ಯಡ್ರಾಮಿ: ತಾಲ್ಲೂಕ ಸರ್ಕಾರಿ ಆಸ್ಪತ್ರೆ ಆರೋಗ್ಯ ಕೇಂದ್ರದಲ್ಲಿಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು (C.E.O) ಸಮುದಾಯ ಆರೋಗ್ಯ ಕೇಂದ್ರ ಯಡ್ರಾಮಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಸಿದ್ದು ಪಾಟೀಲ್ ರವರು ತಾವು ವೈಯಕ್ತಿಕವಾಗಿ 200 ಟಿ.ಬಿ ರೋಗಿಗಳಿಗೆ 6 ತಿಂಗಳವರೆಗೆ ಅವರ ಆರೋಗ್ಯ ಸುಧಾರಣೆಗಾಗಿ ಪೌಷ್ಟಿಕಾಂಶಯುಕ್ತ ಪೌಡರ್ ನೀಡಲು ದತ್ತು ತೆಗೆದುಕೊಂಡಿದ್ದು. ಈ ಸಮಾಜ ಮುಖಿ ಮಹತ್ಕಾರ್ಯವನ್ನು ಮಾನ್ಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು (C.E.O) ಜಿಲ್ಲಾ ಪಂಚಾಯತ್ ಕಲಬುರಗಿ ಇವರ ಅಮೃತ ಹಸ್ತದಿಂದ ಪ್ರೋಟೀನ್ ಪೌಡರನ್ನು ಟಿ.ಬಿ ರೋಗಿಗಳಿಗೆ ವಿತರಿಸಲಾಯಿತು.
ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಮಹತ್ವದ ಕಾರ್ಯಕೈಗೊಂಡಿದ್ದು 2025ರ ವಳಗೆ ಕ್ಷಯ ಮುಕ್ತ ಭಾರತದ ಮಾಡಲು ಕ್ಷಯ ಮಿತ್ರ ಆ್ಯಫ್ ಮೂಲಕ ನೊಂದಾಯಿಸಿಕೊಂಡು ಕ್ಷಯರೋಗದಿಂದ ಬಳಲುತ್ತಿರುವವರಿಗೆ ಸಹಕಾರಿ ಅಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಸಿದ್ದು ಪಾಟೀಲ್ , ಮಕ್ಕಳ ತಜ್ಞರು ಡಾ.ವಿನೀತ ಕುಲಕರ್ಣಿ. ತಾಲೂಕ ಟಿಬಿ ಮೇಲ್ವಿಚಾರಕರು ಅನಂದ ದೊಡ್ಡಮನಿ. ಆರ್ ಕೆಎಸ್ ಕೆ ಆಪ್ತಸಂಲೋಚಕ ಅಶೋಕ್ ಬಡಿಗೇರ್ .
ಐಸಿ ಟಿಸಿ ಆಪ್ತಸಮಾಲೋಚಕಿ ಅಂಬೀಕಾ ಜಾನೆ. ಕ್ಷಯರೋಗಿಗಳು, ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…