ಕಾಳಗಿ: ತಾಲೂಕಿನ ರಾಜಾಪೂರ ಗ್ರಾಮದ ಹಿರಿಯ ಬಿಜೆಪಿ ಮುಖಾಂಡರಾದ ಬ್ರಹ್ಮನಂದ್ ರೆಡ್ಡಿ ಪಟೇಲ್ ರ ನೇತೃತ್ವದಲ್ಲಿ 120 ಕ್ಕು ಹೆಚ್ಚು ಯುವಕರು ಹಾಗೂ ಹಿರಿಯರು ಕಲಬುರಗಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಹಾಗೂ ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ವ್ಹಿ. ರಾಠೋಡ್ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ನಂತರ ನಮ್ಮ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಬ್ರಹ್ಮನಂದ್ ರೆಡ್ಡಿ ಪಟೇಲ್, ನಮ್ಮ ಗ್ರಾಮದಲ್ಲಿ ನಾನೆಂದರೆ ಬಿಜೆಪಿ, ಬಿಜೆಪಿ ಎಂದರೆ ನಾನು ಎನ್ನುವ ರೀತಿಯಲ್ಲಿತ್ತು,ಆದರೆ ವಲಸಿಗರು ಹಾಗೂ ಮೂಲ ಬಿಜೆಪಿ ಗರ ಮಧ್ಯ ತಾರತಮ್ಯ, ಮತ್ತು ಜಾತೀಯತೆ ಹೆಚ್ಚಾಗಿದ್ದು, ರೈತರ ಮತ್ತು ಬಡವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬದಲು , ತುಟಿಗೆ ಬೆಲ್ಲಾ ಹಚ್ಚಿ ಬಾಯಿಗೆ ಮಣ್ಣು ತುಂಬುವ ಕೆಲಸ ಬಿಜೆಪಿ ಮಾಡುತ್ತಿದ್ದು, ಅದಕ್ಕಾಗಿ ಬಿಜೆಪಿ ಪಕ್ಷ ತೊರೆದು,
ಕಾಂಗ್ರೇಸ್ ಪಕ್ಷ ಹಾಗೂ ಸುಭಾಷ್ ರಾಠೋಡ್ ರ ಚಿಂತನೆಗಳಿಗೆ ಮನಸೋತು ನನ್ನ ಬೆಂಬಲಿಗರೊಂದಿಗೆ ಕಾಂಗ್ರೇಸ್ ಪಕ್ಷ ಸೇರಿದ್ದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ದೇವಿಂದ್ರಪ್ಪ ಹೆಬ್ಬಾಳ, ಬಸ್ಯಯ ಗುತ್ತೇದಾರ, ಭೀಮರಾವ್ ಟಿ ಟಿ, ಬಸವರಾಜ್ ಪಾಟೀಲ್, ವೇದಪ್ರಕಾಶ್ ಮೊಟಗಿ, ರಾಘವೇಂದ್ರ ಗುತ್ತೇದಾರ, ಶಿವಾನಂದ ಮಜ್ಜಗಿ, ಅಪ್ಪಾರಾವ್ ಸೌಕಾರ್, ಬಸವರಾಜ್ ಕೊಲಕುಂದಿ, ಗಣಪತಿ ಹಾಳಕಾಯಿ,ಜಗನಾಥ್ ಚಂದಕೇರಿ, ರವಿದಾಸ್ ಪತಂಗೆ, ಗೌರಿಶಂಕರ್ ಗುತ್ತೇದಾರ, ಜಿಯಾವೋದ್ದೀನ್ ಸೌದಾಗರ್, ಸೇರಿದಂತೆ ಅನೇಕ ಕಾಂಗ್ರೇಸ್ ಮುಖಂಡರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…