ಕಲಬುರಗಿ: ಜೇವರ್ಗಿ ಕ್ಷೇತ್ರದ ಶಾಸಕರಾದ ಅಜಯಸಿಂಗ್ ತಂದೆಯಾದ ದಿ. ಮಾಜಿ ಸಿಎಂ ಎನ್ ಧರಂಸಿಂಗ್ ಜನ್ಮ ದಿನದ ನಿಮತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೋಮುವಾದಿ ಚಟುವಟುಕೆಯಲ್ಲಿ ತೊಡಗಿಸಿಕೊಂಡ ಶ್ರೀರಾಮಸೇನೆಯ ಅಧ್ಯಕ್ಷ ಸಿದ್ದಲಿಂಗ ಸ್ವಾಮಿಗೆ ಆಹ್ವಾನಿಸಿರುವುದು ಶಾಸಕ ಡಾ. ಅಜಯಸಿಂಗ್ ಕೋಮುವಾದದ ಪರವಾದ ಮೃದು ಧೋರಣೆ ಅನಾವರಣಗೊಂಡಂತಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಕೋಮುವಾದದ ವಿರುದ್ಧ ಸ್ಪಷ್ಟವಾಗಿ ಮತ್ತು ದೃಢತೆಯಿಂದ ಹೋರಾಟ ಮಾಡಲಾರದ್ದಕ್ಕಾಗಿಯೇ ದೇಶದಲ್ಲಿ ಕೋಮುದ್ವೇಷ ಬೆಳೆಯುತ್ತಿದೆ. ಭಾರತವು ಎಲ್ಲ ಮತ ಧರ್ಮದ ಜನತೆಯು ಕೂಡಿ ಬದುಕುವ ಬಹುತ್ವದ ಸಂಸ್ಕೃತಿ ಹೊಂದಿದೆ. ಇಂತಹ ಬಹುಸಾಂಸ್ಕೃತಿಕ ಪರಂಪರೆಯನ್ನು ನಾಶ ಮಾಡುತ್ತಿರುವವರನ್ನೇ ಕಾರ್ಯಕ್ರಮಕ್ಕೆ ಆಹ್ವಾನಿಸುವುದೆಂದರೇ ರಾಜಕೀಯ ಪಕ್ಷವೊಂದಕ್ಕೆ ಮತರಾಜಕಾರಣ ಮಾತ್ರ ಗುರಿಯಾಗಿದ್ದರೆ ದೇಶವು ಅಪಾಯದಲ್ಲಿದೆ ಎಂದೇ ಅರ್ಥ ಎಂದು ಪತ್ರಿಕಾ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಕೋಮುವಾದ ಮತ್ತು ಮೂಲಭೂತವಾದದ ವಿರುದ್ಧ ರಾಜಿರಹಿತ ಹೋರಾಟ ಮಾಡುವ ಮೂಲಕವೇ ದೇಶದಲ್ಲಿ ಶಾಂತಿ ಸೌಹಾರ್ದತೆ ಉಳಿಸಿ ನೈಜ ಅಭಿವೃದ್ಧಿ ಮಾಡಲು ಸಾಧ್ಯ. ಕಾಂಗ್ರೆಸ್ ಪಕ್ಷದ ನಿಲುವು ಸೆಕ್ಯೂಲರ್ ಆಗಿದ್ದು ಸಂವಿಧಾನ ಬಲಪಡಿಸುವುದೇ ಆಗಿದ್ದಲ್ಲಿ ಕೋಮುವಾದಿಗಳೊಂದಿಗೆ ಹೀಗೆ ಕೈ ಜೋಡಿಸುವುದು ಏಕೆ? ಅಧಿಕಾರಕ್ಕಾಗಿ ಇಂತಹ ರಾಜಿಗಳಿಗೆ ನಾಡು ಬಲಿಯಾಗುತ್ತದೆ ಎಂಬ ಎಚ್ಚರ ಬೇಕಾಗುತ್ತದೆ.
ಮೃದು ಕೋಮುವಾದದ ಪರ ಧೋರಣೆ ಕೈಬಿಟ್ಟು ನಿಜಾರ್ಥದಲ್ಲಿ ಜಾತ್ಯಾತೀತ ಪರಂಪರೆಗೆ ಬದ್ಧವಾಗಿ ನಡೆಯುವ ಪ್ರಬುದ್ಧತೆ ತೋರಬೇಕು ಎಂದು ಸಿಪಿಐಎಂ ಪಕ್ಷದ ಜೇವರ್ಗಿ ತಾಲ್ಲೂಕು ಕಾರ್ಯದರ್ಶಿ ಸುಭಾಶ ಹೊಸಮನಿ ಪ್ರಶ್ನಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…