ಕಲಬುರಗಿ: ನಗರದ ಎಸ್ಎಂ ಪಂಡಿತ್ ರಂಗ ಮಂದಿರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರ್ಟ್ ಥೀಯೇಟರ್ ಅಂತರಂಗ ರಂಗ ಸಂಸ್ಥೆ ಜನಪ್ರಿಯ ಜನಪ್ರಿಯ ಕಲಾಸಂಘ ಸೂರ್ಯನಗುಡಿ ಕಲಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಲ್ಕು ದಿನಗಳ ನಾಲ್ಕು ದಿನಗಳ ನಾಟಕೋತ್ಸವ ಎರಡನೇ ದಿನದ ನಾಟಕ ಪ್ರದರ್ಶನವನ್ನು ನಿವೃತ್ತ ಪ್ರಾಂಶುಪಾಲರಾದ ಬಸವರಾಜ ಗಾನೂರೆಯವರು ಉದ್ಘಾಟನೆ ಮಾಡಿದರು.
ಅದುನಿಕತೆ ತಂತ್ರಜ್ಞಾನ ಮೊಬೈಲ್ ಬಳಕೆಯಲ್ಲಿ ಮನರಂಜನೆ ಹತ್ತಿರವಾಗಿದರಿಂದ ರಂಗ ಭೂಮಿಗೆ ಪ್ರೋಸ್ತಹ ಕಡಿಮೆ ಯಾಗುತ್ತದೆ ಆದರೂ ಸಹ ಸಿನಿಮಾ ಕ್ಷೇತ್ರದಲ್ಲಿ ರಂಗ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಇದೆ ಹಾಗಂತ ಎಲ್ಲರೂ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಸಿಗುವುದು ಅಪರೂಪ ಉಳಿದವರು ಮತ್ತು ರಂಗ ಭೂಮಿಯೆ ಅವರಿಗೇ ಜೀವನ ಆಧಾರವಾಗಿದೆ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅನಿವಾರ್ಯತೆ ಇದೆ ಶಾಲಾ ,ಕಾಲೇಜು ಕ್ಯಾಂಪಸನಲ್ಲಿ ಮಕ್ಕಳಿಗೆ ಕಲಿಕೆಯ ಜೊತೆಗೆ ರಂಗ ಚಟವಟಿಕೆಗಳನ್ನು ತೊಡಗಿಸಿ ರಂಗ ಕಲಾವಿದರಿಗೆ ಅವಕಾಶ ನೀಡಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಂಗ ಸಮಾಜದ ಮಾಜಿ ಸದಸ್ಯರಾದ ಸುಜಾತ ಜಂಗಮ ಶೆಟ್ಟಿ ಯವರು ಮಾತಾಡಿ ಮಹಾಕಾವ್ಯಗಳನ್ನು ಹಳ್ಳಿಗಳಿಗೆ ತಲುಪಿಸಿದ್ದು ರಂಗಭೂಮಿ. ನಾಟಕಗಳ ಮೂಲಕ ರಾಮಾಯಣ, ಮಹಾಭಾರತದಂತ ಮಹಾಕಾವ್ಯಗಳನ್ನು ಗ್ರಾಮೀಣ ಮಟ್ಟದಲ್ಲಿ ತಲುಪಿಸಿದ ಕೀರ್ತಿ ರಂಗಕ್ಷೇತ್ರಕ್ಕೆ ಸಲ್ಲುತ್ತದೆ ಎಂದರು.
ಇದೆ ಸಂದರ್ಬದಲ್ಲಿ ಪ್ರಭುಲಿಂಗ ನೀಲುರೆ ನಾಟಕ ರಚನಕಾರರು. ಶಾಂತಲಿಂಗ ಮಠಪತಿ ರಂಗ ನಿರ್ದೇಶಕರು ಕುಮಾರಿ ವಿಜಯಲಕ್ಷ್ಮಿ ದೊಡ್ಮನಿ, ರಾಘವೇಂದ್ರ ಹಳಪೇಟ ಇವರಿಗೆ ರಂಗ ಗೌರವ ನೀಡಿ ಸನ್ಮಾನಿಸಲಾಯಿತು. ವೇದಿಕೆ ಮೇಲೆ ವಿಶ್ವನಾಥ್ ಹೊಸಮನಿ ಉಪನ್ಯಾಸಕರು. ವಿಠ್ಠಲ ಚಿಕಣಿ ಸಂಸ್ಕಾರ ಪ್ರತಿಷ್ಠಾನ ಅಧ್ಯಕ್ಷ ಸುರೇಶ್ ಬಡಿಗೇರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ, ಅಂಬೇಡ್ಕರ್ ವಸತಿ ನಿಲಯ ಮೇಲ್ವಿಚಾರಕರಾದ ಸಂತೋಷ್ ಸರಡಗಿ ಇದ್ದರು.
ನಾಗರಾಜ ಗೋಗಿ ಸ್ವಾಗತಿಸಿದರು. ಎಸ್ ಬಿ ಹರಿಕೃಷ್ಣ ವಂದಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಆಯೋಜಕರಾದ ಸುನಿಲ್ ಮಾರುತಿ ಮಾನಪಡೆ ನಡೆಸಿಕೊಟ್ಟರು. ಇಂದು ದಾತ್ರಿ ರಂಗ ಸಂಸ್ಥೆ ಸಿರಿಗೆರಿಯಿಂದ ಅಕ್ಕ ನಾಗಲಾಂಬಿಕೆ ನಾಟಕ ಪ್ರದರ್ಶನಗೊಂಡಿತ್ತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…