ಕಲಬುರಗಿ : ಮಹಾಜನ ಫೌಂಡೇಶನ ಚಾರಿಟೇಬಲ್ ಮತ್ತು ವೆಲ್‍ಫೇರ್ ಟ್ರಸ್ಟ್ ವತಿಯಿಂದ ಮಹಾನಗರ ಪಾಲಿಕೆಯ ಸ್ವಚ್ಛತಾ ಪೌರಕಾರ್ಮಿಕರಿಗೆ ಗೌರವ ಸನ್ಮಾನ ಆಯೋಜಿಸಿದೆ.
ಮಹಾಜನ ಫೌಂಡೇಶನ್ ವತಿಯಿಂದ ನವೆಂಬರ್ 11 ರಂದು ಸ್ವಚ್ಛತಾ ಪೌರಕಾರ್ಮಿಕರಿಗೆ ಗೌರವ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4 ಗಂಟೆಗೆ ನೆಹರುಗಂಜ್‍ನಲ್ಲಿರುವ ಲಾಹೋಟ ಕಲ್ಯಾಣ ಮಂಟಪದಲ್ಲಿ ಸಮಾರಂಭ ನಡೆಯಲಿದೆ.
ಈ ಅಪೂರ್ವ ಸಮಾರಂಭದ ಯಶಸ್ವಿಗಾಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಜಯಕುಮಾರ ಹಳಕಟ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ಹಾಗೂ ಗ್ರಾಮಾಂತರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ತೆಗನೂರ ಅಧ್ಯಕ್ಷತೆಯಲ್ಲಿ ಪ್ರಚಾರ ಸಮಿತಿ ರಚಿಸಲಾಗಿದೆ. ಬಿಜೆಪಿ ಮುಖಂಡ ವೀರುಸ್ವಾಮಿ ನರೋಣಾ ಮತ್ತು ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗೀರಥಿ ಗುನ್ನಾಪುರ ಅವರನ್ನು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ಹಾಗೂ ಕಲ್ಯಾಣರಾವ ಮಳಖೇಡ, ಪ್ರಭುಲಿಂಗ ಪಾಟೀಲ್ ಹಾದಿಮನಿ, ಶಿವಾನಂದ ಅಷ್ಟಗಿ, ಅಂಬಾರಾಯ ಜಿ ಬೆಳಕೋಟಾ, ವೀರಭದ್ರಪ್ಪ ( ಅಪ್ಪು ) ಆಸಪಲ್ಲಿ ಕೆ.ಸಿ. ಪಾಟೀಲ್, ಕಾಶಿನಾಥ ಚವ್ಹಾಣ, ಶಿವರಾಜ ಸಜ್ಜನ ಅವರನ್ನು ಉಪಾಧ್ಯಕ್ಷರನ್ನಾಗಿ ಮಾದ ನೇಮಿಸಲಾಗಿದೆ.
ಕಾಪೆರ್Çೀರೇಟರ್ ಆರ್.ಎಸ್.ಪಾಟೀಲ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಲ್ಲಿಕಾರ್ಜುನ ಜಿ. ಹೊನ್ನ ಖಜಾಂಚಿಯಾಗಿ ನೇಮಕಗೊಂಡಿದ್ದಾರೆ. ಪ್ರಚಾರ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ವಿಶ್ವನಾಥ ಪಾಟೀಲ್ ವೆಂಕಟಬೆನ್ನೂರ, ಉಪಾಧ್ಯಕ್ಷರನ್ನಾಗಿ ಶರಣು ಗೊಬ್ಬರ, ಅರುಣಕುಮಾರ ಡೋಣಿ, ಪ್ರಭಾಕರ ರಾವೂರ ರಾಜಕುಮಾರ ಮಂಠಾಳೆ ಹಾಗೂ ಕಾರ್ಯದರ್ಶಿಯನ್ನಾಗಿ ರವಿ ದೇಗಾಂವ ಅವರನ್ನು ನೇಮಿಸಲಾಗಿದೆ.
ಸಮಾಜ ಸೇವಕ ಅನುಪ ಸಲಗ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಎಂದು ಬಿಜೆಪಿ ಮುಖಂಡರೂ ಆಗಿರುವ ಮಹಾಜನ ಫೌಂಡೇಶನ್ ಅಧ್ಯಕ್ಷ ಶಿವಕಾಂತ ಸಿ.ಮಹಾಜನ್ ಹಾಗೂ ಕಾರ್ಯದರ್ಶಿ ಈಶ್ವರ ರಾಜ ಎಸ್. ಗುಂಡಗುರ್ತಿ ತಿಳಿಸಿದ್ದಾರೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…