ಬಿಸಿ ಬಿಸಿ ಸುದ್ದಿ

ಸ್ನೇಹ ಗಂಗಾ ವಾಹಿನಿ ನಮ್ಮೆಲ್ಲರ ಸಂಸ್ಥೆ: ಡಾ.ನಾಗಾಬಾಯಿ ಬಿ ಬುಳ್ಳಾ

ಕಲಬುರಗಿ : ನಗರದ ಕಸ್ತೂರಬಾಯಿ ಪಿ ಬುಳ್ಳಾ ಸಾಂಸ್ಕøತಿಕ ಸಭಾ ಭವನದಲ್ಲಿ ನಡೆದ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರ ಪದಗ್ರಹಣ ಸಮಾರಂಭವನ್ನು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯೆ ಡಾ.ನಾಗಾಬಾಯಿ ಬಿ ಬುಳ್ಳಾ ಅವರು ಉದ್ಘಾಟಿಸಿ ಮಾತನಾಡಿದ್ದಾರೆ

ಈ ಸಂಸ್ಥೆ ಸಮಾಜದ ಹಿರಿಯರು ಅತ್ಯಂತ ಕಷ್ಟದಿಂದ ಬೆಳೆಸಿದ್ದಾರೆ ಅವರು ತನು ಮನ ಧನದಿಂದ ನಿರ್ಮಿಸಿದ್ದಾರೆ. 2022-2026 ನೇ ಅವಧಿಯ ಚುನಾವಣೆಯಲ್ಲಿ ಜಯಗಳಿಸಿದ ತಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ. ಎಲ್ಲರೂ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು. ಸಮಾಜದಲ್ಲಿ ಸ್ನೇಹ ಗಂಗಾ ವಾಹಿನಿ ಒಂದು ಹೆಮ್ಮರವಾಗಿ ಬೆಳೆಯಸುವಲ್ಲಿ ನಿಮ್ಮೆಲ್ಲರ ಜವಾಬ್ದಾರಿ ಇದೆ. ಏಕೆಂದರೆ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ನಮ್ಮೆಲ್ಲರ ಸಂಸ್ಥೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ಬಿ.ಪಿ.ಬುಳ್ಳಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶರಣಪ್ಪ ಕುಮಸಿಗಿ ನಿವೃತ್ತ ಅಬಕಾರಿ ಎಸ್ ಪಿ ಕಲಬುರಗಿ,ಪೆÇ್ರೀ:ಬಿ ಜಿ ನಾಟೀಕಾರ ಮಾಜಿ ಗೌರವಾಧ್ಯಕ್ಷರು ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಕಲಬುರಗಿ, ಲಚ್ಚಪ್ಪಾ ಜಮಾದಾರ ರಾಜ್ಯಾಧ್ಯಕ್ಷರು ಎಸ್ ಟಿ ಹೋರಾಟ ಸಮಿತಿ ಬೆಂಗಳೂರು, ನೀಲಕಂಠ ಎಂ ಜಮಾದಾರ ಜಿಲ್ಲಾ ಅಧ್ಯಕ್ಷರು ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಕಲಬುರಗಿ ಆಗಮಿಸಿದ್ದರು.

ನೂತನ ಪದಾಧಿಕಾರಿಗಳಿಗೆ ಗೌರವಾಧ್ಯಕ್ಷರಾದ ಬಿ ಪಿ ಬುಳ್ಳಾ ಅವರು ಪ್ರಮಾಣ ವಚನ ಬೋಧಿಸಿದರು. ಕಾರ್ಯಾಧ್ಯಕ್ಷ ಸೈಬಣ್ಣಾ ವಡಗೇರಿ, ಉಪಾಧ್ಯಕ್ಷ ರಾಮಲಿಂಗ ನಾಟೀಕಾರ ಪ್ರಧಾನ ಕಾರ್ಯದರ್ಶಿ ಯಲ್ಲಾಲಿಂಗ ಕೋಬಾಳ, ಸಂಘಟನಾ ಕಾರ್ಯದರ್ಶಿ ಅರವಿಂದ ಹುಣಚಿಕೇರಿ, ಆಡಳಿತ ಕಾರ್ಯದರ್ಶಿ ಅಶೋಕ ಸೋನ್ನ, ಕೋಶಾಧ್ಯಕ್ಷರಾಗಿ ಸಂಗೀತಾ ಗೋಳಸರ, ಸದಸ್ಯರಾಗಿ ಕಾಶಿನಾಥ ಬಾನರ, ಧರ್ಮರಾಜ ಜವಳಿ, ರಾಜು ಸೊನ್ನ, ಚಂದ್ರಕಾಂತ ತಳವಾರ, ಕರ್ಣಪ್ಪ ಬೀರಾದಾರ, ಮಾಣಿಕಮ್ಮಾ ವಾಡಿ, ಬಸವರಾಜ ಮಳ್ಳಿ, ಪ್ರಕಾಶ ನಾಯಿಕೋಡಿ, ವಿಜಯಲಕ್ಷ್ಮೀ ಜಮಾದಾರ, ಗೀತಾ ಅಮೃತ ನಾಟೀಕಾರ, ನಿವಾಸ ಅಕ್ಕಿ, ಈಶ್ವರ ಜಮಾದಾರ, ಡಾ ರಾಘವೇಂದ್ರ ಗುಡಗುಂಟಿ, ರಾಜೇಂದ್ರ ತೆಲೂರ, ವೀರನಾಥ ಕೋಠಾರಿ ಪ್ರಮಾಣವಚನ ಸ್ವೀಕರಿಸಿದರು. ರಾಜೇಂದ್ರ ಝಳಕಿ ಪ್ರಾಸ್ತಾವಿಕವಾಗಿ ಮಾತನಾಡಿದರು,ರಮೇಶ ತಲಾರಿ ಸ್ವಾಗತಿಸಿದರು, ಕು.ಸೋನಾಲಿ ಬೆಟಗೇರಿ ನಿರೂಪಿಸಿದರು.ಕು.ರೇಣುಕಾ ವಂದಿಸಿದರು.ಸಂಸ್ಥಯ ಸದಸ್ಯರು ಸಮಾಜದ ಗಣ್ಯರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago