ಬಿಸಿ ಬಿಸಿ ಸುದ್ದಿ

ರಾಮಗಡ ನಾಗರಿಕರ ಹೋರಾಟ ಸಮಿತಿಯಿಂದ ಆಯುಕ್ತರಿಗೆ ಮನವಿ

ಶಹಾಬಾದ: ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಸಾವನ್ನಾಪ್ಪಿದ ಯುವತಿಯರ ಕುಟುಂಬಕ್ಕೆ ಪರಿಹಾರ ನೀಡಲು ಹಾಗೂ ಆಶ್ರಯ ಕಾಲೋನಿ ರಾಮಗಡ ನಿವಾಸಿಗಳ ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹಿಸಿ ರಾಮಗಡ ನಾಗರಿಕರ ಹೋರಾಟ ಸಮಿತಿಯ ನಿಯೋಗದಲ್ಲಿ ನಗರ ಸಭೆ ಆಯುಕ್ತರಾದ ಸುರೇಶ್ ವರ್ಮಾ ಅವರಿಗೆ ಮನವಿ ಸಲ್ಲಿಸಿದರು.

ನಗರದ ಹೊರ ಭಾಗದಲ್ಲಿರುವ ಅಲಸ್ಟಮ್ ಕಂಪನಿಯ ಹಿಂದುಗಡೆ ಇರುವ ಆಶ್ರಯ ಕಾಲೋನಿ ರಾಮಗಡ ಏರಿಯಾದಲ್ಲಿ ವಾಸಿಸುವ ಮಾಣಿಕಮ್ಮ ಸಾಯಪ್ಪ ದಾಸರ (20 ವರ್ಷ) ಹಾಗೂ ಕೀರ್ತಿಕಾ ರಾಜೇಶ (12 ವರ್ಷ) 11 ರಂದು ರೈಲು ಹಳಿಗಳ ಪಕ್ಕದಲ್ಲಿ ಇದ್ದ ಹೊಂಡದ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಾಪ್ಪಿದ್ದಾರೆ. ಎರಡು ಕುಟುಂಬಗಳ ಪರಿಸ್ಥಿತಿಯು ಬಹಳ ಬಡತನದಿಂದ ಕೂಡಿದೆ. ಒಂದು ತಿಂಗಳ ನಂತರ ಮದುವೆಯಾಗಬೇಕಿದ್ದ ಯುವತಿ ಮಾಣಿಕಮ್ಮಳ ಸಾವು ಅವರ ಕುಟುಂಬಕ್ಕೆ ಬಹಳ ದು:ಖದ ಸಂಗತಿಯಾಗಿದೆ.

ಮನೆಯಲ್ಲಿದ್ದ ಅಜ್ಜಿಗೆ ಆಸರೆಯಾಗಿದ್ದ ಮೊಮ್ಮಗಳು ಕೀರ್ತಿಕಾಳ ಸಾವು ಬಹಳ ದು:ಖದ ವಿಷಯವಾಗಿದೆ. ಸರಕಾರವು ಕೂಡಲೇ ಎರಡು ಕುಟುಂಬಕ್ಕೆ ಪರಿಹಾರವನ್ನು ನೀಡಬೇಕೆಂದು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆಸರೆಯಾಗಬೇಕೆಂದು ರಾಮಗಡ ನಾಗರಿಕರ ಹೋರಾಟ ಸಮಿತಿಯ ಸಂಚಾಲಕರಾದ ರಾಘವೇಂದ್ರ ಎಂ.ಜಿ ಹಾಗೂ ನಾಗಪ್ಪ ಖಣದಾಳ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಅಲ್ಲದೆ, ಆಶ್ರಯ ಕಾಲೋನಿ ರಾಮಗಡ ಪ್ರದೇಶಕ್ಕೆ ಯಾವುದೇ ರೀತಿಯ ನಾಗರಿಕ ಸೌಲಭ್ಯಗಳು ಸಿಗುತ್ತಿಲ್ಲ. ಏರಿಯಾಕ್ಕೆ ಸರಿಯಾದ ರಸ್ತೆಗಳಿಲ್ಲ. ಪೂರ್ಣ ಪ್ರಮಾಣದಲ್ಲಿ ಚರಂಡಿಯ ವ್ಯವಸ್ಥೆ ಇಲ್ಲ. ಇಡೀ ಬಡಾವಣೆಯನ್ನು ಸಮಗ್ರವಾಗಿ ಲೆಕ್ಕಕ್ಕೆ ತೆಗೆದುಕೊಂಡು ರಸ್ತೆ ಹಾಗೂ ರಸ್ತೆ ಬದಿ ಚರಂಡಿಗಳನ್ನು ತುರ್ತಾಗಿ ನಿರ್ಮಿಸಬೇಕಾಗಿದೆ. ಮತ್ತು ಬಡಾವಣೆಯಲ್ಲಿ ಸಮರ್ಪಕವಾಗಿ ಬೀದಿ ದೀಪಗಳ ವ್ಯವಸ್ಥೆ ಇಲ್ಲ. ಸರಿಯಾದ ಸಮಯದಲ್ಲಿ ಬೊರವೆಲ್ಗಳ ರಿಪೇರಿಯಾಗುತ್ತಿಲ್ಲ, ಎಲ್ಲಾ ಸಮಸ್ಯೆಗಳಿಗೆ ಕಾರಣ ಬಡಾವಣೆಯು ಹಲವಾರು ವಾರ್ಡಗಳಿಗೆ ಹರಿದು ಹಂಚಿ ಹೋಗಿದೆ.

ಯಾವ ಸದಸ್ಯರು ಕೂಡಾ ಸಮಗ್ರವಾಗಿ ರಾಮಗಡ ಬಗ್ಗೆ ಕಾಳಜಿ ತೋರುತ್ತಿಲ್ಲ. ರಾಮಗಡಗೆ ಪ್ರತ್ಯಕವಾಗಿ ಒಂದು ವಾರ್ಡ್ ಆಗಬೇಕಾಗಿದೆ. ರಾಮಗಡಗೆ ಮೂಲಭೂತ  ಸೌಲಭ್ಯಗಳನ್ನು ಒದಗಿಸದೇ ಇದ್ದ ಪಕ್ಷದಲ್ಲಿ ಬರುವ ದಿನಗಳಲ್ಲಿ ರಾಮಗಡ ನಾಗರಿಕ ಹೋರಾಟ ಸಮಿತಿಯಿಂದ ಏರಿಯಾದ ಎಲ್ಲಾ ಜನರನ್ನು ಸಂಘಟಿಸಿ ನಗರ ಸಭೆಯ ಮುಂದೆ ಪ್ರತಿಭಟನೆ ಮಾಡುವದಾಗಿ ತಿಳಿಸಿದರು.

ರಾಮಗಡ ನಾಗರಿಕರ ಹೋರಾಟ ಸಮಿತಿಯ ನಿಯೋಗದಲ್ಲಿ ರಾಘವೇಂದ್ರ ಎಂ.ಜಿ, ನಾಗಪ್ಪ ಖನದಾಳ, ವಿಜಯಕುಮಾರ ಹುಲಿಯರ್, ಮಹೆಬೂಬ ಕಲಗುರ್ತಿ, ಶಾಮರಾವ ಕನಕ, ಬಸವರಾಜ ದೇವಕರ್, ಆನಂದ ಹೆಚ್.ಡಿ. ರಮೇಶ ದೇವಕರ್, ಯಂಕಪ್ಪ ಕೆಕನ್ ಭಾಗವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

7 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

17 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

17 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

17 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago