ಕಲಬುರಗಿ: ಯಾವುದೇ ಒಂದು ಧರ್ಮಕ್ಕಿಂತ ಮಾನವೀಯ ಮೌಲ್ಯ ದೊಡ್ಡದು ಎಂಬ ವಿಚಾರಗಳನ್ನು ಮೌನೇಶ್ವರರು ತಮ್ಮ ವಚನಗಳಲ್ಲಿ ಸಾರಿದ್ದಾರೆ. ಮೌನೇಶ್ವರರ ವಚನಗಳು ಬಹಳ ಕಠೋರವಾದ ಸತ್ಯವನ್ನೇ ಹೇಳುತ್ತವೆ. ಇಂದಿನ ಸಮಾಜಕ್ಕೆ ಅವರ ವಚನಗಳು ಉಪಯುಕ್ತವಾಗಿದ್ದು, ಅವುಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಹೊಸ ಸಮಾಜವನ್ನು ನಿರ್ಮಾಣಕ್ಕೆ ಮುಂದಾಗಬೇಕೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಯ ಪ್ರಕಾಶನ ಕಮಲಾಪುರ ಬೆಣ್ಣೂರು, ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಹಾಗೂ ಸಂಶೋಧಕರ ವೇದಿಕೆ, ಹಂಪಿ, ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಶಿರಸಂಗಿ, ಶ್ರೀ ಗಾಯಿತ್ರಿ ವಿಶ್ವಕರ್ಮ ಶಿಲ್ಪಕಲಾ ಸಂಸ್ಥೆ, ಕಲಬುರಗಿ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜರುಗಿದ `ಶ್ರೀ ಮೌನೇಶ್ವರರ ವಚನಗಳ ಪ್ರಕಟಣೆಯ ಶತಮಾನೋತ್ಸವ ಪ್ರಯುಕ್ತ ವಚನಗಳ ಸರಣಿ ವಿಚಾರ ಸಂಕಿರಣದ `ಮೌನೇಶ್ವರರ ವಚನಗಳ ಅನುಸಂಧಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ದಕ್ಷಿಣ ಕಾಶೀ ಎನಿಸಿಕೊಂಡಿರುವ ತಿಂಥಣಿಯ ಮೌನೇಶ್ವರರು ಭಾವೈಕ್ಯತೆಯ ಹರಿಕಾರರಾಗಿದ್ದಾರೆ. ಅವರ ವಚನಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶನವಾಗಿವೆ. ಜಾತಿ, ಧರ್ಮ ಮೀರಿ ಸಮಾತೆಯ ತತ್ವಗಳ ಸಾರ ಮೌನೇಶ್ವರ ವಚನಗಳಲ್ಲಿ ಅಡಗಿವೆ. ಮೌನೇಶ್ವರನ ಆಯ್ದ ವಚನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ಇಂದಿನ ಹೊಸ ಪೀಳಿಗೆಗೆ ಹಂಚುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.
ಶ್ರೀ ಮೂರುಜಾವಧೀಶ್ವರ ಮಠಧ ಶ್ರೀ ಪ್ರಣವನಿರಂಜನ ಮಹಾಸ್ವಾಮಿಗಳು, ಶ್ರೀ ರಾಮಚಂದ್ರ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ, ಪ್ರಮುಖರಾದ ಅಮೃತ ವಿಶ್ವಕರ್ಮ ಹಳ್ಳಿ, ದೇವೇಂದ್ರ ವಿಶ್ವಕರ್ಮ ದೇಸಾಯಿಕಲ್ಲೂರ, ಸಾಹಿತಿ ದತ್ತಾತ್ರೇಯ ವಿಶ್ವಕರ್ಮ, ನರಸಿಂಗರಾವ ಹೇಮನೂರ, ಬಸವರಾಜ ಎಂ.ಬಡಿಗೇರ ವೇದಿಕೆ ಮೇಲಿದ್ದರು.
ನಂತರ ನಡೆದ ವಿಚಾರಗೋಷ್ಠಿಯಲ್ಲಿ ಮೌನೇಶ್ವರರ ಪವಾಡಗಳು ಕುರಿತು ಡಾ.ಕೈಲಾಸಪತಿ ಎಂ.ವಿಶ್ವಕರ್ಮ, ಮೌನೇಶ್ವರರ ಕ್ಷೇತ್ರ ಪರ್ಯಟನೆ ಕುರಿತು ಡಾ.ಲಕ್ಷ್ಮೀಕಾಂತ ಪಾಂಚಾಳ, ಮೌನೇಶ್ವರರ ವಚನಗಳಲ್ಲಿ ಸಮಕಾಲೀನ ಪ್ರಸ್ತುತತೆ ಕುರಿತು ಡಾ.ಮಹಾದೇವ ಬಡಿಗೇರ ಮಾತನಾಡಿದರು.
ವಿವಿಧ ಕ್ಷೇತ್ರದ ಪ್ರಮುಖರಾದ ಮಾನಯ್ಯಾ ಬಡಿಗೇರ, ಯಚ್ಚರೇಶ ಗುರುನಾಥರಾವ ಮಾಡ್ಯಾಳಕರ್, ಈರಣ್ಣ ಪಿ.ಕಂಬಾರ, ಮಹೇಶಕುಮಾರ ವಿಶ್ವಕರ್ಮ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಭಾಗವಹಿಸಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…