ಕಲಬುರಗಿ: ನಗರದಲ್ಲಿ ಹರಿದಾಸ ಭವನ ನಿರ್ಮಾಣಕ್ಕೆ ಹತ್ತು ಲಕ್ಷ ಅನುದಾನ ನೀಡುವುದಾಗಿ ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಭರವಸೆ ನೀಡಿದರು.
ನಗರದ ಕನ್ನಡ ಭವನದ ಸುವರ್ಣ ಭವನದಲ್ಲಿ ಶನಿವಾರ ಆಯೋಜಿಸಿದ್ದ ದಾಸ ಸಾಹಿತ್ಯ ಸಂಗೀತ ಮತ್ತು ಸಾಂಸ್ಕøತಿಕ ಪ್ರತ್ರಿμÁ್ಠನ ಉದ್ಘಾಟಿಸಿ ಮಾತನಾಡಿದ ಅವರು, ಈ ಪ್ರತಿμÁ್ಠನಕ್ಕೆ ಸಿ.ಎ. ಸೈಟ್ ನೀಡಿ, ಹರಿದಾಸ ಭವನ ನಿರ್ಮಾಣಕ್ಕೆ ಹತ್ತು ರೂ. ಅನುದಾನ ನೀಡುವುದಾಗಿ ಶಾಸಕರು ಹೇಳಿದರು.
ಕನ್ನಡ ಸಾಹಿತ್ಯಕ್ಕೆ ವಚನ ಮತ್ತು ದಾಸ ಸಾಹಿತ್ಯ ಎರಡು ಕಣ್ಣುಗಳಿದ್ದಂತೆ. ಇಂದಿಗೂ ಎಂದೆಂದಿಗೂ ಈ ಎರಡು ಸಾಹಿತ್ಯ ಪ್ರಸ್ತುತವಾಗಿರುತ್ತವೆ. ಈ ಸಾಹಿತ್ಯದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು. ಮಾನವರ ಬದುಕನ್ನು ಕಟ್ಟಿ ಕೊಡುವ ಸಾಹಿತ್ಯ ಇದಾಗಿದ್ದು, ಪ್ರತಿμÁ್ಠನದ ಮೂಲಕ ದಾಸರ ಚಿಂತನೆಗಳನ್ನು ಪ್ರತಿ ಮನೆ ಮನಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಅವರು ಸಲಹೆ ನೀಡಿದರು..
ಫೆಬ್ರವರಿ ತಿಂಗಳಲ್ಲಿ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಯೋಜಿಸಲು ಚಿಂತನೆ ನಡೆದಿದೆ. ಅ ಉತ್ಸವದಲ್ಲಿ ವಚನ ಮತ್ತು ದಾಸ ಸಾಹಿತ್ಯದ ಮೇಲೆ ಬೆಳಕು ಚೆಲ್ಲಲಾಗುವುದು. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದಲ್ಲಿ ಜೀವನದ ಸಫಲತೆ ಅಡುಗಿದೆ. ಹೀಗಾಗಿ ಈ ಸಾಹಿತ್ಯಕ್ಕೆ ಪ್ರತಿಯೊಬ್ಬ ಕನ್ನಡಿಗರ ಪೆÇ್ರೀತ್ಸಾಹ ಅಗತ್ಯ ಎಂದು ಹೇಳಿದರು.
ಗುಲ್ಬರ್ಗ ವಿವಿ ಕುಲಪತಿ ದಯಾನಂದ ಅಗಸರ ಮತನಾಡಿ, ದಾಸ ಸಾಹಿತ್ಯದಲ್ಲಿನ ಹೊಸ ಚಿಂತನೆಗಳ ಬಗ್ಗೆ ಅಧ್ಯಯನ ಮಾಡಿ ಜನ ಸಮಾನ್ಯರಿಗೆ ತಲುಪಿಸುವ ಕಾರ್ಯ ಈ ಪ್ರತಿμÁ್ಠನದ ಮೂಲಕ ನಡೆಯಲಿ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪಂ. ಗೋಪಾಲಾಚಾರ್ಯ ಅಕಮಂಚಿ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ ಕುಲಕರ್ಣಿ, ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ನಾರಾಯಣ ಕುಲಕರ್ಣಿ, ವೆಂಕಟೇಶ ಮುದಗಲ್, ಡಾ.ಸುನಂದಾ ಸಾಲವಾಡಗಿ, ಸಂಧ್ಯಾ ಹೊನಗುಂಟಿಕರ್. ಚಂದ್ರಕಾಂತ ಜೋಶಿ, ಬಾಲಕೃಷ್ಣ ಲಾತೂರಕರ, ಕೆ.ಗಿರಿಮಲ್, ಕೆ.ಪಿ.ಗಿರಿಧರ, ಕಸಾಪ ದಕ್ಷಿಣ ವಲಯದ ಅಧ್ಯಕ್ಷ ಶಾಂಸುಂದರ ಕುಲಕರ್ಣಿ, ಸಹ ಕಾರ್ಯದಶಿ ಮಲ್ಲಿನಾಥ ಸಂಗಶೇಟ್ಟಿ, ರಾಜಶೇಖರ ಮಾಡಬೂಳ ಹಾಗೂ ಪ್ರತಿμÁ್ಠನದ ಸದಸ್ಯರು ಪಾಲ್ಗೊಂಡಿದ್ದರು.
ಪ್ರತಿμÁ್ಠನದ ಅಧ್ಯಕ್ಷ ಶ್ರೀನಿವಾಸ ಸಿರನೂರಕರ್ ಪ್ರಾಸ್ತಾವಿಕ ಮಾತನಾಡಿದರು. ವ್ಯಾಸರಾಜ ಸಂತೆಕೆಲ್ಲೂರ ನಿರೂಪಿಸಿದರು.
ಹರಿದಾಸ ಸಾಹಿತ್ಯ ಪ್ರಚಾರವಾಹಿನಿ, ಸ್ವರಾಲಯ ತಬಲಾ ವಿದ್ಯಾಲಯ, ಸ್ವರ ಗಂಧರ್ವ ಸಂಗೀತ ವಿದ್ಯಾಲಯ, ದಾಸ ಸಾಹಿತ್ಯ ಅಕಾಡೆಮಿ, ಹಂಸಧ್ವನಿ ತಬಲಾಕಲಾ ನಿಕೇತನ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಓಂಕಾರ ನೃತ್ಯ ಕಲಾ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ವಲಯ ಸಹಕಾರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದಾಸ ಸಾಹಿತ್ಯದ ಬಗ್ಗೆ ಹೆಚ್ಚಿನ ಅಧ್ಯನ ಮಾಡುವ ಉದ್ದೇಶದಿಂದ ಹಾಗೂ ದಾಸ ಸಾಹಿತ್ಯವನ್ನುಉಳಿಸಿ ಬೆಳೆಸುವ ನಿಟ್ಟಿನಲ್ಲಿ ದಾಸ ಸಾಹಿತ್ಯ,ಸಂಗೀತ ಮತ್ತು ಸಾಂಸ್ಕೃತಿಕ ಪ್ರತಿμÁ್ಠನ ವನ್ನು ಸ್ಥಾಪಿಸಲಾಗಿದ್ದು, ಈ ಪ್ರತಿμÁ್ಠನಕ್ಕೆ ಎಲ್ಲ ದಾಸ ಸಾಹಿತ್ಯಾಭಿಮಾನಿಗಳು ಸಹಕಾರ ನೀಡಬೇಕು. – ಶ್ರೀನಿವಾಸ ಸಿರನೂರಕರ, ದಾಸ ಸಾಹಿತ್ಯ ಸಂಗೀತ ಮತ್ತು ಸಾಂಸ್ಕøತಿಕ ಪ್ರತ್ರಿμÁ್ಠನ, ಅಧ್ಯಕ್ಷ, ಕಲಬುರಗಿ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…