ಶ್ರೀ ಸತ್ಯಪ್ಪ ಸಂಕಪ್ಪ ಘಾಳಿ ಬೆಳಗಾವಿಯ ಮಧ್ಯಮ ವರ್ಗದ ನೇಕಾರ ಹಟಗಾರ ಕುಟುಂಬದಲ್ಲಿ ೧೮೬೨ ರಲ್ಲಿ ಜನಿಸಿದರು ಸರದಾರ ಹೈಸ್ಕೂಲ್ ನಲ್ಲಿ ಮೆಟ್ರಿಕ್ ಮುಗಿಸಿ ಮುಂಬೈಯಿಂದ ಬಿ ಏ (BA) ಪದವಿಧರಾದರು, ಮುಂದೆ, ಓದಿದ ಪಾಠ ಶಾಲೆ ಯಲ್ಲಿಯೇ, ಸರದಾರ ಹೈಸ್ಕೂಲ್ ನಲ್ಲಿ ಶಿಕ್ಷಕರೆಂದು ನೌಕರಿ ಮಾಡಿದರು ನಂತರ ರೆವೆನ್ಯೂ ಇಲಾಖೆಯಲ್ಲಿ ಉದ್ಯೋಗ ಪಡೆದು ಕ್ರಮೇಣ ಬಡ್ತಿ ಹೊಂದಿ ೧೮೯೧ ರಲ್ಲಿ ಹಲ್ಯಾಳ ತಾಲೂಕಿನ ಮಾಮಲೇದಾರ್ ಆದರು.
ತ್ಯಾಗವೀರ ಶಿರಸಂಗಿ ಲಿಂಗರಾಜರು ತಮ್ಮ ಸರ್ವ ಆಸ್ತಿ ಯನ್ನೂ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಮುಡುಪಿಟ್ಟ ಮಹಾ ದಾನಿ ಲಿಂಗೈಕ್ಯ ರಾಗುವ ಮುಂಚೆ (ಲಿ.೨೯-೮-೧೯೦೬) ತಾವು ಬರೆದಿಟ್ಟ ಮೃತ್ಯು ಪತ್ರದಲ್ಲಿ
“ಶಿರಸಂಗಿ ನವಲಗುಂದ ಟ್ರಸ್ಟಿನ” ೭ ಜನ ಟ್ರಸ್ಟೀ ಗಳಲ್ಲಿ ಶ್ರೀಯುತ ಸತ್ಯಪ್ಪ ಸಂಕಪ್ಪ ಘಾಳಿ ಯವರ ಹೆಸರು ಇತ್ತು, ಸಪ್ತ ಜನರಲ್ಲಿ ನಮ್ಮ ಸಮಾಜದ ಒಬ್ಬರು ಇದ್ದರು ಎಂದು ಹೇಳಲು ಅಭಿಮಾನ ಸಂಗತಿಯಾಗಿದೆ. ರಾವ್ ಬಹದ್ದೂರ್ ಗುರುಸಿದ್ದಪ್ಪ ಗಿಲ್ಗಿಂಚಿ ಇವರು ಸಂಸ್ಥಾಪಿಸಿದ “ಲಿಂಗಾಯತ ವಿದ್ಯಾಭಿವೃದ್ದಿ ಸಂಸ್ಥೆ ಧಾರವಾಡ” ಇದರ ಕಾರ್ಯದರ್ಶಿಯಾಗಿ ೧೯೧೮ ರಲ್ಲಿ ಸೇವೆ ಸಲ್ಲಿಸಿದ್ದಾರೆ .
ಶಿರಸಂಗಿ ಲಿಂಗರಾಜರು ಲಿಂಗೈಕ್ಯ ರಾದ ಹತ್ತು ವರುಷಗಳ ನಂತರ ೧೯೧೬ “ಶಿರಸಂಗಿ ನವಲಗುಂದ ಟ್ರಸ್ಟ್” ಸ್ಥಾಪನೆ ಗೊಂಡ ಮರು ವರುಷವೆ ೧೯೧೭ ರಲ್ಲಿ ಸರಕಾರಿ ನಿವೃತ್ತಿ ಹೊಂದಿ ಟ್ರಸ್ಟಿನ ಹುಜೂರ್ ಕಾರಭಾರಿಯಾಗಿ ೧೯೩೩ ವರೆಗೆ ಕಾರ್ಯನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಬಹಳಷ್ಟು ಲಿಂಗಾಯತ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ದುರ್ದೈವದಿಂದ ಅರ್ಧಾಂಗ ವಾಯುವಿಗೆ ತುತ್ತಾಗಿದ್ದರಿಂದ ೧೯೩೩ ರಲ್ಲಿ ಕೆಲಸದಿಂದ ನಿವೃತ್ತಿಗೊಂಡು ೧೯೩೭ ರಲ್ಲಿ ಶಿವಾಧೀನರಾದರು.
– ವಿನೋದ ಜನೆವೆರಿ, ತಾತ್ಕಾಲಿಕ ಜಿಲ್ಲಾ ಕಾರ್ಯದರ್ಶಿ, ಹಟಗಾರ ಸಮಾಜ, ಕಲಬುರಗಿ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…