ಬೀದರ್; ಕಾರಂಜಾ ಸಂತ್ರಸ್ಥರ ಬೇಡಿಕೆ ಈಡೇರಿಸಲು ಬೃಹತ್ ಹೋರಾಟ | 26ಕ್ಕೆ ಪಕ್ಷಾತೀತವಾಗಿ ಭಾಗವಹಿಸಿ

0
35

ಬೀದರ್: ಗೋದಾವರಿ ಜಲಾನಯನ ಪ್ರದೇಶದ ಬೀದರ ಜಿಲ್ಲೆಯ ಜೀವನದಿ ಕಾರಂಜಾ ಜಲಾಶಯ ನಿರ್ಮಾಣಕ್ಕೆ ಭೂಮಿ ನೀಡಿ ಮನೆಮಠ ಕಳೆದುಕೊಂಡ ಸಂತ್ರಸ್ಥರಿಗೆ ಏಕರೂಪದ ನ್ಯಾಯ ನೀಡುವ ಮುಖಾಂತರ  371ನೇ(ಜೆ) ಕಲಂ ಅಡಿ ಮಾನವೀಯತೆಯ ಮಾನದಂಡದಂತೆ ಬೇಡಿಕೆಯನ್ನು ಪರಿಗಣಿಸಲು 26 ಡಿಸೆಂಬರದಂದು ಅಂಬೇಡ್ಕರ ವೃತ್ತದಲ್ಲಿ 10.30 ಗಂಟೆಗೆ ನಡೆಯುವ ಬೃಹತ್ ಮಾನವ ಸರಪಳಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ನಡೆಯುವ ಪಕ್ಷಾತೀತವಾಗಿ ನಡಯುವ ಹೋರಾಟದಲ್ಲಿ ಎಲ್ಲರೂ ಭಾವಿಸಿಲು ಕಲ್ಯಾಣ ಕರ್ನಾಟಕದ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ ಮನವಿ ಮಾಡಿದ್ದಾರೆ

ರಾಜಕೀಯೇತರ ತಳಹದಿಯ ಮೇಲಿನ ಭಾರಿ ಪ್ರತಿಭಟನೆಯ ಹೋರಾಟದಲ್ಲಿ ಆಯಾ ರಾಯಕೀಯ ಪಕ್ಷದ ಗಣ್ಯರು, ಸಂಘ ಸಂಸ್ಥೆಗಳ, ಜನಪರ, ಕನ್ನಡಪರ, ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರ, ರೈತ, ಕಾರ್ಮಿಕ ವಿದ್ಯಾರ್ಥಿ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಅದರಂತೆ ಕಾರಂಜಾ ಸಂತ್ರಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸಿ, ನ್ಯಾಯಯುತವಾದ ಬೇಡಿಕೆಯ ಬಗ್ಗೆ ಗಂಭೀರ ಸ್ವರೂಪದ ಬಿಸಿ ಮುಟ್ಟಿಸಲು ಅವರು ಕರೆ ನೀಡಿದ್ದಾರೆ.

Contact Your\'s Advertisement; 9902492681

ಸೋಮವಾರ ಬೀದರ ಅಂಬೇಡ್ಕರ ವೃತ್ತದ ಹತ್ತಿರ ಕಾರಂಜಾ ಸಂತ್ರಸ್ಥರ ಸತ್ಯಾಗ್ರಹ ಸ್ಥಳದಲ್ಲಿ ಎಲ್ಲರೂ ಸಮಾವೇಶಗೊಂಡು ಅಲ್ಲಿಂದ ಮೆರವಣಿಗೆಯ ಮೂಲಕ ಅಂಬೇಡ್ಕರ ವೃತ್ತದಲ್ಲಿ ಸೇರಿ 11.00 ಗಂಟೆಗೆ ಬೃಹತ್ ಮಾನವ ಸರಪಳಿ ನಡೆಸಿ ನಂತರ ಮೆರವಣಿಗೆಯ ಮುಖಾಂತರ ಜಿಲ್ಲಾಧಿಕಾರಿಯ ಕಚೇರಿ ಎದುರು ಸಮಾವೇಶಗೊಂಡು ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಬೇಡಿಕೆ ಪತ್ರ ಸಲ್ಲಿಸಲಾಗುವುದು. ನಂತರ ನಿಗದಿತ ಕಾರ್ಯಕ್ರಮದಂತೆ ಬೀದರ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ಬೇಡಿಕೆಗೆ ರಾಜಕೀಯ ಇಚ್ಛಾಶಕ್ತಿ ವ್ಯಕ್ತಪಡಿಸಲು ಒತ್ತಾಯಿಸಲಾಗುವುದೆಂದು ತಿಳಿಸಿದ್ದಾರೆ.

ಕಾರಂಜಾ ಜಲಾಶಯಕ್ಕೆ ಭೂಮಿ ನೀಡಿದ ಸಂತ್ರಸ್ಥರಿಗೆ ನ್ಯಾಯ ಸಮ್ಮತವಾಗಿ ಸಮರ್ಪಕ ಪರಿಹಾರ ಧನವನ್ನು ನೀಡಲು ಒತ್ತಾಯಿಸಿ ನಡೆದಿರುವ ಮಹತ್ವದ ಹೋರಾಟಕ್ಕೆ ಎಲ್ಲಾ ಕ್ಷೇತ್ರದ ನಾಗರಿಕರು ಹೋರಾಟದಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಲು ವಿನಂತಿಸಲಾಗುತ್ತದೆ ಎಂದು ಲಕ್ಷ್ಮಣ ದಸ್ತಿ ಮತ್ತು ಕಾರಂಜಾ ಸಂತ್ರಸ್ಥರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು ಹಾಗೂ ಬೀದರ ಸಮಗ್ರ ಅಭಿವೃದ್ಧಿ ಜಂಟಿ ಕ್ರಿಯಾ ಸಮಿತಿಯ ಸದಸ್ಯರಾದ ಚಂದ್ರಶೇಖರ ಪಾಟೀಲರವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here