ಸುರಪುರ: ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕಕ್ಕೆ ನಗರದ ಟೈಲರ್ ಮಂಜಿಲ್‍ನಲ್ಲಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಜಿಲ್ಲಧ್ಯಕ್ಷ ಮಲ್ಲಿಕಾರ್ಜುನ ಜಲಪ್ಪನೋರ ಮಾತನಾಡಿ,ನಮ್ಮ ಸಂಘಟನೆಗೆ ನೂತನ ಸುರಪುರ ತಾಲೂಕು ಅಧ್ಯಕ್ಷರನ್ನಾಗಿ ಇಂದು ಮಲ್ಲು ನಾಯಕ ಕಬಾಡಗೇರ ಅವರನ್ನು ನೇಮಕಗೊಳಿಸಲಾಗಿದ್ದು,ಈಗಾಗಲೇ ಅನೇಕ ವರ್ಷಗಳಿಂದ ನಾಡು ನುಡಿಯ ಸೇವೆಯಲ್ಲಿ ತೊಡಗಿಕೊಂಡಿರುವ ಮಲ್ಲು ನಾಯಕ ಅವರು ನಮ್ಮ ಸಂಘಟೆಗೆ ನೂತನ ತಾಲೂಕು ಅಧ್ಯಕ್ಷರಾಗಿ ಸಾರಥ್ಯ ವಹಿಸಿಕೊಂಡಿರುವುದು ಸಂತೋಷದ ಸಂಗತಿಯಾಗಿದೆ,ತಾಲೂಕಿನಾದ್ಯಂತ ಸಂಘಟನೆಯನ್ನು ಬೆಳೆಸುವ ಜೊತೆಗೆ ನಾಡು ನುಡಿಯ ಕುರಿತು ಯಾವುದೇ ಸಂದರ್ಭದಲ್ಲಿ ತಾವೆಲ್ಲರು ಹೋರಾಟದಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು.
ನಂತರ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಎಲ್ಲರ ಅಭಿಪ್ರಾಯದಂತೆ ಮಲ್ಲು ನಾಯಕ ಕಬಾಡಗೇರ ಅವರನ್ನು ನೇಮಕಗೊಳಿಸಿ ಘೋಷಣೆ ಮಾಡಿದರು.ಈ ಸಂದರ್ಭದಲ್ಲಿ ಯಾದಗಿರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಕರೆಮ್ಮ,ಯಾದಗಿರಿ ತಾಲೂಕು ಉಪಾಧ್ಯಕ್ಷ ಯೇಸುಪುತ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಭೆಯಲ್ಲಿ ಮುಖಂಡರಾದ ಗೋಪಾಲ ನಾಯಕ ಸತ್ಯಂಪೇಟೆ,ತಿಪ್ಪಣ್ಣ ಪಾಟೀಲ್,ಹೊನ್ನಪ್ಪ ಬೈರಿಮರಡಿ,ಚಂದ್ರು ದೇವರಗೋನಾಲ,ಶಿವರಾಜ ವಗ್ಗಾರ ದೀವಳಗುಡ್ಡ,ರಾಘು ಗೋಗಿಕೇರ,ರಾಘು ಕಟ್ಟಿಮನಿ,ರವಿಚಂದ್ರ ಬಿಚ್ಚದಕೇರಾ,ರಂಗನಾಥ ರಾಮಬಾಣ,ಮೌನೇಶ ಶಿಬಾರಬಂಡಿ,ಸೋಮು ಕೆಂಭಾವಿ,ತಿಪ್ಪಣ್ಣ ಕಾನಿಕೇರ,ಶೇಖರ ನಾಯಕ ಬಿಚ್ಚದಕೇರಾ,ಶೇಖರ ಗಿರಣಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…