ಬಿಸಿ ಬಿಸಿ ಸುದ್ದಿ

ಭರವಸೆಯ ಬೆಳಕು: ಶಿಕ್ಷಣ ಕ್ಷೇತ್ರದ ಭರವಸೆ ಹೆಚ್ಚಿಸುವ ಪುಸ್ತಕ

ಕಲಬುರಗಿ: ಪ್ರಸ್ತುತ ಶಿಕ್ಷಣ ರಚನಾತ್ಮಕ ಅನುಷ್ಠಾನವಾಗುತ್ತಿದೆ. ಶಿಕ್ಷಕರು, ಅಧಿಕಾರಿಗಳು ಹಾಗೂ ಸಮುದಾಯ ಜೊತೆಗೂಡಿ ಧನಾತ್ಮಕ ಆಲೋಚನೆಯೊಂದಿಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕು.

ಈ ಭೂಮಿಯ ಮೇಲೆ ಸಮೃದ್ಧ ಮಾನವ ಸಂಪನ್ಮೂಲ ತಯಾರಿಸುವ ಏಕೈಕ ಕ್ಷೇತ್ರ ಶಿಕ್ಷಣ. ಈ ದೇಶದಲ್ಲಿ ಅದೊಂದು ಕ್ಷೇತ್ರ ಸುಧಾರಣೆಯಿಂದ ಎಲ್ಲವೂ ಸುಧಾರಣೆಯಾಗಲಿದೆ. ಈ ಕ್ಷೇತ್ರ ಬದಲಾಗಲು ಇಲ್ಲಿರುವ ಶಿಕ್ಷಕರು, ಅಧಿಕಾರಿಗಳು, ಶಾಲೆಗಳು, ಪಾಲಕರು ತಮ್ಮೊಳಗೆ ಗುಣಾತ್ಮಕ ಬಲಾವಣೆಯೊಂದಿಗೆ ಮುನ್ನುಗ್ಗಬೇಕಿದೆ. ಇವರೆಲ್ಲರೂ ರಚನಾತ್ಮಕವಾಗಿ ಆಲೋಚಿಸಬೇಕಿದೆ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಈ ಕ್ಷೇತ್ರದ ಫಲಾನುಭವಿಗಳಾಗುತ್ತಾರೆ. ಎಲ್ಲರಲ್ಲಿಯೂ ಗುಣಾತ್ಮಕ ಬದಲಾವಣೆಯಾಗದ ಹೊರತು ಸಮೃದ್ಧ ಮಾನವ ಸಂಪನ್ಮೂಲ ರಚನೆ ಗಗನಕುಸುಮವಾಗಿದೆ.

ಈ ಪುಸ್ತಕದಲ್ಲಿ ಶಿಕ್ಷಣ ಕ್ಷೇತ್ರದ ಮಹತ್ವದ ಫಲಾನುಭವಿಗಳಾದ ಶಾಲೆಗಳು, ಶಿಕ್ಷಕರು, ಅಧಿಕಾರಿಗಳು ಮತ್ತು ಪಾಲಕರನ್ನು ಗುರಿಯಾಗಿಸಿಕೊಂಡು ಅವರಲ್ಲಿ ಗುಣಾತ್ಮಕ, ರಚನಾತ್ಮಕ ಬದಲಾವಣೆ ತರಲು ಪೂರಕವಾಗುವ ಲೇಖನಗಳನ್ನು ಒಳಗೊಂಡಿದೆ. ಶೈಕ್ಷಣಿಕ ಕ್ಷೇತ್ರ ಗುಣಾತ್ಮಕ ಅಂಶಗಳನ್ನು ಪರಿಚಯಿಸುತ್ತಾ ಅವುಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಪರಿಚಯಿಸುವ ಮತ್ತು ಪಸರಿಸುವ ಕೆಲಸವನ್ನು ಈ ಪುಸ್ತಕ ಮಾಡಲಿದೆ.

ಈ ಪುಸ್ತಕ ಶಿಕ್ಷಕರ ಕೈಪಿಡಿಯಾದರೆ, ಮಕ್ಕಳ ಜ್ಞಾನದ ಬಂಢಾರವಾಗಲಿದೆ, ಪಾಲಕರ ದಾರಿದೀಪವಾಗುತ್ತದೆ. ಶೈಕ್ಷಣಿಕ ಮಾರ್ಗದರ್ಶಿಯಾಗುತ್ತದೆ. ಶಿಕ್ಷಣ ಕ್ಷೇತ್ರದ ಸಂಪನ್ಮೂಲಗಳ ಒಳನೋಟವಾಗಲಿದೆ ಎಂಬುವುದು ಇದರ ಪ್ರಮುಖವಾದ ಆಶೆಯ. “ಭರವಸೆಯ ಬೆಳಕು” ಶಿಕ್ಷಣ ಕ್ಷೇತ್ರದ ಭರವಸೆಯನ್ನು ಹೆಚ್ಚಿಸುವ ಪುಸ್ತಕ ಎಂದು ಇತ್ತೀಚಗೆ ಪುಸ್ತಕದ ಮುಖಪುಟ ಬಿಡುಗಡೆಗೊಳಿಸಿ ಡಾ.ವಾಸುದೇವ ಸೇಡಂ ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಿಕ್ಷಣ ಪ್ರೇಮಿ ಕಾಶೀನಾಥ ಮರತೂರ, “ಭರವಸೆಯ ಬೆಳಕು” ಪುಸ್ತಕವು ಶಿಕ್ಷಣ ಕ್ಷೇತ್ರವನ್ನು ಅತ್ಯಂತ ಧನಾತ್ಮಕ ದೃಷ್ಠಿಯಿಂದ ಗಮನಿಸಿ ಒಳ್ಳೆಯ ಅಂಶಗಳನ್ನು ಬಿಚ್ಚಿಡುತ್ತದೆ. ಶಿಕ್ಷಣ ಕ್ಷೇತ್ರವನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತದೆ. ಈ ಪುಸ್ತಕವು ಯುವಕರು, ಪಾಲಕರು, ಶಿಕ್ಷಕರು ಅಧಿಕಾರಿಗಳಿಗೆ ಮಾಹಿತಿ ನೀಡುವುದರ ಜೊತೆಗೆ ಕೆಲಸಮಾಡಲು ಪ್ರೋತ್ಸಾಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪುಸ್ತಕದ ಲೇಖಕರಾದ ಕೆ.ಎಂ.ವಿಶ್ವನಾಥ ಮರತೂರ, ಮಾತನಾಡಿ “ಭರವಸೆಯ ಬೆಳಕು” ಪುಸ್ತಕವು ನನ್ನ ಕ್ಷೇತ್ರಮಟ್ಟದಲ್ಲಿ ಕೆಲಸ ಮಾಡಿದ ಅನುಭವಗಳ ಅಕ್ಷರ ರೂಪವಾಗಿದೆ. ಇಂದು ವಾಸುದೇವ ಸೇಡಂ ಅವರು ಪುಸ್ತಕದ ಮುಖಪುಟ ಬಿಡಿಗಡೆಗೊಳಿಸಿದ್ದು ಅತ್ಯಂತ ಸಂತೋಷವಿದೆ. ಈ ಪುಸ್ತಕ ನನ್ನ ಬರವಣಿಗೆ ಬದುಕಿನ ಮತ್ತೊಂದು ಮೈಲಿಗಲ್ಲಾಗುತ್ತದೆ. ಕ್ಷೇತ್ರದಲ್ಲಿ ಅನೇಕ ಧನಾತ್ಮಕ ಅಂಶಗಳನ್ನು ಹಿಡಿದಿಡುವ ಪ್ರಯತ್ನ ಮಾಡಿರುವೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಗುಣಾತ್ಮಕ ಶಿಕ್ಷಣಕ್ಕೆ ಕೊಡುಗೆ ಕೊಡಬೇಕು ಎಂದು ಆಶೆಯವನ್ನು ಹೊಂದಿದೆ ಎಂದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

7 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

7 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

7 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

24 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago