ಕಲಬುರಗಿ: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಇನ್‍ಟ್ಯಾಕ್ ಅಧ್ಯಾಯ ಇವುಗಳ ಸಂಯುಕ್ತ ಆಶ್ರಯದಲ್ಲಿ “ವಿಶ್ವಪರಂಪರೆ ಸಪ್ತಾಹ-22” ರ ಅಂಗವಾಗಿ ಮಳಖೇಡ ಕೋಟೆಯಲ್ಲಿ ಪರಂಪರೆ ನಡಿಗೆ ಹಾಗೂ ಪ್ರಾತ್ಯಕ್ಷೀತ ವೀಕ್ಷಣೆ ಕಾರ್ಯಕ್ರಮ ಜರುಗಿತು.
ಕರ್ನಾಟಕ ಹಾಗೂ ಭಾರತದಲ್ಲಿ ಬರುವ ಪ್ರಮುಖ ಪ್ರಾಚೀನ ಕೋಟೆಗಳಲ್ಲಿ ಇದು ಒಂದಾಗಿರುವ ಮಳಖೇಡ ಕೋಟೆ ನಮ್ಮ ಹೆಮ್ಮೆಯ ಪರಂಪರೆಯ ಪ್ರತೀಕವಾಗಿದೆ. ಅರಬ್ ಪ್ರವಾಸಿ ಸುಲೇಮಾನನ ವರದಿಯಂತೆ ಜಗತ್ತಿನ ಅತಿದೊಡ್ಡ ಹಾಗೂ ಶ್ರೇಷ್ಠ ರಾಜಧಾನಿಗಳಲ್ಲಿ ರೋಮ್, ಅರಬ್ ಚೀನಾ ಹಾಗೂ ರಾಷ್ಟ್ರಕೂಟರ ರಾಜ್ಯಗಳಾಗಿವೆ ಎಂದು ಡಾ.ಎಸ್.ಎಸ್.ವಾಣಿ ಅವರು ತಮ್ಮ ಪ್ರತ್ಯೇಕ್ಷಿತ ಉಪನ್ಯಾಸದಲ್ಲಿ ಹೇಳಿದರು.
ಕೋಟೆಯ ಪ್ರವೇಶ ದ್ವಾರದಿಂದ ಕಾಗಿಣಾ ನದಿಯ ದಂಡೆಯ ಮೇಲಿರುವ ಕೋಟೆ ಆಂಜನೇಯ ದೇವಸ್ಥಾನದ ವರೆಗಿನ ಪ್ರಮುಖ ಸ್ಮಾರಕಗಳ ಮಾಹಿತಿಯನ್ನು ಡಾ.ವಾಣಿ ಅವರು ನೀಡಿದರು.
ಡಾ.ರಾಜಾರಾಮ ಉಪನಿರ್ದೇಶಕರು ಪುರಾತತ್ವ ಸಂಗ್ರಾಹಾಲಯಗಳು ಮತ್ತು ಪರಂಪರೆ ಇಲಾಖೆ ಕಲಬುರಗಿ ಇವರು ಮಳಖೇಡ ಕೋಟೆಯ ಕುರಿತು ಹಾಗೂ ಇಲಾಖೆಯು ನಡೆಸಿರುವ ಪ್ರಗತಿಯ ಕೆಲಸ ಕಾರ್ಯಗಳು ಹಾಗೂ ಕಲ್ಯಾಣ ಕರ್ನಾಟಕದ ಪರಂಪರೆಯ ತಾಣಗಳ ಕುರಿತು ಕುರಿತು ಮಾಹಿತಿ ನೀಡಿದರು.
ಪರಂಪರೆ ನಡಿಗೆಯಲ್ಲಿಪ್ರಾಚಾರ್ಯರಾದ ಪೆÇ್ರೀ.ಅಶೋಕ ಶಾಸ್ತ್ರೀ, ಸರಕಾರಿ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಸರಕಾರಿ ಪದವಿ ಪೂರ್ವ ಕಾಲೇಜು ಮಳಖೇಡ ವಿದ್ಯಾರ್ಥಿಗಳು, ಉಪನ್ಯಾಸಕರು, ಇಲಾಖೆ ಹಾಗೂ ಇನ್‍ಟ್ಯಾಕ್‍ನ ಸದಸ್ಯರು ಭಾಗವಹಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…