ಬೀದರ್: ಗೋದಾವರಿ ಜಲಾನಯನ ಪ್ರದೇಶದ ಬೀದರ ಜಿಲ್ಲೆಯ ಜೀವನದಿ ಕಾರಂಜಾ ಜಲಾಶಯ ನಿರ್ಮಾಣಕ್ಕೆ ಭೂಮಿ ನೀಡಿ ಮನೆ–ಮಠ ಕಳೆದುಕೊಂಡ ಸಂತ್ರಸ್ಥರಿಗೆ ಏಕರೂಪದ ನ್ಯಾಯ ನೀಡುವ ಮುಖಾಂತರ 371ನೇ(ಜೆ) ಕಲಂ ಅಡಿ ಮಾನವೀಯತೆಯ ಮಾನದಂಡದಂತೆ ಬೇಡಿಕೆಯನ್ನು ಪರಿಗಣಿಸಲು 26 ಡಿಸೆಂಬರದಂದು ಅಂಬೇಡ್ಕರ ವೃತ್ತದಲ್ಲಿ 10.30 ಗಂಟೆಗೆ ನಡೆಯುವ ಬೃಹತ್ ಮಾನವ ಸರಪಳಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ನಡೆಯುವ ಪಕ್ಷಾತೀತವಾಗಿ ನಡಯುವ ಹೋರಾಟದಲ್ಲಿ ಎಲ್ಲರೂ ಭಾವಿಸಿಲು ಕಲ್ಯಾಣ ಕರ್ನಾಟಕದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ ಮನವಿ ಮಾಡಿದ್ದಾರೆ
ರಾಜಕೀಯೇತರ ತಳಹದಿಯ ಮೇಲಿನ ಭಾರಿ ಪ್ರತಿಭಟನೆಯ ಹೋರಾಟದಲ್ಲಿ ಆಯಾ ರಾಯಕೀಯ ಪಕ್ಷದ ಗಣ್ಯರು, ಸಂಘ ಸಂಸ್ಥೆಗಳ, ಜನಪರ, ಕನ್ನಡಪರ, ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರ, ರೈತ, ಕಾರ್ಮಿಕ ವಿದ್ಯಾರ್ಥಿ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಅದರಂತೆ ಕಾರಂಜಾ ಸಂತ್ರಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಭಾಗವಹಿಸಿ, ನ್ಯಾಯಯುತವಾದ ಬೇಡಿಕೆಯ ಬಗ್ಗೆ ಗಂಭೀರ ಸ್ವರೂಪದ ಬಿಸಿ ಮುಟ್ಟಿಸಲು ಅವರು ಕರೆ ನೀಡಿದ್ದಾರೆ.
ಸೋಮವಾರ ಬೀದರ ಅಂಬೇಡ್ಕರ ವೃತ್ತದ ಹತ್ತಿರ ಕಾರಂಜಾ ಸಂತ್ರಸ್ಥರ ಸತ್ಯಾಗ್ರಹ ಸ್ಥಳದಲ್ಲಿ ಎಲ್ಲರೂ ಸಮಾವೇಶಗೊಂಡು ಅಲ್ಲಿಂದ ಮೆರವಣಿಗೆಯ ಮೂಲಕ ಅಂಬೇಡ್ಕರ ವೃತ್ತದಲ್ಲಿ ಸೇರಿ 11.00 ಗಂಟೆಗೆ ಬೃಹತ್ ಮಾನವ ಸರಪಳಿ ನಡೆಸಿ ನಂತರ ಮೆರವಣಿಗೆಯ ಮುಖಾಂತರ ಜಿಲ್ಲಾಧಿಕಾರಿಯ ಕಚೇರಿ ಎದುರು ಸಮಾವೇಶಗೊಂಡು ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಬೇಡಿಕೆ ಪತ್ರ ಸಲ್ಲಿಸಲಾಗುವುದು. ನಂತರ ನಿಗದಿತ ಕಾರ್ಯಕ್ರಮದಂತೆ ಬೀದರ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ಬೇಡಿಕೆಗೆ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಲು ಒತ್ತಾಯಿಸಲಾಗುವುದೆಂದು ತಿಳಿಸಿದ್ದಾರೆ.
ಕಾರಂಜಾ ಜಲಾಶಯಕ್ಕೆ ಭೂಮಿ ನೀಡಿದ ಸಂತ್ರಸ್ಥರಿಗೆ ನ್ಯಾಯ ಸಮ್ಮತವಾಗಿ ಸಮರ್ಪಕ ಪರಿಹಾರ ಧನವನ್ನು ನೀಡಲು ಒತ್ತಾಯಿಸಿ ನಡೆದಿರುವ ಈ ಮಹತ್ವದ ಹೋರಾಟಕ್ಕೆ ಎಲ್ಲಾ ಕ್ಷೇತ್ರದ ನಾಗರಿಕರು ಹೋರಾಟದಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಲು ವಿನಂತಿಸಲಾಗುತ್ತದೆ ಎಂದು ಲಕ್ಷ್ಮಣ ದಸ್ತಿ ಮತ್ತು ಕಾರಂಜಾ ಸಂತ್ರಸ್ಥರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಹಾಗೂ ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿಯ ಸದಸ್ಯರಾದ ಚಂದ್ರಶೇಖರ ಪಾಟೀಲರವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…