ಸುರಪುರ :ಇಲ್ಲಿಯ ನಗರಸಭೆಯಲ್ಲಿ ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಬಳಿಯ ಮುಖ್ಯ ರಸ್ತೆಯಲ್ಲಿನ ಬಸವೇಶ್ವರ ವೃತ್ತದಲ್ಲಿನ ನೂತನ ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ನಗರಸಭೆಯಲ್ಲಿ ಅನುಮೋದನೆಗೊಂಡ ಹಿನ್ನೆಲಯಲ್ಲಿ ವೃತ್ತದಲ್ಲಿನ ನಾಮಫಲಕಕ್ಕೆ ಶಾಸಕ ರಾಜೂಗೌಡ ಗೌಡ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಂಗಂಪೇಟೆ ವೀರಶೈವ ಕಲ್ಯಾಣ ಮಂಟಪ ಹತ್ತಿರದ ಮುಖ್ಯ ರಸ್ತೆಯಲ್ಲಿ ಜಗಜ್ಯೋತಿ ಬಸವೇಶ್ವರರ ಅಶ್ವಾರೂಢ ಪುತ್ಥಳಿ ಪ್ರತಿಷ್ಠಾಪಿಸಲು ವೀರಶೈವ ಲಿಂಗಾಯತ ಸಮಾಜ ನಿರ್ಧರಿಸಿ ಸಮಾಜದ ತಾಲೂಕು ಘಟಕ ಅನುಮೋದನೆಗೆ ಕೋರಿ ನಗರಸಭೆಗೆ ಮನವಿ ಸಲ್ಲಿಸಿತ್ತು. ಬುಧವಾರ ಜರುಗಿದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪುತ್ಥಳಿ ಪ್ರತಿಷ್ಠಾಪನೆಗೆ ಅನುಮೋದನೆ ದೊರಕಿದೆ ಎಂದು ಹೇಳಿದರು.
ಜಗಜ್ಯೋತಿ ಬಸವೇಶ್ವರರು ನಾಡು ಕಂಡ ಸರ್ವ ಶ್ರೇಷ್ಠ ದಾರ್ಶನಿಕ, ಸಮ ಸಮಾಜದ ಹರಿಕಾರ ಅವರ ಪಂಚಲೋಹದ ಅಶ್ವಾರೂಢ ಪುತ್ಥಳಿ ಪ್ರತಿಷ್ಠಾಪನೆಗೆ ಸಮಾಜ ಮುಂದಾಗಿರುವುದು ಸ್ವಾಗತಾರ್ಹ. ನನ್ನ ಅಧಿಕಾರವಧಿಯಲ್ಲಿ ನಾನು ಎಲ್ಲಾ ಸಮುದಾಯಗಳಿಗೆ ಅನುದಾನ ದೊರಕಿಸಿಕೊಟ್ಟು ನ್ಯಾಯ ಒದಗಿಸಿದ್ದೇನೆ. ಪ್ರತಿಯೊಂದು ಜಾತಿ ಜನಾಂಗಕ್ಕೆ ಸಮುದಾಯ ಭವನ , ಕಲ್ಯಾಣ ಮಂಟಪ, ಶಾದಿಮಹಲ್ ನಿರ್ಮಿಸಿಕೊಟ್ಟಿದ್ದೇನೆ. ವೀರಶೈವ ಲಿಂಗಾ ಯತ ಸಮುದಾಯಕ್ಕೂ ಆದ್ಯತೆ ನೀಡಿರುತ್ತೇನೆ. ಸಮಾಜದ ಅಧ್ಯಕ್ಷ ಡಾ.ಸುರೇಶ ಸಜ್ಜನ್ ಕೋರಿಕೆ ಮೇರೆಗೆ ನೂತನ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸೂಕ್ತ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಸಮಾಜದ ಅಧ್ಯಕ್ಷ ಡಾ.ಸುರೇಶ ಸಜ್ಜನ್ ಮಾತನಾಡಿ, ಪುತ್ಥಳಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಫೆಬ್ರವರಿಯಲ್ಲಿ ಪ್ರತಿಷ್ಠಾಪಿಸುವ ಉದ್ದೇಶವಿದೆ. ಸಮಾರಂಭವನ್ನು ಸ್ಮರಣೀಯವಾಗಿಸಲು ಶೀಘ್ರವೇ ಸಮಾಜದ ಮುಖಂಡರ ಸಭೆ ಕರೆದು ನಿರ್ಧರಿಸಲಾಗುವುದು. ಉಚಿತ ಪ್ರಸಾದ ನಿಲಯದ ಹಿಂದುಗಡೆಯ ನಿವೇಶನದಲ್ಲಿ ಹವಾ ನಿಯಂತ್ರಿತ ನೂತನ ಕಲ್ಯಾಣಮಂಟಪ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಪುತ್ಥಳಿ ಸ್ಥಾಪಸಿಲು ಅನುಮೋದನೆಗೆ ಸಹಕರಿಸಿದ ಶಾಸಕರಿಗೆ, ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರಿಗೂ, ಸರ್ವ ಸದಸ್ಯರಿಗೆ ಮತ್ತು ನಗರಸಭೆ ಅಧಿಕಾ ರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ನಿಷ್ಠಿ ಕಡ್ಲೆಪ್ಪ ಮಠದ ಪ್ರಭುಲಿಂಗ ಸ್ವಾಮೀಜಿ, ಶ್ರೀಗಿರಿಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾ ಚಾರ್ಯ, ನಗರಸಭೆ ಉಪಾಧ್ಯಕ್ಷ ಮಹೇಶ ಪಾಟೀಲ್, ನಯೋಪ್ರಾ. ಅಧ್ಯಕ್ಷ ಪ್ರಕಾಶ ಸಜ್ಜನ್, ಪ್ರಮುಖರಾದ ರಾಜಾ ಹಣಮಪ್ಪ ನಾಯಕ, ಜಿ.ಎಸ್. ಪಾಟೀಲ್, ವಿರೇಶ ಚಿಂಚೋಳಿ, ಡಾ.ಬಿ.ಎಂ ಹಳ್ಳಿಕೋಟಿ, ವಿರೇಶ ನಿಷ್ಠಿ ದೇಶಮುಖ, ಮಂಜುನಾಥ ಜಾಲಹಳ್ಳಿ, ಶಂಕರ ನಾಯಕ, ರಾಜಾ ರಂಗಪ್ಪ ನಾಯಕ, ಮಲ್ಲು ದಂಡಿನ್, ರಂಗನಗೌಡ ಪಾಟೀಲ್ ದೇವಿಕೇರಿ, ಜಗದೀಶ್ ಪಾಟೀಲ್ ಸೂಗೂರು, ಈಶ್ವರ ನಾಯಕ, ಶರಣು ನಾಯಕ ಬೈರಿಮಡ್ಡಿ, ಸೂಗೂ ಮೋದಿ, ಮಲ್ಲು ಬಾದ್ಯಾಪುರ, ಚಂದ್ರು ಮಡಿವಾಳರ ಲಿಂಗರಾಜ್ ಶಾಬಾದಿ ಇತರರಿದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…