ಕಲಬುರಗಿ; ಸಂವಿಧಾನ ಶಿಲ್ಪಿ, ಬಾಬಾಸಾಹೇಬ್ ಡಾ.ಬಿ ಆರ್ ಅಂಬೇಡ್ಕರ ರವರ 66 ನೇ ಮಹಾಪರಿನಿರ್ವಾಣ ದಿನ ಅಂಗವಾಗಿ ನಂದಿಕೂರ ಗ್ರಾಮ ಪಂಚಾಯತ್ ಕಾರ್ಯಲಯದಲ್ಲಿ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ ಅವರು ಬಾಬಾಸಾಹೇಬರ ಭಾವಚಿತ್ರಕ್ಕೆ ಗೌರವ ನಮನಗಳು ಸಲ್ಲಿಸಿದರು.
ನಂತರ ಮಾತನಾಡಿದ ಅವರು ಬಾಬಾಸಾಹೇಬರು ಒಂದು ವೇಳೆ ಈ ದೇಶದಲ್ಲಿ ಜನಿಸದಿದ್ದರೆ ,ಸಂವಿಧಾನ ಬರೆಯದಿದ್ದರೆ ನಾವೂ ಮಹಿಳೆಯರು ಇಂದು ಮುಖ್ಯವಾಹಿನಿಗೆ ಬರಲು ಸಾಧ್ಯವಾಗ್ತಾಯಿರಲಿಲ್ಲ, ಅವರ ಕೊಡುಗೆ ದೇಶಕ್ಕೆ ಮತ್ತು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಒಳಗೊಂಡಂತೆ ಮಹಿಳಾ ವಿಮೋಚಕರಾಗಿದ್ದಾರೆ, ಇವತ್ತು ಈಡಿ ನಾಡು, ಅವರನ್ನು ಸ್ಮರಿಸುತ್ತಿದೆ, ಅವರ ಋಣದಲ್ಲಿ ಪ್ರತಿಯೊಬ್ಬ ಮಹಿಳೆಯು ಫಲಾನುಭವಿಗಳಾಗಿದ್ದಾರೆ ಹಾಗಾಗಿ ಇಂದು ನಾವೂ ಅವರಿಗೆ ಶತಕೋಟಿ ನಮನಗಳನ್ನು ಸಲ್ಲಿಸಿದರೂ ಕಡಿಮೆನೇ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಓ ರಾಮಚಂದ್ರ ಮಸರಕಲ್, ಕಾರ್ಯದರ್ಶಿ ಮಹಾನಂದಾ ಸಿಂಗೆ, ಸದಸ್ಯರಾದ ಚಂದ್ರಕಲಾ ಸೂರ್ಯಕಾಂತ, ಶಿವಲೀಲಾ ರಾಚಯ್ಯ, ಲಕ್ಷ್ಮಿಬಾಯಿ ಕುಪೇಂದ್ರ, ಭಾರತಿಬಾಯಿ ಶಿವಶರಣಪ್ಪ, ಶಶಿಕಲಾ ಶರಣು ಪವಾರ, ಚಂದ್ರಕಾಂತ ಸಿರಸಗಿ, ಮುಖಂಡರಾದ ಶಾಂತಕುಮಾರ ಉದನೂರ ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…