ಬಿಸಿ ಬಿಸಿ ಸುದ್ದಿ

ನಾಡು ನುಡಿಗಾಗಿ ಸದಾಕಾಲ ಹೋರಾಟಕ್ಕೆ ಸೇನೆ ಸಿದ್ಧ

ಸುರಪುರ:ನಾನು ಕಳೆದ ಎರಡು ದಶಕಗಳಿಗು ಹೆಚ್ಚು ಕಾಲದಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದು ಈಗ ನಮ್ಮ ಕರ್ನಾಟಕನ ಸೇನೆ ಸಂಘಟನೆ ಹುಟ್ಟು ಹಾಕಿದ್ದು ನಾಡು ನುಡಿಗಾಗಿ ಸದಾಕಾಲ ನಮ್ಮ ಕರ್ನಾಟಕ ಸೇನೆ ಹೋರಾಟಕ್ಕೆ ಸಿದ್ಧವಾಗಿದೆ ಎಂದು ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ ಎಮ್ ಪಡಕೋಟೆ ಮಾತನಾಡಿದರು.

ನಗರದ ಟೈಲರ್ ಮಂಜಿಲ್‍ನಲ್ಲಿ ಸಂಘಟನೆಯ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕಕ್ಕೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ,ನಾನು ಸುರಪುರ ಶೂರರ ನಾಡಿನಿಂದ ಬಂದವನು ಇಲ್ಲಿಯ ರಾಜರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಶೂರ ಸಾಹಸ ನನಗೆ ಸ್ಪೂರ್ಥಿಯಿದೆ.ಇಲ್ಲಿಯ ಅರಸರ ಸ್ಪೂರ್ಥಿಯಿಂದಲೇ ನಮ್ಮ ಕರ್ನಾಟಕ ಸೇನೆ ಹೋರಾಟಕ್ಕೆ ದಿಟ್ಟತನವನ್ನು ತೋರಲಿದೆ.ನಾನು ಮರಾಠಿಗನಾದರು,ಮಾತೃ ಭಾಷೆ ಮರಾಠಿಯಾಗಿದ್ದರು ನನ್ನ ಧರ್ಮ ಜಾತಿ ದೇವರು ಎಲ್ಲವೂ ಕನ್ನಡ ಎಂದು ಆರಾಧಿಸುತ್ತೇನೆ.ಇಂದು ನಮ್ಮ ಸೇನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಮುಖಂಡರಿಗೂ ಇದೇ ಭೋದನೆಯನ್ನು ಮಾಡುತ್ತೇವೆ.ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗಲಿದೆ ಎನ್ನುವುದು ನಮ್ಮ ದ್ಯೇಯವಾಕ್ಯವಾಗಿದೆ ಎಂದರು.

ಇಂದು ನಮ್ಮ ಸಂಘಟನೆಯ ಮೂಲಕ ಬೆಂಗಳೂರಿನಲ್ಲಿ ನಮ್ಮ ಭಾಗದ ಯಾರೇ ವಿದ್ಯಾವಂತರು ಓದು ಮತ್ತು ಕೆಲಸಕ್ಕಾಗಿ ಸಂಘಟನೆಯ ಬಳಿ ಬಂದಲ್ಲಿ ಅವರಿಗೆ ಎಲ್ಲಾ ರೀತಿಯ ಸಹಕಾರ ಸಂಘಟನೆ ನೀಡಲಿದೆ.ಇಲ್ಲಿ ವಿದ್ಯಾವಂತ ಯುವಕರಿಗೆ ಉತ್ತಮವಾದ ಹುದ್ದೆಯನ್ನು ಹೊಂದಲು ಸೇನೆಯಿಂದ ತರಬೇತಿಯನ್ನು ಕೊಡಿಸಿ ಅವರಿಗೆ ಉದ್ಯೋಗ ಕೊಡಿಸಲೆಂದೆ ನಮ್ಮಲ್ಲಿ ಒಂದು ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು.ಇಂದು ಸುರಪುರ ತಾಲೂಕು ಘಟಕ ರಚನೆ ಮಾಡುತ್ತಿದ್ದು ತಾವೆಲ್ಲರು ನಾಡು ನುಡಿ ನೆಲ ಜಲ ಭಾಷೆಯ ಹೋರಾಟಕ್ಕೆ ಸದಾ ಸಿದ್ಧರಾಗಿರುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ನೇಮಕಗೊಂಡ ವೆಂಕಟೇಶ ನಾಯಕ ಹಾಗೂ ಇತರೆ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸುವ ಮೂಲಕ ನೇಮಕ ಆದೇಶ ಪತ್ರವನ್ನು ವಿತರಿಸಿದರು.ಈ ಸಂದರ್ಭದಲ್ಲಿ ಸೇನೆ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ನಾಯಕ,ಬೆಂಗಳೂರು ನಗರ ಜಿಲ್ಲಾಧ್ಯಕ್ಷರು ಯುವಘಟಕ,ರಮೇಶ ಪಡಕೋಟೆ ರಾಯಚೂರು ಜಿಲ್ಲಾಧ್ಯಕ್ಷರು,ಅಂಬರೀಶ ನಾಯಕ ಡೊಣ್ಣಿಗೇರ ಸೇರಿದಂತೆ ಅನೇಕರಿದ್ದರು.

ಪದಾಧಿಕಾರಿಗಳು: ವೆಂಕಟೇಶ ನಾಯಕ ಹವಾಲ್ದಾರ್ ಅಧ್ಯಕ್ಷ,ಡಿ.ರಾಮದೇವರು ನಾಯಕ ಪ್ರಧಾನ ಕಾರ್ಯದರ್ಶಿ ಹಾಗೂ ಬಸವರಾಜ ನಾಯಕ,ಬಸವರಾಜ ಕವಡಿಮಟ್ಟಿ,ದೇವರಾಜ ಅರಳಳ್ಳಿ,ಶಿವಪ್ಪಗೌಡ ಗೋಡಿಹಾಳ,ಪ್ರಭು ಅರಳಳ್ಳಿ,ಮಲ್ಲಿಕಾರ್ಜುನ ವಾರಿ ಸುರಪುರ, ಸೋಮರಾಯ ನಾಯಕ ಗೋಡಿಹಾಳ,ಪರಮಗೌಡ ಮಕಾಶಿ,ಬಸವರಾಜ ರುಕ್ಮಾಪುರ,ಅಂಬ್ರೇಶ ನಾಯಕ ದೇವತ್ಕಲ್,ಆನಂದ ಅರಳಳ್ಳಿ ಯವರನ್ನು ವಿವಿಧ ಪದಾಧಿಕಾರಿಗಳನ್ನಾಗಿ ನೇಮಕಗೊಳಿಸಲಾಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

14 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago