ತೊಗರಿಗೆ ಆರಂಭದಲ್ಲಿ ಅನುದಾನ ನೀಡಿದ್ದು ಬಿಟ್ಟರೆ ಈಗ ಹಣವೇ ನೀಡಿಲ್ಲ. ತೊಗರಿ ಮಂಡಳಿಯಿಂದ ಈಗ ತೊಗರಿಯೂ ಖರೀದಿ ಮಾಡುತ್ತಿಲ್ಲ. ಬಿಳಿಯಾನೆಯಾಗಿರುವ ತೊಗರಿ ಮಂಡಳಿಗೆ ಈಗಲಾದರೂ ಕಾಯಕಲ್ಪ ಒದಗಿಸುವರೆ ಕಾದು ನೋಡಬೇಕಾಗಿದೆ ಎಂದು ಮಮಶೆಟ್ಟಿ ತಿಳಿಸಿದರು.
ಕಲಬುರಗಿ: ತೊಗರಿ ಬೆಳೆಗಾರರ ರಾಜ್ಯ ಮಟ್ಟದ ವಿಚಾರ ಸಂಕಿರಣ ಡಿ. 4ರಂದು ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದರು.
ತೊಗರಿಯ ನಾಡು ಎಂದು ಕರೆಯಿಸಿಕೊಳ್ಳುವ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದು, ರೈತರ ಸಂರಕ್ಷಣೆಗಾಗಿ, ತೊಗರಿ ಬೋರ್ಡ್ ಬಲವರ್ಧನೆ ಮಾಡಬೇಕು. ಡಾ.ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು, ಪ್ರತಿ ಕ್ವಿಂಟಲ್‍ಗೆ 12,000 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇವೇಳೆಯಲ್ಲಿ ಎಂಎಸ್‍ಪಿ ಕಾನೂನು ಜಾರಿ ಮಾಡಬೇಕು, ತೊಗರಿ ಕೇಂದ್ರ ತೆರೆಯಲು ಮುಂಜಾಗ್ರತವಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು, ನಟೆ ರೋಗದಿಂದ ತೊಗರಿ ಬೆಳೆ ಸಂರಕ್ಷಿಸಬೇಕು, ಅತಿವೃಷ್ಟಿ ಹಾಗೂ ಕೀಟ ಬಾಧೆಗೆ ತುತ್ತಾದ ತೊಗರಿ ಬೆಳೆÉಗಾರರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಈ ಭಾಗದ ರೈತರೊಂದಿಗೆ ಸಂವಾದ ನಡೆಸಲಾಗುವುದು ಎಂದು ವಿವರಿಸಿದರು.
ಈ ಮುಂಚೆ ತೊಗರಿ ಬೆಲೆ ಕುಸಿದಗ ಮಂಡಳಿ ಮಾರುಕಟ್ಟೆ ಪ್ರವೇಶಿಸಿ ತೊಗರಿ ಖರೀದಿಸುತ್ತಿತ್ತು. ಆದರೆ ಕ್ರಮೇಣ ತೊಗರಿ ಖರೀದಿ ಏಜೆನ್ಸಿಯಾಗಿ ನಫೆಡ್‍ಗೆ ನೀಡಿದ್ದರಿಂದ ಮಂಡಳಿ ಇದ್ದೂ ಇಲ್ಲದಂತಾಗಿದೆ. ಈಗ ಅದು ಹೆಸರಿಗೆ ಮಾತ್ರ ಉಪ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆಪಾದಿಸಿದರು.
ಸುಭಾಷ ಜೇವರ್ಗಿ, ಅಲ್ತಾಫ್ ಇನಾಂದಾರ, ಜಾವೆದ್ ಹುಸೈನಿ, ಎಂ.ಬಿ. ಸಜ್ಜನ್, ರಾಯಪ್ಪ ಹುರಮುಂಜಿ ಇದ್ದರು.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…