ಬಿಸಿ ಬಿಸಿ ಸುದ್ದಿ

ಜ್ಞಾನವನ್ನು ಜಗತ್ತಿಗೆ ಹಂಚಿದ ಜಗತ್ತಿನ ಏಕೈಕ ಸಂತ ಸಿದ್ದೇಶ್ವರ ಸ್ವಾಮೀಜಿ

ಶಹಾಬಾದ: ಜಗತ್ತಿನಲ್ಲಿಯೇ ಬೆಲೆ ಕಟ್ಟಲಾಗದ ವಸ್ತುವಾದ ಜ್ಞಾನವನ್ನು, ಪಾಂಡಿತ್ಯವನ್ನು ಜನಸಮುದಾಯಕ್ಕೆ ಹಂಚಿದ ಜಗತ್ತಿನ ಏಕೈಕ ಸಂತ ಸಿದ್ದೇಶ್ವರ ಸ್ವಾಮೀಜಿಗಳು ಎಂದು ಉದ್ಯಮಿ ನಿರಂಜನ್ ಗೊಳೇದ್ ಹೇಳಿದರು.

ಅವರು ಗುರುವಾರ ನಗರದ ಕನ್ನಡಭವನದಲ್ಲಿ ಕಸಾಪ ತಾಲೂಕಾ ಘಟಕದ ವತಿಯಿಂದ ಆಯೋಜಿಸಲಾದ ಸಿದ್ದೇಶ್ವರ ಸ್ವಾಮೀಜಿಗಳ ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ವಾಮೀಜಿಯವರ ಅಗಲಿಕೆ ವೈಯಕ್ತಿಕ ನನಗೆ ಹಾಗೂ ನಾಡಿಗೆ ತುಂಬಲಾರದ ನಷ್ಟವಾಗಿದೆ.ಅವರ ಪ್ರವಚನದಿಂದ ಪ್ರಭಾವಿತನಾದ ನಾನು 2014 ರಲ್ಲಿ ಶಹಾಬಾದನಲ್ಲಿ ಪ್ರವಚನ ಕಾರ್ಯಕ್ರಮಕ್ಕೆ ಕರೆತರುವಲ್ಲಿ ಯಶಸ್ವಿಯಾದೆವು. ಅದು ಮರೆಯಲಾಗದ ದಿನವಾಗಿದೆ. ಬಡವರಿಗೆ ಹೆಚ್ಚಿನ ಅದ್ಯತೆ ನೀಡುತ್ತಿದ್ದರು. ನುಡಿದಂತೆ ನಡೆದರು.ನಡೆದಂತೆ ನುಡಿದ ಅವರೊಬ್ಬ ಜ್ಞಾನ ಯೋಗಿಯಾಗಿದ್ದರು. ಅವರನ್ನು ಕಾಣಲು ಅಪಾರ ಜನಸ್ತೋಮ ಸೇರುತ್ತಿತ್ತು ಸಿದ್ದೇಶ್ವರ ಸ್ವಾಮಿಗಳ ವ್ಯಕ್ತಿತ್ವ, ಸಿದ್ಧಾಂತ ನಮ್ಮೆಲ್ಲರಿಗೂ ಆದರ್ಶವಾಗಬೇಕು ಎಂದರು.

ಕಸಾಪ ಮಾಜಿ ತಾಲೂಕಾಧ್ಯಕ್ಷ ಮೃತ್ಯುಂಜಯ್ ಹಿರೇಮಠ ಮಾತನಾಡಿ, ತನಗಾಗಿ ಬದುಕದೆ, ಸಮಾಜಕ್ಕಾಗಿ ಬದುಕಿದ ಮಹಾನ್ ಸಂತ್ ಸಿದ್ದೇಶ್ವರ ಶ್ರೀಗಳಾಗಿದ್ದು, ಅವರ ಸರಳತೆಯ ಜೀವನದ ಶೈಲಿ ಮೈಗೂಡಿಸಿಕೊಳ್ಳಬೇಕು ಎಂದ ಅವರು ಪದವಿ, ಸಂಪತ್ತು ಎಂದು ಅಪೇಕ್ಷಮಾಡದೆ ಅವರಿಗಾಗಿ ಬಂದ ಪ್ರಶಸ್ತಿ, ಗೌರವಗಳನ್ನು ನಯವಾಗಿ ತಿರಸ್ಕರಿಸಿದವರು ಎಂದರು.

ವೀರಶೈವ ಸಮಾಜದ ಮಾಜಿ ಅಧ್ಯಕ್ಷ ವಿಜಯಕುಮಾರ ಮುಟ್ಟತ್ತಿ ಮಾತನಾಡಿ, ಶ್ರೀಗಳ ಕುರಿತಾಗಿ ಅವರ ಹಾಡುಗಳು, ಪ್ರವಚನಗಳು ಸಹ ನನನ್ನು ಆಕರ್ಷಿಸಿತು.ಯೋಗದ ಜೊತೆಗೆ ದೇಹ, ಮನಸ್ಸು ಮೂಲಕ ಜ್ಞಾನದ ಕಡೆಗೆ ಹೋಗಿದ್ದ ಅವರು ಜನರ ಹೃದಯ ಗ್ರಂಥಿಗಳಲ್ಲಿ ಸದಾ ಉಳಿದ ಸಂತ ಎಂದರು.

ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ, ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ, ಕಸಾಪ ಜಿಲ್ಲಾ ಸಹಕಾರ್ಯದರ್ಶಿ ನಾಗಣ್ಣ ರಾಂಪೂರೆ,ಶರಣಗೌಡ ಪಾಟೀಲ ಗೋಳಾ(ಕೆ), ಗೌರವ ಕಾರ್ಯದರ್ಶಿಗಳಾದ ಶರಣು ವಸ್ತ್ರದ್, ಬಸವರಾಜ ಮದ್ರಿಕಿ,ಬಾಬುರಾವ ಪಂಚಾಳ, ಅಪ್ಪಾರಾವ ನಾಗಶೆಟ್ಟಿ, ಸಿದ್ಧಲಿಂಗಯ್ಯ ಹಿರೇಮಠ, ರಾಜು ಕೋಬಾಳ, ಅಮೃತ ಫುಲಸೆ, ಲೋಹಿತ್ ಕಟ್ಟಿ, ದಶರಥ ಕೋಟನೂರ್ ಸೇರಿದಂತೆ ಅನೇಕರು ಇದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago