ, ವಚನ ಕಂಠ ಪಾಠ, ವಚನ ಭಾಷಣ ಸ್ಪರ್ಧೆಗಳು ಏರ್ಪಡಿಸಿ, ಅವರಲ್ಲಿರುವ ಪ್ರತಿಭೆಯನ್ನು ಹೊರಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವ ಅನುಭವ ಮಂಟಪದ ಕಾರ್ಯ ಶ್ಲಾಘನೀಯವಾಗಿದೆ. ಶರಣ ಕಮ್ಮಟದ ಮೂಲಕ ಶರಣರ ಸಂದೇಶಗಳನ್ನು ದೇಶದಾದ್ಯಂತ ಪ್ರಚುರಪಡಿಸುತ್ತಿರುವ ಕೆಲಸ ಜಗತ್ತಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಸಂಯೋಜಕ,ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂಗಮೇಶ ಎನ್ ಜವಾದಿ ಯವರು ಮಾತನಾಡಿ ಕನಕದಾಸರು 15- 16 ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾಗಿದ್ದವರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರಾಗಿದರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರಾಗಿ ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿಟ್ಟು ಭಕ್ತಿ ಪಂಥವನ್ನು ನಾಡಿಗೆ ಧಾರೆಯೆರೆದ ಶ್ರೇಷ್ಠ ಸಂತರಾಗಿದ್ದಾರೆ ಎಂದರು.ಅನುಭವ ಮಂಟಪ ಉತ್ಸವ ಆಚರಣೆ ಅಂಗವಾಗಿ ಆಯೋಜಿಸಿದ್ದ ವಚನ ಭಾಷಣ ಸ್ಪರ್ಧೆಗಳ ನಿಯಮಗಳು ವಿವರಿಸಿದರು. ಪೂಜ್ಯ ಬಸವಲಿಂಗ ಪಟ್ಟದ್ದೇವರ ದಿವ್ಯಸಾನಿಧ್ಯದಲ್ಲಿ ಸಾಗುತ್ತಿರುವ ಅನುಭವ ಮಂಟಪ ಉತ್ಸವಕ್ಕೆ ಸರ್ವರಿಗೂ ಆಹ್ವಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಕಾಲೇಜಿನ ಪ್ರಾಂಶುಪಾಲರಾದ ಶರಣ ಮಾರುತಿ ರೆಡ್ಡಿ ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಿರುವ ಅನುಭವ ಮಂಟಪದ ಕಾರ್ಯ ದೂಡ್ಡದು. ಇಂತಹ ಒಳ್ಳೆಯ ಸತ್ಕಾರಗಳು ಮಾಡುತ್ತಿರುವುದು ಹೆಮ್ಮೆ ಪಡುವ ಸಂಗತಿಯಾಗಿದೆ. ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಅದರಂತೆ ಬದುಕಿದರು.ಅವರಂತೆ ಇಂದಿನ ಅನುಭವ ಮಂಟಪವೂ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅಯ್ಯಪ್ಪ ಪದವಿ ಕಾಲೇಜಿನ ಪ್ರಾಂಶುಪಾಲರಾದ ಎನ್ ಎಸ್ ಮಲ್ಲಶೆಟ್ಟಿ, ಉಪನ್ಯಾಸಕರಾದ ಭೀಮಶೆಟ್ಟಿ ವಡ್ಡನಕೇರಾ, ಮಾಹಾದೇವ ಗೌಳಿ, ಮಲ್ಲಿಕಾರ್ಜುನ ಹೊನ್ನಾ, ಸಂಗೀತಾ ಪಾಟೀಲ್, ಅರವಿಂದ ನಾಟೇಕರ್,ರಾಜೇಂದ್ರ ಚವ್ಹಾಣ,ಓಂಕಾರ ರೆಡ್ಡಿ ಸಲಗರ, ಮೋಯಿಜೂದ್ದೀನ್, ಲಕ್ಷ್ಮಿದೇವಿ ಸೇರಿದಂತೆ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಚನ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನೇಮಾವತಿ ರಾಜಶೇಖರ,ದ್ವಿತೀಯ ಸ್ಥಾನ ಪಡೆದ ಸಂದೀಪ್ ಕಂಟೆಪ್ಪ,ತೃತೀಯ ಸ್ಥಾನ ಪಡೆದ ವೈಷ್ಣವಿ ರಾಜಕುಮಾರ ರವರುಗಳಿಗೆ ತಲಾ ರೂ1000,500,300 ಗಳೊಂದಿಗೆ ಪ್ರಶಸ್ತಿ ಪತ್ರ ಹಾಗೂ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ವಚನ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಪುಸ್ತಕಗಳು ನೀಡಲಾಯಿತು.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…