ಬಿಸಿ ಬಿಸಿ ಸುದ್ದಿ

ಹಿತ್ತಲಶಿರೂರ ಗ್ರಾಮದಲ್ಲಿ ಗ್ರಾಮ ಓನ್‌ ನಾಗರಿಕ ಸೇವಾ ಕೇಂದ್ರ ಚಾಲನೆ

ಆಳಂದ: ನಗರಕ್ಕೆ ಸೀಮಿತವಾಗಿರುವ ಸರಕಾರದ ಹಲವಾರು ಯೋಜನಾ ಸೌಲಭ್ಯಗಳು ಗ್ರಾಮೀಣ ಭಾಗದಲ್ಲಿ ಆರಂಭವಾಗಿರೋದು ಹೆಮ್ಮೆಯ ವಿಷಯ ಇದರ ಸೌಲಭ್ಯಗಳನ್ನು ಜನರು ಪಡೆದುಕೊಳ್ಳಲೆಂದು ಜಿಲ್ಲಾ ಕಾರ್ಮಿಕ ಇಲಾಖೆ 2ನೇ ವೃತ್ತದ ಹಿರಿಯ ಕಾರ್ಮಿಕ ನಿರೀಕ್ಷಕರಾದ ರವೀಂದ್ರಕುಮಾರ ಬಳ್ಳೂರ ಹೇಳಿದರು.

ನಿನ್ನೆ ತಾಲ್ಲೂಕಿನ  ಹಿತ್ತಲಶಿರೂರ ಗ್ರಾಮದಲ್ಲಿ ಗ್ರಾಮ ಓನ್‌  ನಾಗರಿಕ ಸೇವಾ ಕೇಂದ್ರ ಹಾಗೂ ಕಾರ್ಮಿಕ ಜನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಗ್ರಾಮೀಣ ಭಾಗದ ಜನರು ನಗರಕ್ಕೆ ಬಂದು ತಮ್ಮ ಸಮಯ ಹಾಳು ಮಾಡಿಕೊಳ್ಳದೆ ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡಿದೆ ನೇರವಾಗಿ ಇಲ್ಲಿಗೆ ಬಂದು ತಮ್ಮ ಕಾರ್ಯ ಮಾಡಿಕೊಳ್ಳಬೇಕು. ಸೇವಾ ಕೇಂದ್ರವು ಜನರಿಗೆ ಉತ್ತಮವಾದ ಸೇವೆ ನೀಡುವ ಮೂಲಕ ಬಡವರ, ರೈತ, ಕೂಲಿಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿ ಕಾರ್ಯ ಮಾಡಿ ಮಾದರಿ ಗ್ರಾಮ ಮಾಡಲೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಎಐಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಪ್ರಭುದೇವ ಯಳಸಂಗಿ ಮಾತನಾಡುತ್ತಾ  ರೈತರು ಕಾರ್ಮಿಕರು  ಸಂಘಟನೆ ಮಾಡಿ ಸರ್ಕಾರದ ಹಲವಾರು ಯೋಜನೆಗಳು ಹೋರಾಟದ ಮೂಲಕ ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬೇಕಾಗುತ್ತದೆ ಅದಕ್ಕಾಗಿ ಇಂದಿನ ಸಂದರ್ಭದಲ್ಲಿ ಸಂಘಟನೆ ಅತಿ ಅವಶ್ಯಕವಾಗಿದೆ.ಸರಕಾರವು ಕಾರ್ಮಿಕರ ಕೆಲಸಗಳಿಗೆ ಸಮಯ ವಿಳಂಬ ಮಾಡದೆ ನಿಗದಿತ ಸಮಯದಲ್ಲಿ ಸೇವೆ ನೀಡಲೆಂದು ಎಂದು ಹೇಳಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯ ಹಿತ್ತಲ ಶಿರೂರ ದರ್ಗಾದ ಗರಿಬ ಶಾವಲಿ ವಹಿಸಿದರು.

ಜಿಲ್ಲಾ ಸೇವಾ ಸಿಂಧು ಹಾಗೂ ಗ್ರಾಮೀಣ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಅರವಿಂದ ಬಾಡಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಗ್ರಾಮ ಓನ ಸಂಯೋಜಕರಾದ ಸಂಗಣ್ಣ, ಜೇವರ್ಗಿ ಸಾಹಿತಿಗಳಾದ ಮಂಜುನಾಥ ಶಿವಗೊಂಡ, ಎಐಟಿಯುಸಿ ಜಿಲ್ಲಾಧ್ಯಕ್ಷರಾದ ಎಚ್ಎಸ್ ಪದಕಿ, ಅಖಿಲ ಭಾರತ ಕಿಸಾನ ಸಭಾ (ಎಐಕೆಎಸ್) ಜಿಲ್ಲಾ ಕಾರ್ಯದರ್ಶಿಯಾದ ಭೀಮಶಂಕರ ಮಾಡಿಯಾಳ, ಭಾರತೀಯ ಮಹಿಳಾ ಒಕ್ಕೂಟ(NFIW) ಜಿಲ್ಲಾ ಮುಖಂಡರಾದ ಪದ್ಮಾವತಿ ಮಾಲಿಪಾಟೀಲ, ಜನಪರ ಹೋರಾಟಗಾರ ನ್ಯಾಯವಾದಿ ಹನುಮಂತರಾಯ ಅಟ್ಟೂರ, ಕೆಎಸ್ಆರಟಿಸಿ ಕಾರ್ಮಿಕ ಸಂಘಟನೆಯ ಮುಖಂಡರಾದ ಮಲ್ಲಿಕಾರ್ಜುನ ಮನಗುಂಡಿ ಹಾಗೂ ಮಲ್ಲಿನಾಥ ಸನಗುಂದಿ, ಆಳಂದ ತಾಲೂಕ ಕಟ್ಟಡ ಕಾರ್ಮಿಕ ಸಂಘಟನೆಯ ಅಧ್ಯಕ್ಷರಾದ ಲಕ್ಷ್ಮೀಬಾಯಿ ಅಷ್ಟಗಿ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಕಲ್ಮೇಶ ಮಾಲಿಪಾಟೀಲ, ಶರಣಬಸಪ್ಪ ಕಲಶೆಟ್ಟಿ,ಖಾಸಿಂ ಪಟ್ಟಣ, ಲಕ್ಷ್ಮಣ ಮಡಿವಾಳ, ವಿಜಯಕುಮಾರ ಕುನ್ನೆರಿ, ಚಂದಮ್ಮ ಬನಶೆಟ್ಟಿ, ಗುರುಶರಣ ಪೊಲೀಸ ಪಾಟೀಲ, ಆಗಮಿಸಿದ್ದರು.

ಗ್ರಾಮ ಓನ್ ಕಾರ್ಯನಿರ್ವಹಕಿ ವಿಜಯಲಕ್ಷ್ಮಿ ಯಳಸಂಗಿ ನಿರೂಪಿಸಿದರು.ಕಲ್ಯಾಣಿ ತುಕ್ಕಾಣಿ ಸ್ವಾಗತಿಸಿದರು ಎಲ್ಲಪ್ಪ ಮಾಂಗ್ ವಂದಿಸಿದರು. ಕಾರ್ಯಕ್ರಮದಲ್ಲಿ ಶಿವಲಿಂಗಮ್ಮ ಲೆ೦ಗಟೀಕರ,ಶರಣಮ್ಮ ಕೋಟನೂರ, ಲಕ್ಷ್ಮಿ ಸೇಡಮ, ಸರಿತಾ ಸೇರಿದಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

8 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

8 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

8 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago