ಕಾಳಗಿ: ಪ್ರತಿ ಗ್ರಾಮದಲ್ಲಿ ಕನ್ನಡ ಕಟ್ಟುವ ಮತ್ತು ಕನ್ನಡ ಶಾಲೆಗಳಿಗೆ ಗೌರವಿಸುವುದರೊಂದಿಗೆ ಕನ್ನಡದ ಝೇಂಕಾರ ಮೊಳಗಲಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ ತಿಳಿಸಿದರು.
ಅವರು ಕಾಳಗಿ ತಾಲೂಕಿನ ತೆಂಗಳಿ ಗ್ರಾಮದ ವಲಯ ಘಟಕ ಪದಾಧಿಕಾರಿಗಳ ಪದಗ್ರಹಣ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೆಗಲತಿಪ್ಪಿ ಯವರ ನೇತೃತ್ವದಲ್ಲಿ 11 ತಾಲೂಕುಗಳಲ್ಲಿರುವ ವಲಯ ಘಟಕದ ಪ್ರತಿ ಗ್ರಾಮದಲ್ಲೂ ಕನ್ನಡ ಪರ ಚಟುವಟಿಕೆಗಳು ಇಮ್ಮಡಿಗೊಂಡಿವೆ, ಜನಪದ, ಕಲೆ, ಸಾಹಿತ್ಯ, ಸಂಸ್ಕøತಿ ರಕ್ಷಣೆ, ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವವಾಗಬೇಕೆಂದು ಮಾತನಾಡುತ್ತಾ, ಗ್ರಾಮದಲ್ಲಿ ಪ್ರಪ್ರಥವಾಗಿ ಕನ್ನಡ ವ್ಯಾಕರಣ ಪುಸ್ತಕ ಬರೆದು ಕನ್ನಡ ಸಾಹಿತ್ಯದಲ್ಲೇ ಕೃಷಿ ಮಾಡಿದ ಲಿಂಗೈಕ್ಯ ಡಾ. ಗುರುಪಾದಯ್ಯ ಸಾಲಿಮಠ ಅವರ ಹೆಸರಿನ ವೇದಿಕೆಯಲ್ಲಿ ಪರಿಷತ್ತಿನ ವಲಯ ಘಟಕ ಉದ್ಘಾಟಿಸಿ ನಡೆಯುತ್ತಿರುವುದು ಅರ್ಥಪೂರ್ಣ ಮತ್ತು ಶ್ಲಾಘನೀಯವಾದದ್ದು, ಎಂದು ತಿಳಿಸಿದರು.
ಸಂಶೋಧಕ ಸಾಹಿತಿ, ಮುಡಬಿ ಗುಂಡೇರಾವ “ನಮ್ಮ ನೆಲವೇ ನಮಗೆ ಪ್ರೇರಣೆ” ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ, ಕನ್ನಡಕ್ಕೆ ಮೊಟ್ಟ ಮೊದಲ ಕೃತಿ ಕವಿರಾಜ ಮಾರ್ಗ ನೀಡಿದ ಹೆಗ್ಗಳಿಕೆ ನಮ್ಮ ನೆಲಕ್ಕೆಂದೆ, ಮಹಾವೀರಚಾರ್ಯ ರಚಿತ ಗಣಿತ ಸಾರ ಸಂಗ್ರಹ ವಿಜ್ಞಾನೇಶ್ವರರ ರಚಿತ “ಮಿತಾಕ್ಷರ” ಗ್ರಂಥ ನೀಡಿದ ಅಭಿಮಾನ ಈ ನೆಲಕ್ಕೆಂದೇ ಪ್ರಾಚೀನ ಖ್ಯಾತಿಯ ಮಾನ್ಯಖೇಟ ಅಗ್ರಹಾರ, ತೆಂಗಳಿ, ಮಾನ್ಯದಡಿ ಸಾಸಿರ ನಾಡು ಕಾಳಗಿ, ಸ್ಮಾರಕಗಳ ರಕ್ಷಿಸುವ ಮತ್ತು ಪ್ರವಾಸಿ ತಾಣವಾಗಬೇಕು ಎಂದರು.
ಸಾನಿಧ್ಯ ವಹಿಸಿದ ತೊಟನಳ್ಳಿ ಮಹಾಂತೇಶ್ವರ ಮಠದ ತ್ರೀಮೂರ್ತಿ ಶಿವಾಚಾರ್ಯರು ಮಾತನಾಡಿ ಕನ್ನಡ ಭಾಷೆ, ಬಳಸಿದಷ್ಟು ಶ್ರೀಮಂತವಾಗುತ್ತದೆ ಎಂದು ಕನ್ನಡ ಸಾಹಿತ್ಯದ ಪರಿಕಲ್ಪನೆ ಕುರಿತು ಮಾತನಾಡಿದರು ಇನ್ನೋವರ ಶ್ರೀಗಳಾದ ಮಂಗಲಗಿ-ತೆಂಗಳಿ ಗ್ರಾಮದ ಶಾಂತೇಶ್ವರ ಮಠದ ಡಾ. ಶಾಂತ ಸೋಮನಾಥ ಶಿವಾಚಾರ್ಯರು ಮಾತನಾಡುತ್ತಾ ಬರೀ ಜಿಲ್ಲೆಗೆ ಸೀಮಿತವಾದ ಕನ್ನಡ ಸಾಹಿತ್ಯ ಪರಿಷತ್ತು ಈಗ ತನ್ನ ಚಟುವಟಿಕೆಗಳು ವಲಯ ಹಾಗೂ ಗ್ರಾಮಾಂತರ ವಿಸ್ತರಿಸಿ ಗ್ರಾಮಗಳಲ್ಲಿ ಕನ್ನಡ ಕಂಪು ಹರಿಸುತ್ತಿರುವ ಪರಿಷತ್ತಿನ ಚಟುವಟಿಕೆ ಕುರಿತು ಹರ್ಷ ವ್ಯಕ್ತಪಡಿಸಿದರು.
ಪ್ರಾರ್ಥನೆಯನ್ನು ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನಡೆಸಿಕೊಟ್ಟರು, ತೆಂಗಳಿ ವಲಯ ಘಟಕದ ಅಧ್ಯಕ್ಷರಾದ ಭೀಮಾಶಂಕರ ಅಂಕಲಗಿ ಸ್ವಾಗತಿಸಿದರು, ಕಾಳಗಿ ಕಸಾಪ ತಾಲೂಕಾ ಅಧ್ಯಕ್ಷ ಸಂತೋಷ ಕುಡ್ಡಳ್ಳಿ ಆಶಯ ನುಡಿ ವ್ಯಕ್ತಪಡಿಸಿದರು, ವಲಯ ಘಟಕದ ಪದಾಧಿಕಾರಿಗಳಾದ ಶಾಮರಾವ ಪೂಜಾರಿ, ಜಗದೀಶ್ ಕೇಶ್ವರ ಕಾರ್ಯಕ್ರಮ ನಿರ್ವಹಿಸಿದರು, ಗೌರವ ಕಾರ್ಯದರ್ಶಿಗಳಾದ ಗುಂಡಪ್ಪ ಪಟ್ಟೇದ ವಂದಿಸಿದರು.
ತೆಂಗಳಿ ಗ್ರಾಮದ ಪಂಚಾಯತ ಅಧ್ಯಕ್ಷ ಮೆಹಬೂಬ ಪಟೇಲ, ಪಿಡಿಓ ಯೋಗೇಶ ಹಿರೇಮಠ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದರು.
ತೆಂಗಳಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ರವಿಕುಮಾರ ದೇಶಸಾಯಿ, ವಿಶ್ವೇಶ್ವರಯ್ಯ ಶಾಲೆಯ ಮುಖ್ಯಗುರುಗಳಾದ ಶರಣಬಸಪ್ಪಾ ಮುನ್ನೊಳ್ಳಿ, ಜಿಲ್ಲಾ ಕ.ಸಾ.ಪ. ಕಾನೂನು ಪ್ರತಿನಿಧಿ ವಿನೋದಕುಮಾರ ಜೇನವೇರಿ, ತೆಂಗಳಿ ವಲಯ ಘಟಕದ ಗೌರವಾಧ್ಯಕ್ಷರಾದ ವೀರೇಂದ್ರ ವಾಲಿ, ಯಲ್ಲಾಲಿಂಗ ಪಾಟೀಲ, ಸತೀಶಚಂದ್ರ ಸುಲೇಪೇಟ, ರಾಜೇಂದ್ರ ಬಾಬು, ಡಾ. ವಿವೇಕಾನಮದ ಬುಳ್ಳಾ, ಅತಿಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತೆಂಗಳಿ ವಲಯ ಘಟಕದ ನೂತನ ಪದಾಧಿಕಾರಿಗಳಾದ, ಗೌರವ ಕಾರ್ಯದರ್ಶಿಗಳಾಗಿ ಗುಂಡಪ್ಪಾ ಪಟೇದ, ಜಗದೀಶ ಕೇಶ್ವರ, ಕೋಶಾಧ್ಯಕ್ಷರಾಗಿ ಶಾಮರಾವ ಪೂಜಾರಿ, ಸಂಘಟನಾ ಕಾರ್ಯದರ್ಶಿಗಳಾಗಿ ರಾಜಕುಮಾರ ಪಟ್ಟೇದ, ಮಹ್ಮದಸಾಬ ನದಾಫ, ಸಂಘ ಸಂಸ್ಥೆಯ ಪ್ರತಿನಿಧಿಯಾಗಿ ಪ್ರಸಾದ ಹಳ್ಳಿ, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ, ಅಮೃತ ಕೋರವಾರ, ಪರಿಶಿಷ್ಟ ಪಂಗಡದ ಪ್ರತಿನಿಧಿಯಾಗಿ ಅನುರಾಧ ನಾಯಕ, ಮಹಿಳಾ ಪ್ರತಿನಿಧಿಯಾಗಿ ಪವಿತ್ರಾ ಪಾಟೀಲ ಹಾಗೂ ಉಮಾ ಚೆಂಗಟಿ ರವರಿಗೆ ಪದಗ್ರಹಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ, ಗ್ರಾಮದ ಹಿರಿಯರಾದ ವೀರಭದ್ರಯ್ಯ ಸಾಲಿಮಠ, ಬಸವರಾಝ ತುಪ್ಪದ,ವೀರಭದ್ರಪ್ಪ ಬಾಳದೆ, ಭೀಮಾಶಂಕರ ಮಾಲಿಪಾಟೀಲ, ಮಲ್ಲಣ್ಣ ಹರಸೂರ, ವಿಶ್ವನಾಥ ಬಾಳವೆ, ಚಂದ್ರಶೇಖರ ಎಲ್ಹೇರಿ, ಹಣಮಂತರಾವ ಬಾಳದೆ, ಗುರುನಂಜಯ್ಯ ಮಠಪತಿ, ಮಂಜುನಾಥ ಬೇರನ್, ಗೋಪಾಲ ಚವ್ಹಾಣ, ಅಣವೀರ ಆಂದೇಲಿ, ವಿಶ್ವನಾಥ ಹಿಲ್ಲಾ, ಚಂದ್ರಶೇಖರ ನೀಲಹಳ್ಳಿ, ಬಸವರಾಜ ಬಸ್ತೆ, ಮಲ್ಲಿಕಾರ್ಜುನ ಕದ್ದರಗಿ, ವಿಶ್ವನಾಥ ಜಾಧವ ಬಸವರಾಜ ಬೋಧನಮಠ, ಭೀಮಣ್ಣ ಮೂಲಿಮನಿ ಉಪಸ್ಥಿತರಿದ್ದರು.
ಕಾಳಗಿ ತಾಲೂಕಿನ ತೆಂಗಳಿ ವಲಯ ಘಟಕ ಪದಾಧಿಕಾರಿಗಳ ಪದಗ್ರಹಣ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಉದ್ಘಾಟಿಸುತ್ತಿರುವ ಚಿತ್ರ. ಡಾ. ಸೋಮನಾಥ ಶಿವಾಚಾರ್ಯರು, ಡಾ. ತ್ರೀಮೂರ್ತಿ ಶಿವಾಚಾರ್ಯರು, ಮುಡಬಿ ಗುಂಡೇರಾವ, ಭೀಮಾಶಂಕರ ಅಂಕಲಗಿ ಹಾಗೂ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…