ಬಿಸಿ ಬಿಸಿ ಸುದ್ದಿ

ನೀರಿನ ಟ್ಯಾಂಕ್ಗೆ ಬಿದ್ದು ಮೂವತ್ತು ಕೋತಿಗಳ ಸಾವು: ಗ್ರಾಮದಲ್ಲಿ ಭೀತಿ

ಕಲಬುರಗಿ: ಬಳಕೆಯಲ್ಲಿಲ್ಲದ ಶಿಥಿಲ ನೀರಿನ ಟ್ಯಾಂಕ್ಗೆ ಬಿದ್ದ ನಲವತ್ತಕ್ಕೂ ಹೆಚ್ಚು ಕೋತಿಗಳಲ್ಲಿ ಸುಮಾರು ಮೂವತ್ತು ಕೋತಿಗಳು ನರಳಿ ನರಳಿ ಮೃತಪಟ್ಟ ಘಟನೆ ಚಿತ್ತಾಪೂರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿ ಸಂಭವಿಸಿದೆ. ಕೋತಿಗಳ ಸಾಮೂಹಿಕ ಸಾವಿನಿಂದ ದುರ್ವಾಸನೆ ಹಬ್ಬಿದ್ದು, ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

ಗ್ರಾಪಂ ಕೇಂದ್ರ ಸ್ಥಾನವಾಗಿರುವ ಹಳಕರ್ಟಿ ಗ್ರಾಮದಲ್ಲಿರುವ ಶಿಥಿಲ ನೀರಿನ ಟ್ಯಾಂಕ್ (ಓವರ್ ಹೆಡ್ ಟ್ಯಾಂಕ್) ಬೀಳುವ ಹಂತಕ್ಕೆ ತಲುಪಿದ್ದರ ಪರಿಣಾಮ ಕಳೆದ ಐದಾರು ವರ್ಷಗಳಿಂದ ನೀರು ಸಂಗ್ರಹ ಕೈಬಿಡಲಾಗಿದೆ. ಕಳೆದ ನಾಲ್ಕಾರು ದಿನಗಳ ಹಿಂದೆ ನೀರು ಕುಡಿಯಲು ಹೋಗಿ ಸುಮಾರು ಕೋತಿಗಳು ಪ್ರಾಣ ಕಳೆದುಕೊಂಡಿವೆ.

ಹಬ್ಬಿದ ದುರ್ವಾಸನೆ ಮತ್ತು ಮರದ ಮೇಲೆ ಕೋತಿಗಳ ಪರದಾಟ ಕಂಡು ಗ್ರಾಮಸ್ಥರು ಟ್ಯಾಂಕ್ ಪರಿಶೀಲಿಸಿದಾಗ ಕೋತಿಗಳು ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ. ಗ್ರಾಮದ ಯುವಕರು ಹಗ್ಗ ಇಳಿಬಿಟ್ಟು ಕೆಲವು ಕೋತಿಗಳನ್ನು ರಕ್ಷಣೆ ಮಾಡಿದ್ದಾರೆ. ಆದರೆ ನೀರು ಆಹಾರವಿಲ್ಲದೆ ಐದಾರು ದಿನಗಳ ಕಾಲ ಟ್ಯಾಂಕಿನಲ್ಲೇ ನರಳಾಡಿದ್ದ ಕೋತಿಗಳು ಪ್ರಾಣಬಿಟ್ಟಿವೆ.
ಜನ ವಸತಿ ಜಾಗದಲ್ಲಿರುವ ಈ ಟ್ಯಾಂಕ್ ನೆಲಕ್ಕುರುಳಿ ಪ್ರಾಣಾಪಾಯ ತಂದಿಡುವ ಮುಂಚೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡು ತೆರವು ಮಾಡಬೇಕಿತ್ತು.

ಕೋತಿಗಳು ಬಿದ್ದು ಸತ್ತರು ನಾಲ್ಕು ದಿನಗಳಾದರೂ ಗ್ರಾಪಂ ಅಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಲ್ಲ ನಿನ್ನೆ ಮಾಧ್ಯಮಗಳಲ್ಲಿ ಸುದ್ದಿ ಯಾದರಿಂದ ನಮ್ಮ ಗಮನಕ್ಕೆ ಬಂದಿರುವದರಿಂದ ನಾವು ಇಂದು ಬಂದಿದ್ದೇವೆ.
ಇಷ್ಟು ಮಂಗಗಳು ಸಾವನಪ್ಪಿದರು ಯಾವುದೇ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದೆ ಯಾವುದೇ ಕ್ರಮಕ್ಕೆ ಮುದಾಗದಿರುವುದರಿಂದ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ,ವಲಯ ಅರಣ್ಯಾಧಿಕಾರಿ ವಿಜಯ ಕುಮಾರ ಬಡಿಗೇರ,ಪಿಡಿಓ ಅನಿಲ ಪಾಟೀಲ ಅವರನ್ನು ಯುವ ಮುಖಂಡ ವಿಠಲ ನಾಯಕ,ಬಿಜೆಪಿ ತಾಲ್ಲೂಕ ಉಪಾಧ್ಯಕ್ಷ ವೀರಣ್ಣ ಯಾರಿ ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಗ್ರಾಮದ ನೀಲಕಂಠ ಸಾಹು ಸಂಗಶೆಟ್ಟಿ,ವಿರೇಶ ಸ್ವಾಮಿ, ಮಲ್ಲಪ್ಪ ಚೌದರಿ,ಬಸವರಾಜ ಮೇಲಿನಮನಿ, ಮೊನಪ್ಪ ಕುಲಕುಂದಿ,ಮಲ್ಲಿಕಾರ್ಜುನ ಕಟ್ಟಿಮನಿ,ವಾಡಿ ಪಟ್ಟಣದ ಅಶೋಕ ಪವಾರ,ರವಿ ನಾಯಕ,ದೌಲತರಾವ ಚಿತ್ತಾಪುರಕರ್,ಶಿವ ಶಂಕರ ಕಾಶೆಟ್ಟಿ,ಕಾಶಿನಾಥ ಶೆಟಗಾರ, ಶ್ರೀರಾಮ ಸೇನೆಯ ವಿಶ್ವ ತಳವಾರ,ಕರಣ ರಾಠೊಡ,ದಿಪಕ ಚವ್ಹಾಣ,ಅಶೋಕ ದೋರೆ ಹಾಗು ಎಸ್ಯುಸಿಐ ಪಕ್ಷದ ಮುಖಂಡರು ಇದ್ದರು.

ಈ ಟ್ಯಾಂಕಿನಲ್ಲಿ ಮೂವತ್ತರಿಂದ ನಲವತ್ತು ಕೋತಿಗಳು ಬಿದ್ದು ಹೊರ ಬರಲಾಗದೆ ಉಸಿರುಗಟ್ಟಿ ಸತ್ತಿವೆ. ಗ್ರಾಮದಲ್ಲಿ ದುರ್ವಾಸನೆ ಹರಡಿದೆ. ಸಾಂಕ್ರಾಮಿಕ ರೋಗ ಹರಡುವ ಆತಂಕ ಉಂಟಾಗಿರುವುದರಿಂದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಶಿಥಿಲ ಟ್ಯಾಂಕ್ ತೆರವು ಮಾಡಿ ಈ ಸ್ಥಳದಲ್ಲಿ ಗ್ರಂಥಾಲಯ ಅಥವಾ ಉದ್ಯಾನವ ನಿರ್ಮಿಸಬೇಕು ಮೃತಪಟ್ಟ ಕೋತಿಗಳ ಅಂತ್ಯ ಸಂಸ್ಕಾರ ಭಕ್ತಿಪೂರ್ವಕವಾಗಿ ಕೈಗೊಳ್ಳಬೇಕು ಎಂದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago