ನಾಡಿನ ಸಾಂಸ್ಕøತಿಕ ರಾಯಭಾರಿ ಕುವೆಂಪು

ಶಹಾಬಾದ: ನಾಡಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಈ ನಾಡಿನ ಸಾಂಸ್ಕøತಿಕ ರಾಯಭಾರಿ ಕುವೆಂಪು ಎಂದು ರಾವೂರಿನ ಮೊರಾರ್ಜಿ ದೇಸಾಯಿ ವಸತಿ ನಿಲಯದ ಪ್ರಾಂಶುಪಾಲ ಶಶಿಧರ್ ವಿ.ಸೋನಾರಕರ್ ಹೇಳಿದರು.

ಅವರು ಗುರುವಾರ ನಗರದ ಸರಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಕಸಾಪ ವತಿಯಿಂದ ಕುವೆಂಪು ಅವರ ಜನ್ಮ ದಿನದ ನಿಮಿತ್ತ ಆಯೋಜಿಸಲಾದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.

ಈ ನಾಡಿನ ಸಾಹಿತ್ಯ ಕ್ಷೇತ್ರದ ಶಾಶ್ವತ ನಾಯಕ ಕುವೆಂಪು ಎಂಬ ಸಂಗತಿಯನ್ನು ಕನ್ನಡ ಮನಸ್ಸುಗಳು ಅಂಗೀಕರಿಸಿದ್ದು ಬೇರೆ ಯಾವ ಸಾಹಿತಿಗೂ ಸಿಗದ ಗೌರವ ಕುವೆಂಪು ಅವರಿಗೆ ಶ್ರೀ ಸಾಮಾನ್ಯರಿಂದ ಸಿಕ್ಕಿದೆ.ಕಾರಣ ಅವರು ಕರ್ನಾಟಕ ರತ್ನ , ರಾಷ್ಟ್ರ ಕವಿ ಸೇರಿದಂತೆ ಅನೇಕ ಬಿರುದುಗಳನ್ನು ಪಡೆದಿರುವುದಕ್ಕೆ ಅಲ್ಲ. ಅವರು ತಮ್ಮ ಸಾಹಿತ್ಯದಲ್ಲಿ ಹೃದಯವಂತಿಕೆ, ವಿಶಾಲವಾದ ಮನೋಭಾವನೆ, ಮಾನವೀಯ ಮೌಲ್ಯಗಳನ್ನು ರಚಿಸಿದಕ್ಕೆ. ಅವರು ತಮ್ಮ ಅನಿಕೇತನ ಕವನದಲ್ಲಿ ವಿಶ್ವಮಾನವ ತತ್ವವನ್ನು ಹೇಳುವುದರ ಮೂಲಕ ಎಲ್ಲರ ಹೃದಯದಲ್ಲಿ ವಿರಾಜಮಾನರಾಗಿ ಉಳಿದಿದ್ದಾರೆ. ಅವರ ಕವಿತೆಯ ತಿರುಳನ್ನು ತಿಳಿದುಕೊಂಡರೆ ನಮ್ಮ ನಿಮ್ಮ ಮುಂದೆ ಮತ್ತೊಬ್ಬ ಬುದ್ಧ, ಅಂಬೇಡ್ಕರ್, ಬಸವಣ್ಣನವರನ್ನು ಕಾಣಬಹುದು.

ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಮದ್ರಕಿ ಮಾತನಾಡಿ, ಇಂದು ಸಂಕುಚಿತ ಮನೋಭಾವನೆಯಿಂದ ಮಾನವ ದಾನವವಾಗುತ್ತಾನೆ ಹೊರತು ವಿಶ್ವಮಾನವನಾಗಲು ಸಾಧ್ಯವಿಲ್ಲ. ವಿಶ್ವಮಾನವನಾಗಲು ಕುವೆಂಪು ಅವರು ಹೇಳಿದಂತೆ ಧರ್ಮ, ಜಾತಿ ಸಂಕೋಲೆಗಳ ಬಂಧನದಿಂದ ಮುಕ್ತರಾಗಿ ನನ್ನದು ಎಂಬ ಹೃದಯ ವೈಶ್ಯಾಲತೆಯ ಮನೋಭಾವನೆ ಬಂದಾಗ ಮಾತ್ರ ವಿಶ್ವಮಾನವರಾಗಲು ಸಾಧ್ಯ.ಅದಕ್ಕಾಗಿ ಕುವೆಂಪು ಅವರ ಸಾಹಿತ್ಯವನ್ನು ಅಧ್ಯಯನ ಮಾಡುವ ಅಗತ್ಯತೆ ಎಂದಿಗಿಂತಲೂ ಇಂದು ಅಗತ್ಯವಾಗಿದೆ ಎಂದರು.

ಹೊನಗುಂಟಾ ವಲಯ ಘಟಕದ ಅಧ್ಯಕ್ಷ ಪಿ.ಎಸ್.ಮೇತ್ರೆ ಮಾತನಾಡಿ,ಕುವೆಂಪು ಅವರಂತೆ ನೇರವಾಗಿ, ದಿಟ್ಟವಾಗಿ ಪುರೋಹಿತಶಾಹಿಯನ್ನು ವಿರೋಧಿಸಿ ಬರೆದ ಕವಿ.ದಾರ್ಶನಿಕರು ಕನ್ನಡ ನಾಡಿನಲ್ಲಿ ಬೆರಳಣಿಯಷ್ಟೇ. ಈ ನಾಡಿನ ನೊಂದ ವರ್ಗದ ದನಿಯಾಗಿ ರೈತರ ಪರವಾಗಿ ದಿಟ್ಟದನಿ ಎತ್ತಿದ ಕುವೆಂಪು ಸಾಹಿತ್ಯವನ್ನು ಪ್ರತಿಯೊಬ್ಬರು ಓದಿ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಕನ್ಯಾ ಪ್ರೌಢಶಾಲೆಯ ಮುಖ್ಯಗುರುಮಾತೆ ಪ್ರತಿಭಾ ಪ್ರಿಯದರ್ಶಿನಿ,ಕಸಾಪದ ಲೋಹಿತ್ ಕಟ್ಟಿ ಮಾತನಾಡಿದರು. ಕಸಾಪ ಜಿಲ್ಲಾ ಸಹ ಕಾರ್ಯದರ್ಶಿ ನಾಗಣ್ಣ ರಾಂಪೂರೆ, ಎಸ್.ಡಿ.ಎಮ್.ಸಿ ಅಧ್ಯಕ್ಷೆ ನಿರ್ಮಲ.ಎಸ್.ಶೆಟ್ಟಿ, ಶಿಕ್ಷಕರಾದ ಮಲ್ಲಿಕಾರ್ಜುನ ಪಟ್ಟಣ, ನಿತ್ಯಾನಂದ ಸಾಕರೆ, ಮಲ್ಲಿಕಾಬೇಗಂ, ಸುರೇಖಾ ಸಾಗರ,ಸಂಗಯ್ಯ.ಬಿ, ಖನ್ನಿಸ ಫಾತಿಮಾ ಸೇರಿದಂತೆ ಪಾಲಕರು ಹಾಗೂ ಶಾಲಾ ಮಕ್ಕಳು ಇದ್ದರು.

ಕನ್ನಡ ಪ್ರತಿಭಾ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಶಾಲಿನಿಗುರುಪಾದಯ್ಯ,ಭೂಮಿಕಾ ತಿಪ್ಪಣ್ಣ,ಸೌಜನ್ಯ ಸಂಜುಕುಮಾರಪೂರ್ಣೀಮಾ ಸದಾಶಿವ ಅವರನ್ನು ಸನ್ಮಾನಿಸಲಾಯಿತು.ಅಲ್ಲದೇ ಕನ್ನಡ ನಿಧಿ ಪ್ರಶಸ್ತಿ ಪಡೆದ ಶಿಕ್ಷಕಿ ಸುರೇಖಾ.ಪಿ.ಮೇತ್ರೆ ಅವರನ್ನು ಗೌರವಿಸಲಾಯಿತು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

8 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

10 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420