ಶಹಾಬಾದ: ಧೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಅಕ್ಕಮಹಾದೇವಿಯು ಇಂದಿನ ಮಹಿಳೆಯರಿಗೆ ಆದರ್ಶಪ್ರಾಯ ಎಂದು ಶಿರಗುಪ್ಪಾದ ಬಸವ ಚಿಂತಕರಾದ ಬಸವರಾಜ ವೆಂಕಟಾಪೂರ ಶರಣರು ಹೇಳಿದರು.
ಅವರು ಬುಧವಾರ ಭಂಕೂರಿನ ಬಸವ ಸಮಿತಿಯಲ್ಲಿ ಬುತ್ತಿ ಬಸವಲಿಂಗ ಪ್ರತಿಷ್ಠಾಪನದ ಬೆಳ್ಳಿ ಮಹೋತ್ಸವದ ಪ್ರಯುಕ್ತ ವಚನ ಸಾಹಿತ್ಯದಲ್ಲಿ ಆಧ್ಯಾತ್ಮ ಚಿಂತನ ಕಾರ್ಯಕ್ರಮದ ಪ್ರವಚನಕಾರರಾಗಿ ಮಾತನಾಡಿದರು.
ಅಕ್ಕನ ಜೀವನ ಘಟ್ಟಗಳು ಹೇಳುವದಾದರೆ ಅದೊಂದು ಕಠಿಣ ಸಾಧನೆಯ ದಾರಿ.ಉಡುತಡಿಯಲ್ಲಿ ಜನಿಸಿದ ಅಕ್ಕ ಮಹಾದೇವಿ ಬಾಲ್ಯದಿಂದಲೂ ಶಿವಭಕ್ತೆಯಾಗಿದ್ದಳು.ಲಿಂಗವನ್ನೇ ಪತಿಯಾಗಿ ಭಾವಿಸಿ ಮಾನಸಿಕವಾಗಿ ತನ್ನ ಆರಾಧ್ಯದೈವ ಚೆನ್ನಮಲ್ಲಿಕಾರ್ಜುನನ್ನೇ ಮದುವೆಯಾಗಿರುತ್ತಾಳೆ.ಆದರೆ ಕೌಶಿಕ ರಾಜ ಆಕೆಯನ್ನು ನೋಡಿ ಮೋಹಗೊಂಡು ರಾತ್ರಿಯೆಲ್ಲ ಆಕೆಯ ನೆನಪಿನಲ್ಲಿಯೇ ಕನವರಿಸುತ್ತಿರುತ್ತಾನೆ.ಆಕೆಯ ರೂಪಕ್ಕೆ ಮಾರು ಹೋದ ರಾಜ ಆಕೆಯನ್ನೇ ಮದುವೆಯಾಗಲು ಬಯಸುತ್ತಾನೆ. ಕುಟುಂಬಸ್ಥರು ರಾಜ ಕ್ಕಮಹಾದೇವಿಯನ್ನು ಕೊಡಲು ನಿರಾಕರಿಸಿತ್ತಾರೆ. ಆದರೆ ಮದುವೆಯನ್ನು ನಿರಾಕರಿಸಿದರೆ ತನ್ನ ಕುಟುಂಬಕ್ಕೆ ಒದಗಬಹುದಾದ ಆಪತ್ತನ್ನು ಕಂಡು ಮಹಾದೇವಿ ಶಿವಧ್ಯಾನಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂಬ ಷರತ್ತಿನೊಂದಿಗೆ ಅರಮನೆಗೆ ಹೋಗುತ್ತಾಳೆ.
ಕೌಶಿಕ ರಾಜ ಆ ಷರತ್ತನ್ನು ಮುರಿದು, ಬಲವಂತಕ್ಕೆ ಇಳಿಸಿದಾಗ ಮಹಾದೇವಿ ತೋರಿದ ಪ್ರತಿಭಟನೆಯ ರೀತಿ ಇಂದಿಗೂ ಲೋಕವನ್ನು ಬೆಚ್ಚಿ ಬೀಳಿಸುತ್ತದೆ.ಇಂದಿಗೂ ಯಾವ ಹೆಣ್ಣು ಈ ರೀತಿಯ ಕಷ್ಟಕ್ಕೆ ಒಳಗಾಗಬಾರದು.ಅಕ್ಕ ಕಷ್ಟದಲ್ಲಿಯೇ ತನ್ನ ಮನೋಬಲವನ್ನು ಹೆಚ್ಚಿಸಿಕೊಂಡು ಹೋರಾಡಿದ ಪರಿ ಮಾತ್ರ ಅದ್ಭುತ. ತಕ್ಷಣವೇ ಬಟ್ಟೆಯನ್ನು ಬಿಸಾಕಿ ದಿಗಂಬರೆಯಾಗಿ,ನಂತರ ಕೇಶಾಂಬರೆಯಾಗಿ ಅಲ್ಲಿಂದ ಹೊರಬರುತ್ತಲೇ ಜೀವನದಲ್ಲಿ ಅನುಭವಿಸಿದ ಕಷ್ಟವನ್ನು ವಚನಗಳ ಮೂಲಕ ಸಾರುತ್ತಾಳೆ.ಮುಂದೆ ಅನುಭವ ಮಂಟಪಕ್ಕೆ ಕಡೆಗೆ ಸಾಗುತ್ತಾಳೆ.ಆದರೆ ಅಕ್ಕಮಹಾದೇವಿ ಇಡೀ ಸ್ತ್ರಿ ಕುಲಕ್ಕೆ ಮಾದರಿ.ಅವಳ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದು ಹೇಳಿದರಲ್ಲೇ, ಬಸವಾದಿ ಶರಣು ಸರಳವಾಗಿ ಬದುಕುವುದರ ಜತೆಗೆ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು.
ಶರಣರ ಆದರ್ಶದಂತೆ ಸರಳಾಗಿ ಬದುಕುವ, ಸತ್ಯವನ್ನು ಹೇಳುವ, ಪರೋಪಕಾರ ಬುದ್ಧಿಯನ್ನು ಮೈಗೂಡಿಸಿಕೊಳ್ಳುವ, ಪ್ರಾಮಾಣಿಕತೆಯನ್ನು ಮೆರೆಯುವಂತಹ ಜೀವನ ಮೌಲ್ಯಗಳನ್ನು ರೂಢಿಸಿಕೊಂಡರೆ ಸಾಮಾನ್ಯರೂ ಅಸಾಮಾನ್ಯರಾಗಬಹುದು. ಜನರ ಮನಸ್ಸಿನಲ್ಲಿ ದಾಖಲಾಗುವಂಥ ಕೆಲಸಗಳನ್ನು ನಾವು ಮಾಡಬೇಕು. ಆಗ ಬದುಕಿಗೆ ಮೌಲ್ಯ ಬರುವುದು. ಇದು ಕೇವಲ ಒಬ್ಬ ಬಸವಣ್ಣ, ಅಕ್ಕಮಹಾದೇವಿ, ಮಾತ್ರ ಸೀಮಿತವಲ್ಲ.ಮನಸ್ಸು ಮಾಡಿದರೆ ಪ್ರತಿಯೊಬ್ಬರೂ ಒಬ್ಬೊಬ್ಬ ಆದರ್ಶ ಪುರುಷರಾಗಬಹುದು ಎಂದು ಹೇಳಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…