ಕಾಳಗಿ: ತಾಲೂಕಿನ ಇಂಧನಕಲ್ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟೆಂಗಳಿ ವಲಯ ಘಟಕದಿಂದ ಟೆನ್ನಿಸ್ ಬಾಲ್ ಟೂರ್ನಮೆಂಟ್ ಸೀಸನ್ -3 ನ್ನು ಚಿಂತನ್ ಎಸ್. ರಾಠೋಡ್ ಅವರು ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪ್ರತಿಯೊಬ್ಬ ಕ್ರೀಡಾಪಟು ಕ್ರೀಡಾ ಮನೋಭಾವದಿಂದ ಆಡುವ ಮೂಲಕ ಕ್ರೀಡೆಯೊಂದಿಗೆ ಎಲ್ಲರ ಮನಸ್ಸನ್ನು ಗೆಲುವುದರೊಂದಿಗೆ, ಉತ್ತಮ ಆಟಗಾರರಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವ ಅವಕಾಶ ಪಡೆದುಕೊಳುವಂತಾಗಲಿ ಎಂದು ಹೇಳಿದರು.
ವೀರೆಂದ್ರ ವಾಲಿ ಭೀಮೇಶ್ವರ ದೇವಸ್ಥಾನ ಅಧ್ಯಕ್ಷರು ಟೆಂಗಳಿಯವರು ತಮ್ಮವತಿಯಿಂದ ಎಲ್ಲಾ ಕ್ರಿಕೆಟ್ ತಂಡಗಳಿಗೆ ಟಿ -ಶರ್ಟ್ ವಿತರಿಸಿದರು. 10 ಕು ಹೆಚ್ಚು ಕ್ರಿಕೆಟ್ ಟೀಮ್ ಗಳು ಟೂರ್ನಮೆಂಟ್ ನಲ್ಲಿ ಭಾಗವಹಿಸಿದರು.
ಈ ಸಂಧರ್ಭದಲಿ ಟೆಂಗಳಿ ವಲಯದ ಕರವೇ ಮುಖ್ಯಸ್ಥರಾದ ರಉಫ್ ಅಫ್ಖಾನ್,ಅರ್ಜುನ್ ರಾಠೋಡ್ ಬಿಜೆಪಿ ಮುಖಂಡರು ಟೆಂಗಳಿ, ಹಣಮಂತರಾಯ್ ಗ್ರಾಮ ಪಂಚಾಯತ್ ಸದಸ್ಯರು ಡೋಣುರ್, ಮಹಮ್ಮದ್ ಮುಸ್ತಫಾ ಗ್ರಾಮ ಪಂಚಾಯತ್ ಸದಸ್ಯರು ಟೆಂಗಳಿ, ಮಹಮ್ಮದ್ ಹನೀಫ್ ಸಾಬ್ ಅಫಖಾನ್ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಹನುಮಂತರಾಯ ಬಳ್ಲದೆ ಬಿಜೆಪಿ ಯುವ ಮುಖಂಡರು ಟೆಂಗಳಿ, ರೂಸ್ತುಮ್ ಕರವೇ ಜಿಲ್ಲಾ ಸಮಿತಿ ಸದಸ್ಯರು ಕಲಬುರಗಿ, ಲಿಂಗಬಸವ ಕರವೇ ತಾಲೂಕ ಯುವ ಘಟಕ ಅಧ್ಯಕ್ಷ ಕಾಳಗಿ, ಮುಸ್ತಾನ್ ಸಾಬ್ ಕೊರವಿ, ಕಾಂಗ್ರೇಸ್ ಮುಖಂಡರು ಕಲಗುರ್ತಿ, ಸುರೇಶ ಹೊಸಮನಿ ಕರವೇ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಅನೇಕ ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…