ಡಿ. 4ರಂದು ತೊಗರಿ ಬೆಳೆಗಾರರ ರಾಜ್ಯ ಮಟ್ಟದ ವಿಚಾರ ಸಂಕಿರಣ

0
22

ತೊಗರಿಗೆ ಆರಂಭದಲ್ಲಿ ಅನುದಾನ ನೀಡಿದ್ದು ಬಿಟ್ಟರೆ ಈಗ ಹಣವೇ ನೀಡಿಲ್ಲ. ತೊಗರಿ ಮಂಡಳಿಯಿಂದ ಈಗ ತೊಗರಿಯೂ ಖರೀದಿ ಮಾಡುತ್ತಿಲ್ಲ. ಬಿಳಿಯಾನೆಯಾಗಿರುವ ತೊಗರಿ ಮಂಡಳಿಗೆ ಈಗಲಾದರೂ ಕಾಯಕಲ್ಪ ಒದಗಿಸುವರೆ ಕಾದು ನೋಡಬೇಕಾಗಿದೆ ಎಂದು ಮಮಶೆಟ್ಟಿ ತಿಳಿಸಿದರು.

ಕಲಬುರಗಿ: ತೊಗರಿ ಬೆಳೆಗಾರರ ರಾಜ್ಯ ಮಟ್ಟದ ವಿಚಾರ ಸಂಕಿರಣ ಡಿ. 4ರಂದು ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದರು.

Contact Your\'s Advertisement; 9902492681

ತೊಗರಿಯ ನಾಡು ಎಂದು ಕರೆಯಿಸಿಕೊಳ್ಳುವ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದು, ರೈತರ ಸಂರಕ್ಷಣೆಗಾಗಿ, ತೊಗರಿ ಬೋರ್ಡ್ ಬಲವರ್ಧನೆ ಮಾಡಬೇಕು. ಡಾ.ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು, ಪ್ರತಿ ಕ್ವಿಂಟಲ್‍ಗೆ 12,000 ರೂ. ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇವೇಳೆಯಲ್ಲಿ ಎಂಎಸ್‍ಪಿ ಕಾನೂನು ಜಾರಿ ಮಾಡಬೇಕು, ತೊಗರಿ ಕೇಂದ್ರ ತೆರೆಯಲು ಮುಂಜಾಗ್ರತವಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು, ನಟೆ ರೋಗದಿಂದ ತೊಗರಿ ಬೆಳೆ ಸಂರಕ್ಷಿಸಬೇಕು, ಅತಿವೃಷ್ಟಿ ಹಾಗೂ ಕೀಟ ಬಾಧೆಗೆ ತುತ್ತಾದ ತೊಗರಿ ಬೆಳೆÉಗಾರರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಈ ಭಾಗದ ರೈತರೊಂದಿಗೆ ಸಂವಾದ ನಡೆಸಲಾಗುವುದು ಎಂದು ವಿವರಿಸಿದರು.

ಈ ಮುಂಚೆ ತೊಗರಿ ಬೆಲೆ ಕುಸಿದಗ ಮಂಡಳಿ ಮಾರುಕಟ್ಟೆ ಪ್ರವೇಶಿಸಿ ತೊಗರಿ ಖರೀದಿಸುತ್ತಿತ್ತು. ಆದರೆ ಕ್ರಮೇಣ ತೊಗರಿ ಖರೀದಿ ಏಜೆನ್ಸಿಯಾಗಿ ನಫೆಡ್‍ಗೆ ನೀಡಿದ್ದರಿಂದ ಮಂಡಳಿ ಇದ್ದೂ ಇಲ್ಲದಂತಾಗಿದೆ. ಈಗ ಅದು ಹೆಸರಿಗೆ ಮಾತ್ರ ಉಪ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಆಪಾದಿಸಿದರು.

ಸುಭಾಷ ಜೇವರ್ಗಿ, ಅಲ್ತಾಫ್ ಇನಾಂದಾರ, ಜಾವೆದ್ ಹುಸೈನಿ, ಎಂ.ಬಿ. ಸಜ್ಜನ್, ರಾಯಪ್ಪ ಹುರಮುಂಜಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here