ಬಿಸಿ ಬಿಸಿ ಸುದ್ದಿ

ಜೈಪುರ ಸಾಹಿತ್ಯ ಉತ್ಸವಕ್ಕೆ ಜಗತ್ತಿನ ಖ್ಯಾತ ಲೇಖಕರು, ಕವಿಗಳು, ಭಾಷಾಂತರಕಾರರು ಭಾಗಿ

ಬೆಂಗಳೂರು: ಸಾಹಿತ್ಯವು ಸಮಾಜ, ಅದರ ಜನರು ಮತ್ತು ಅವರ ಸಂಸ್ಕೃತಿಗಳ ಪ್ರತಿಬಿಂಬವಾಗಿದೆ. ಕಳೆದ 15 ವರ್ಷಗಳಿಂದ ಜೈಪುರ ಸಾಹಿತ್ಯ ಉತ್ಸವವು ಭಾಷೆಗಳ ವೈವಿಧ್ಯತೆಯನ್ನು ಪ್ರತಿನಿಧಿಸುವ ಮತ್ತು ಅನುವಾದಿತ ಸಾಹಿತ್ಯ ಕೃತಿಗಳನ್ನು ಪರಿಚಯಿಸುವ ಒಂದು ಅಂತರ್ಗತವಾದ ವೇದಿಕೆಯಾಗಿ ಹೊರಹೊಮ್ಮುತ್ತಾ ಬಂದಿದೆ. ಭಾಷಾಂತರವು ವಿಭಿನ್ನ ಸಂಸ್ಕೃತಿಗಳನ್ನು ಪರಸ್ಪರ ಸಂಪರ್ಕಿಸುವ ನಿಟ್ಟಿನಲ್ಲಿ, ಸಂವಹನ ನಡೆಸಲು ಹಾಗೂ ಉತ್ಕೃಷ್ಟಗೊಳಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ. 2023 ರ ಜೈಪುರ ಸಾಹಿತ್ಯ ಉತ್ಸವದಲ್ಲಿ ಜಾಗತಿಕ ಮಟ್ಟದ ಹಲವಾರು ಖ್ಯಾತನಾಮ ಭಾಷಾಂತರಕಾರರ ಪಾಲ್ಗೊಳ್ಳುವಿಕೆಯನ್ನು ಕಾಣಬಹುದಾಗಿದೆ. ಈ ಪ್ರತಿಷ್ಠಿತ ಸಾಹಿತ್ಯ ಉತ್ಸವವು ಜೈಪುರದ ಅಮೇರ್ ನ ಹೊಟೇಲ್ ಕ್ಲಾರ್ಕ್ಸ್ ನಲ್ಲಿ 2023 ರ ಜನವರಿ 19 ರಿಂದ 23 ರವರೆಗೆ ನಡೆಯಲಿದೆ.

ಈ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳುವ ಉಪನ್ಯಾಸಕರ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಪ್ರಮುಖವಾಗಿ ಪ್ರಶಸ್ತಿ ವಿಜೇತರಾದ ಪೋರ್ಚುಗೀಸ್ ನ ಲೇಖಕರಾದ ಅನಾ ಫಿಲೋಮಿನಾ ಅಮರಾಲಿ, ಹೆಸರಾಂತ ಪತ್ರಕರ್ತ, ಲೇಖಕ ಮತ್ತು ಭಾಷಾಂತರಕಾರ ಅರುನವ ಸಿನ್ಹಾ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅರುಣ ಚಕ್ರವರ್ತಿ, ಕಾದಂಬರಿಕಾರ ದಿಬೇಕ್ ದೇಬ್ರಾಯ್, ಇಟಲಿಯ ಲೇಖಕ ಜಾರ್ಜಿಯೋ ಮೊಂಟೆಫೊಸ್ಚಿ, ಹೆಸರಾಂತ ದ್ವಿಭಾಷಾ ಸಂಪಾದಕ ಮಣಿ ರಾವ್, ಲೇಖಕ ಮತ್ತು ಭಾಷಾಂತರಕಾರರಾದ ಮನೀಷಾ ಚೌಧರಿ, ಭಾಷಾಂತಕಾರ ಮತ್ತು ಅಂಕಣಕಾರ ಮಿನಿ ಕೃಷ್ಣನ್, ಪದ್ಮಭೂಷಣ ಪುರಸ್ಕೃತ ಮೃದಿ ಕೀರ್ತಿ, ಸಂಗೀತ ರಾಯಭಾರಿ & ಯುಎಇ ಮತ್ತು ಈಜಿಪ್ಟ್ ನ ಭಾರತದ ರಾಯಭಾರಿ ನವದೀಪ್ ಸೂರಿ, ಪ್ರಕಾಶಕ ಮತ್ತು ಭಾಷಾಂತರಕಾರ ಆಸ್ಕರ್ ಪುಜೋಲ್, ಭಾಷಾಂತರ ಕ್ಷೇತ್ರದಲ್ಲಿ ಖ್ಯಾತರಾಗಿರುವ ರಿಟಾ ಕೊಠಾರಿ, ಭಾರತೀಯ ಸಮಕಾಲೀನ ಬರಹಗಾರ ಮತ್ತು ಕಲಾವಿದ ಸಾಜ್ ಅಗರ್ವಾಲ್, ಕಾದಂಬರಿಕಾರರಾದ ಸಾಕ್ಷ್ಯಾ ಜೈನ್, ಖ್ಯಾತ ಮಹಿಳಾ ಲೇಖಕಿ ಊರ್ವಶಿ ಬುಟಾಲಿಯಾ, ಕಾದಂಬರಿಕಾರರಾದ ವಿನೀತ್ ಗಿಲ್ ಮತ್ತು ಖ್ಯಾತ ಕವಿ, ಸಂಗೀತಗಾರ ಹಾಗೂ ಸಿನಿಮಾ ತಜ್ಞ ಯತೀಂದ್ರ ಮಿಶ್ರಾ ಸೇರಿದಂತೆ ಇನ್ನೂ ಹಲವಾರು ಗಣ್ಯರು ಇದ್ದಾರೆ.

ವಿಶ್ವದ 16 ನೇ ಆವೃತ್ತಿಯ ಈ `ಅತ್ಯದ್ಭುತವಾದ ಸಾಹಿತ್ಯ ಪ್ರದರ್ಶನ’ದಲ್ಲಿ ಹಲವಾರು ಖ್ಯಾತನಾಮ ಪ್ರಶಸ್ತಿ ವಿಜೇತ ಕವಿಗಳೂ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಪ್ರಮುಖರೆಂದರೆ 2013 ರಲ್ಲಿ ದಕ್ಷಿಣ ಏಷ್ಯಾ ಕವಿಗೋಷ್ಠಿಯಲ್ಲಿ ಸಾರ್ಕ್ ಸಾಹಿತ್ಯ ಪ್ರಶಸ್ತಿ ಪಡೆದಿದ್ದ ಅಭಯ್ ಕೆ, ಕಾದಂಬರಿಕಾರ, ಸಾಹಿತ್ಯ ಪತ್ರಕರ್ತ ಮತ್ತು ಭಾಷಾಂತರಕಾರರಾದ ಅನುಪಮ ರಾಜು, ಎಸ್ಟೋನಿಯನ್ ಕವಿ ಡೊರಿಸ್ ಕರೆವಾ ಮತ್ತು ಇಂಗ್ಲೀಷ್ ಪೆನ್ ಟ್ರಾನ್ಸ್ ಲೇಟ್ಸ್ ಅವಾರ್ಡ್ ವಿಜೇತರಾದ ಕೊ ಕೊ ಥೆಟ್ ಇದ್ದಾರೆ.

ಇದಲ್ಲದೇ, ಈ ಹಿಂದೆ ಪ್ರಕಟಿಸಲಾಗಿರುವ ಉಪನ್ಯಾಸಕರ ಪಟ್ಟಿಯಲ್ಲಿ ಡೈಸಿ ರಾಕ್ ವೆಲ್, ಅನಾಮಿಕಾ, ಅನು ಸಿಂಗ್ ಚೌಧರಿ, ನವತೇಜ್ ಸರ್ನಾ, ಜೆರ್ರಿ ಪಿಂಟೋ, ರಾಣಾ ಸಾಫ್ವಿ ಮತ್ತು ಟಿಫನಿ ಸಾಒ ಸೇರಿದಂತೆ ಹಲವಾರು ಮಂದಿ ಸೇರಿದ್ದಾರೆ.

emedialine

Recent Posts

ಮತದಾನ ಮಾಡುವುದುನಮ್ಮ ಹಕ್ಕು ಮತ್ತು ಕರ್ತವ್ಯ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ ಅವರು ನೀಡಿರುವ ಸಂವಿಧಾನದ ಮೂಲಕ ನಮಗೆ ಹಕ್ಕು ಮತ್ತ ಕರ್ತವ್ಯಗಳು ಪ್ರಾಪ್ತವಾಗಿವೆ. ಹಾಗಾಗಿ ಮತದಾನ…

4 hours ago

EVM,VV.ಪ್ಯಾಟ್ ಮತಯಂತ್ರಗಳ ಅಂತಿಮ ಸಿದ್ಧತೆ ಕಾರ್ಯ ಭರದಿಂದ‌ ಸಾಗಿದೆ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಮೇ 7 ರಂದು ನಡೆಯಲಿರುವ 05-ಗುಲಬರ್ಗಾ (ಪ.ಜಾ.) ಲೋಕಸಭಾ ಕ್ಷೇತ್ರದ ಮತದಾನಕ್ಕೆ ಸಿದ್ಧತೆಗಳು ಭರದಿಂದ ಸಾಗಿದ್ದು, ಇಂದು ಕ್ಷೇತ್ರದ…

4 hours ago

ಸುಬ್ರಾವ್ ಕುಲಕರ್ಣಿ ಅವರ ಕಥೆಗಳು ಮಾನವೀಯತೆ ಗುಣ ಹೊಂದಿವೆ: ಡಾ.ಜಯದೇವಿ ಗಾಯಕವಾಡ

ಕಲಬುರಗಿ: ಸಾಹಿತಿ,ಕವಿ,ಕಥೆಗಾರರಿಗೆ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅನುಕಂಪ ಇರಬೇಕು.ಆ ಸಾಮಾಜಿಕ ವ್ಯವಸ್ಥೆಯ ನೋವುಗಳು ಇರದಿದ್ದರೆ ಕಂಡ ಅನುಭಗಳಿಗೆ ಕಥಾ ಹಂದರ…

4 hours ago

ಕಸಾಪದಿಂದ ತತ್ವಪದ ಸಾಹಿತ್ಯ ಸಮ್ಮೇಳನ ಆರಂಭಕ್ಕೆ ಕ್ಷಣಗಣನೆ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಬಾರಿಗೆ `ಜಿಲ್ಲಾ ಮಟ್ಟದ ತತ್ವಪದ ಸಾಹಿತ್ಯ ಸಮ್ಮೇಳನ’ವನ್ನು ಏ. 28 ರಂದು…

4 hours ago

ಬ್ರಾಹ್ಮಣರ ಮೀಸಲಾತಿ ಜಾರಿಗೆ ಕಂಕಣ ಬದ್ಧ: ಡಾ.ಉಮೇಶ್ ಜಾಧವ್

ಕಲಬುರಗಿ: ಆರ್ಥಿಕವಾಗಿ ಹಿಂದುಳಿದ ಸಮಾಜಗಳಿಗೆ ಕೇಂದ್ರ ಸರಕಾರವು ಘೋಷಣೆ ಮಾಡಿದ ಮೀಸಲಾತಿಯಡಿ ಬ್ರಾಹ್ಮಣರು ಈ ಹಕ್ಕು ಪಡೆಯಲು ಕರ್ನಾಟಕದಲ್ಲಿ ವಂಚಿತವಾಗಿರುವುದಕ್ಕೆ…

4 hours ago

‘ಬ್ಯಾಟ್’ ಚಿನ್ಹೆಗೆ ಮತ ಹಾಕುವಂತೆ ಮನವಿ: ರೈತರ ಹೃದಯ ತಟ್ಟಿದ ಎಸ್‍ಯುಸಿಐ ಅಭ್ಯರ್ಥಿ ಶರ್ಮಾ

ವಾಡಿ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಅಬ್ಬರದ ಪ್ರಚಾರದ ನಡುವೆ ಸದ್ದಿಲ್ಲದೆ ಸಿಡಿದೆದ್ದಿರುವ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್…

4 hours ago