ಬಿಸಿ ಬಿಸಿ ಸುದ್ದಿ

ಸರಕಾರದ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ: BJPಯಿಂದ ರೌಡಿ ಎಲೆಮೆಂಟ್ಸ್ ಗೆ ಪ್ರೇರಣೆ

  • ಸರ್ಕಾರದ ಎಲ್ಲಾ ಇಲಾಖೆಗಳ ವರ್ಗಾವಣೆ‌ ಈ ಕೂಡಲೇ ತಡೆಹಿಡಿದು ಸ್ಯಾಂಟ್ರೋ ರವಿ ಪಾತ್ರದ ಬಗ್ಗೆ ತನಿಖೆಯಾಗಲಿ
  • ಕಾಟಾಚಾರದ ಕೆಡಿಪಿ ಸಭೆ ಕರೆಯಲಾಗುತ್ತಿದೆ. ರೈತರ ವಿಷಯ ಚರ್ಚೆ ಮಾಡಲು‌ ಸರ್ಕಾರಕ್ಕೆ/ ಸಚಿವರಿಗೆ ಮನಸಿಲ್ಲ.
  • ರಾಜ್ಯ ಸರ್ಕಾರವನ್ನು ಬಿಜೆಪಿ ನಡೆಸುತ್ತಿಲ್ಲ‌ ಬದಲಿಗೆ ರೌಡಿ ಎಲೆಮೆಂಟ್ಸ್ ನಡೆಸುತ್ತಿದ್ದಾರೆ ಎಂದು ಅನಿಸುತ್ತದೆ.

ಕಲಬುರಗಿ: ಕರ್ನಾಟಕ ತನ್ನ ಪ್ರಗತಿಪರತೆಗೆ ಹೆಸರಾಗಿತ್ತು ಆದರೆ ಬಿಜೆಪಿ ಅಧಿಕಾರಕ್ಕೆ ಬಂದ  ಮೇಲೆ ಭ್ರಷ್ಟಾಚಾರದಿಂದಾಗಿ ಕುಖ್ಯಾತಿ ಪಡೆಯುತ್ತಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತ್ತಿದ್ದರು.

ಬಿಜೆಪಿ ಪಕ್ಷ ಬ್ರೋಕರ ಜನತಾ ಪಕ್ಷವಾಗಿದೆ ಅದರ ಅಡಿಯಲ್ಲಿ ವಿಧಾನಸೌಧ ವನ್ನು ಬಿಗ್ಗೆಸ್ಟ್ ಮಾಲ್ ಆಗಿ ಪರಿವರ್ತನೆ ಮಾಡಲಾಗಿದೆ. ಕಾಮಗಾರಿ ಖರೀದಿ, ಉದ್ಯೋಗ ಖರೀದಿ, ವರ್ಗಾವಣೆ ಸೇರಿದಂತೆ ಪ್ರಮುಖ ವ್ಯವಹಾರಗಳು‌ ನಡೆಯುತ್ತಿವೆ ಇದನ್ನು ನಡೆಸಲು ಬೆಸ್ಟ್ ಸೇಲ್ಸಮೆನ್ಗಳು ಕೂಡಾ ಇದ್ದಾರೆ.

ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಸೆಲ್ಸಮೆಲ್ ಆಗಿದ್ದಾರೆ. ಒಬ್ಬ ಎಂ ಎಲ್‌ಎ‌ ಪಿಎಸ್ ಐ ನೇಮಕಾತಿಗೆ ಸಂಬಂಧಿಸಿದಂತೆ ರೋಲ್ ಕಾಲ್ ಮಾಡಿದ್ದಾರೆ.  ಇತ್ತೀಚಿಗೆ ಒಬ್ಬ ಜೆಇ ಹತ್ತು ಲಕ್ಷ ಹಣದ ಬ್ಯಾಗ್ ನೊಂದಿಗೆ ಸಿಕ್ಕಿ ಬಿದ್ದಿದ್ದಾರೆ. ಇವರಿಗೆ ಅದೇಗೆ ಧೈರ್ಯ ಬಂತು ? ಹಣ ಯಾರಿಗೆ ಕೊಡಲು ತೆಗೆದುಕೊಂಡು‌ಹೋಗುತ್ತಿದ್ದ‌ ? ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸಿಎಂ ಹೈಕಮಾಂಡ್ ಗೆ ಮಧ್ಯಮರ್ತಿ,‌ ಎಂಎಲ್ ಎ ಗಳು ಸಚಿವರಿಗೆ ಮಧ್ಯವರ್ತಿಗಳು. ಅಧಿಕಾರಿಗಳು ಎಂಎಲ್‌ಎ ಗಳಿಗೆ ಮಧ್ಯವರ್ತಿಗಳಾಗಿದ್ದಾರೆ. ಜೊತೆಗೆ ಇನ್ನೂ ಕೆಲವು ರೌಡಿಗಳು ಕೂಡಾ ಮಧ್ಯವರ್ತಿಗಳಾಗಿದ್ದಾರೆ. ಇದನ್ನು ನೋಡಿದರೆ ಸಿಎಂ ಸರ್ಕಾರ ನಡೆಸುತ್ತಿದ್ದಾರೆ ಎನಿಸುತ್ತಿಲ್ಲ. ಸರ್ಕಾರದಲ್ಲೂ ರೌಡಿ ಮೋರ್ಚಾ ಓಪನ್ ಮಾಡಿದ್ದಾರೆ. ಸ್ಯಾಂಟ್ರೋ ರವಿ ಎನ್ನುವವನು ಸಿಎಂ ಗೆ ಹತ್ತಿರದವನಾಗಿದ್ದಾನೆ. ಈತ ಆಡಿಯೋ ಒಂದರಲ್ಲಿ ತಾನು ಅಧಿಕಾರಿಗಳ ವರ್ಗಾವಣೆ ಮಾಡಿಸುತ್ತೇನೆ ಎಂದಿದ್ದಾನೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದರು.

ಈತ ಸಿಎಂ ಜೊತೆ, ಅವರ ಫ್ಯಾಮಲಿ ಜತೆ ಹಾಗೂ ಸಚಿವರೊಂದಿಗೆ ಕೂಡಾ ಇದ್ದಾರೆ. ಇದನ್ನು ನೋಡಿದರೆ ಬಿಜೆಪಿಯವರು ಅಧಿಕಾರ ಹಿಡಿಯಲು ಯಾರ ಯಾರ ಕಾಲು ಹಿಡಿದಿದ್ದಾರೆ ಎನಿಸುತ್ತಿದೆ. ಇದೆನಾ ಆಡಳಿತ ನಡೆಸುವ ರೀತಿ? ಎಲ್ಲಿಗೆ ಹೋಯ್ತು ಕರ್ನಾಟಕದ ಗೌರವ.  ಯಾರು ಕಂಬಿ ಎಣಿಸಬೇಕಿತ್ತೋ ಅವರು ಕುಮಾರಕೃಪಾದಲ್ಲಿ ಕುಳಿತು ಡೀಲ್ ಮಾಡುತ್ತಿದ್ದಾರೆ‌‌. ಕೆಲ ಪ್ರಶ್ನೆಗಳಿಗೆ ಸಿಎಂ ಅಥವಾ ಹೋಂ ಮಿನಿಸ್ಟರ್ ಉತ್ತರ ಕೊಡಬೇಕು. ಮಾಜಿ ಸಿಎಂ ಒಬ್ರು ಹೇಳುತ್ತಾರೆ ರವಿ ಮೂಲಕ ಮೈತ್ರಿ ಸರ್ಕಾರ ಬೀಳಿಸಿದ್ದಾರೆ ಎಂದಿದ್ದಾರೆ. ಈ ಹಿಂದಿನ ಸತ್ಯಾಂಶ ಜನರಿಗೆ ಬಿಜೆಪಿ ತಿಳಿಸಲಿ ಎಂದು ಅವರು ಆಗ್ರಹಿಸಿದರು.

ಈ ಬಗ್ಗೆ ಮಾತನಾಡಬೇಕಿದ್ದ ಬಿಜೆಪಿ ಅಧ್ಯಕ್ಷ ಕಟೀಲ್ ಯಾಕೆ ಮಾತನಾಡುತ್ತಿಲ್ಲ. ಭ್ರಷ್ಟಚಾರ ಹಗರಣ ಬಂದಾಗ ಅವರ ಬಾಯಿ ಬಂದ್ ಆಗುತ್ತದೆ. ರವಿಗೆ ಕುಮಾರ ಕೃಪಾದಲ್ಲಿ ಇರಲು ಅವಕಾಶ ಕೊಟ್ಟಿದ್ದು ಯಾರು ? ಈ ಬಗ್ಗೆ ಸತ್ಯಾಂಶ ಹೊರಬರಲಿ. ಪೊಲೀಸ್ ಅಧಿಕಾರಿಗಳು ರವಿಗೆ ಫೋನ್ ಮಾಡಿ  ವರ್ಗಾವಣೆಗೆ ಕೇಳುತ್ತಿದ್ದಾರೆ.  ತನಿಖಾ ಸಂಸ್ಥೆಗಳು ಯಾಕೆ ಸುಮ್ಮನಿವೆ. ತನಿಖಾ ಸಂಸ್ಥೆಗಳು ಕೇವಲ ಕಾಂಗ್ರೆಸ್ ನಾಯಕರ ವಿರುದ್ದ ಮಾತ್ರವೇ?  ಈ ಬಗ್ಗೆ ಸ್ವಯಂ ಪ್ರೇರಿತ ದೂರು ಯಾಕೆ ದಾಖಲಿಸಿಕೊಳ್ಳುತ್ತಿಲ್ಲ.? ಗೃಹ ಸಚಿವರಿಗೆ ಯಾರು ತಡೆಯುತ್ತಿದ್ದಾರೆ? ಎಂದು ಖರ್ಗೆ ಪ್ರಶ್ನಿಸಿದರು.

ಸರ್ಕಾರ ಈ ಕೂಡಲೇ ಎಲ್ಲ ಇಲಾಖೆಗಳ ವರ್ಗಾವಣೆ ನಿಲ್ಲಿಸಿ ತನಿಖೆ ನಡೆಸಬೇಕು. ಬಿಜೆಪಿಯವರು ಭ್ರಷ್ಟಾಚಾರ ಮಾಡುವುದಿಲ್ಲ ನಾ ಖಾವೂಂಗಾ ನಾ ಖಾನೇದೂಂಗಾ ಎನ್ನುವ ಮೋದಿ  ಮಾತಿನಂತೆ ನಡೆಯುತ್ತೇವೆ ಎನ್ನುವವರು ಈ ಪ್ರಕರಣವನ್ನು ಸಿಬಿಐಗೆ ಕೊಡಲಿ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದರು.

ಪಿಎಸ್ಐ ಹಗರಣದ ಪ್ರಮುಖರಿಗೆ ಬೇಲ್ ಸಿಕ್ಕಿರುವುದರ ಬಗ್ಗೆ ಕಿಡಿ ಕಾರಿದ ಖರ್ಗೆ ಎಂತ ಸರ್ಕಾರಿ ವಕೀಲರನ್ನು ನೇಮಿಸಿದ್ದೀರಿ? ಸಾವಿರಾರು ಅಭ್ಯರ್ಥಿಗಳ ಭವಿಷ್ಯದ ಮೇಲೆ ಕಲ್ಲು ಹಾಕಿದವರಿಗೆ ಬೇಲ್ ಸಿಗುತ್ತಿದೆ ಎಂದರೆ ಹೇಗೆ? ಜೆಪಿ ನಡ್ಡಾ ಈ ರಾಜ್ಯದಲ್ಲಿ ತಿರುಗುತ್ತಿದ್ದಾರೆ ಈ ಬಗ್ಗೆಯೂ ಗಮನ ಹರಿಸಲಿ ಎಂದರು.

ಪದೇ ಪದೇ ಕೆಡಿಪಿ ಮುಂದೂಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ ಅವರು ಜಿಲ್ಲಾಡಳಿತಕ್ಕೆ ಕೆಡಿಪಿ ಹೇಗೆ ನಡೆಸಬೇಕು ಎನ್ನುವುದು ತಿಳಿದಿದೆಯೋ ಹೇಗೆ ಗೊತ್ತಿಲ್ಲ. ಆರು ದಿನಗಳ ಹಿಂದೆ ಕೆಡಿಪಿ ನಡೆಸುವುದಾಗಿ ಹೇಳಿ‌ ನೋಟಿಸು ಕೊಟ್ಟು ಇಂದು ನಿಗದಿ ಮಾಡಲಾಗಿತ್ತು. ಆದರೆ ಈಗ ಏಕಾಏಕಿ ನಾಳೆಗೆ ಮುಂದೂಡಲಾಗಿದೆ. ಇದನ್ನು ಗಮನಸಿದರೆ ಕಾಟಾಚಾರದ ಸಭೆ ಕರೆಯುತ್ತಿದ್ದಾರೆ ಎನಿಸುತ್ತದೆ. ಈ ಕೆಡಿಪಿಗೆ ನಾವು ಹೋಗಬೇಕಾ ಅಥವಾ ಬೇಡವಾ ಗೊತ್ತಾಗುತ್ತಿಲ್ಲ. ಕೇವಲ ಬಿಜೆಪಿಗರಿಗೆ ಅಥವಾ ಸಚಿವರಿಗೆ ಮಾತ್ರ ಕೆಲಸವಿದೆ ನಮಗೆ ಇಲ್ಲವಾ? ಎಂದು ಪ್ರಿಯಾಂಕ್ ಹೇಳಿದರು.

ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಾಡಿ ಎಂದರೆ ವಿದೇಶಿ ಪ್ರವಾಸಕ್ಕೆ ಹೋಗಲು ರೆಡಿಯಾಗಿದ್ದಾರೆ. ಅದರಂತೆ ಟ್ರಾವೆಲಿಂಗ್ ಏಜೆನ್ಸಿಯರಿಗೆ ಈಗಾಗಲೇ  ಕೆಕೆಆರ್ಡಿಬಿ ಯಿಂದ ಒಂದು ಕೋಟಿ ಹಣ ಜಮಾ ಆಗಿದೆ. ತೊಗರಿ ನೆಟೆರೋಗದ ಬಗ್ಗೆ ಚರ್ಚೆ ಮಾಡಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಏನಾದರೂ ಮಾಡಿಕೊಳ್ಳಲಿ ಮುಂದಿನ ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಯಲಿದೆ ನಾವು ಜನರ ಮುಂದೆ ವಿವರ ಹೇಳಲಿದ್ದೇವೆ.

ನಾನು ಸಿಎಂ ಅವರಿಗೆ ಭೇಟಿಯಾಗಿ ನೆಟೆರೋಗದ‌ ಪರಿಹಾರ ಬಿಡುಗಡೆ ಮಾಡುವಂತೆ ವಿನಂತಿ ಮಾಡಿದ್ದೇನೆ. ಆರ್ಥಿಕ ಇಲಾಖೆ ಜತೆ ಚರ್ಚೆ ನಡೆಸಿ ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಬಿಡುಗಡೆ ಮಾಡದಿದ್ದರೆ ನಾವು ಹೋರಾಟ ಮಾಡುತ್ತೇವೆ.

ಕಲಬುರಗಿ ಬಂದ್ ಗೆ ನಮ್ಮ ಬೆಂಬಲವಿದೆ. ರೈತರ ಪರ ಹೋರಾಟ ಮಾಡುವ ಯಾರೇ ಆಗಲಿ ಅವರ ಪರ ನಾವಿರುತ್ತೇವೆ ಎಂದು ಘೋಷಿಸಿದರು.

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರಿಗೆ ಒಂದೇ ಒಂದು ಬಾರಿ ವಿಚಾರಣೆಗೆ ಕರೆಯದೆ ಕ್ಲೀನ್ ಚೀಟ್ ಕೊಟ್ಟಿದ್ದಾರೆ‌. ಈಗ ಅರವಿಂದ ಲಿಂಬಾವಳಿ ಕೇಸಲ್ಲಿ ಕೂಡಾ ಅದೇ ಆಗುತ್ತದೆ. ನಾವು ಈಗಾಗಲೇ ಅವರ ಕುಟುಂಬ ವರ್ಗದವರನ್ನು ಭೇಟಿ ಮಾಡಿ ಏನು ಹೇಳಬೇಕೋ ಅದನ್ನೇ ಹೇಳಿದ್ದೇವೆ.

ಮಣಿಕಂಠ ರಾಠೋಡ್ ಮಾಡುತ್ತಿರುವ ಆಪಾದನೆಗಖ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ,  ನನ್ನ ಮೇಲೆ ಆರೋಪ ಮಾಡುತ್ತಿದ್ದರೆ ಅದನ್ನು ಸಾಬೀತು ಮಾಡುವ ಜವಾಬ್ದಾರಿಯೂ ಕೂಡ ಅವರಿಗೆ ಸೇರಿದೆ. ನೀವು ಅವರ ಬಗ್ಗೆ ಜಾಸ್ತಿ ಪ್ರಚಾರ ಕೊಡುತ್ತಿರುವುದರಿಂದ ಅವರಿಗೆ ಪ್ರಚಾರ ಸಿಗುತ್ತಿದೆ ಅಷ್ಟೆ ಎಂದರು.

emedialine

Recent Posts

ಕಲಬುರಗಿ: ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕಲಬುರಗಿ: ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 15ರ ಫಿರದೋಸ್ ಕಾಲೋನಿ ಬಡಾವಣೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಸೈಯದ್ ಮಿರಾಜೊದ್ದೀನ್ ಕಾಶೀಪ್…

1 hour ago

ಸಿಯುಕೆಯಲ್ಲಿ ರಾಷ್ಟ್ರೀಯ ಅಪ್ರೆಂಟಿಸ್‍ಶಿಪ್ ತರಬೇತಿ ಯೋಜನೆ ಕುರಿತು ಜಾಗೃತಿ

ಕಲಬುರಗಿ: "ನ್ಯಾಷನಲ್ ಅಪ್ರೆಂಟಿಸ್‍ಶಿಪ್ ಟ್ರೈನಿಂಗ್ ಸ್ಕೀಮ್ (ಓಂಖಿS) ಐಟಿಐ, ಪಿಯುಸಿ, ಡಿಪೆÇ್ಲೀಮಾ ಮತ್ತು ಪದವೀಧರರು ಸೇರಿದಂತೆ ತಾಂತ್ರಿಕ ಮತ್ತು ತಾಂತ್ರಿಕೇತರ…

2 hours ago

ಭಾರತ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಿಂದ ಸಮಾಲೋಚನ ಕಾರ್ಯಗಾರ

ಕಲಬುರಗಿ: ಭಾರತ ಸೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ನಗರದ ಅಪ್ಪಾ ಪಬ್ಲಿಕ್ ಶಾಲೆಯ ಲಿಂ.ಡಾ.ಬಸವರಾಜಪ್ಪ ಅಪ್ಪಾ ಸ್ಮಾರಕ ಭವನದಲ್ಲಿಂದು…

2 hours ago

ಖಾಸಗಿ ಶಾಲೆಯ ಡೊನೇಷನ್ ಹಾವಳಿ ತಡೆಯುವಂತೆ ಆಗ್ರಹಿಸಿ ಮನವಿ

ಕಲಬುರಗಿ: ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಶುಲ್ಕ ಹೆಚ್ಚಳ ಹಾಗೂ ಕಟ್ಟಡ ಮತ್ತು ಪ್ರವೇಶ ಶುಲ್ಕ ಹೆಸರಿನಲ್ಲಿ ಡೊನೇಷನ್…

3 hours ago

ಪರಿಚಲನೆ ಅಭಿನಂದನಾ ಗ್ರಂಥ ಲೋಕಾರ್ಪಣೆ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಜರುಗುತ್ತಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ…

3 hours ago

ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅರ್ಜಿ ಸ್ವೀಕಾರ

ಸಾರ್ವಜನಿಕರ ಕೆಲಸಗಳಿಗೆ ವಿಳಂಬ ಮಾಡುವುದು ಸರಿಯಲ್ಲ: ಡಿವೈಎಸ್ಪಿ ಹಣಮಂತ್ರಾಯ ಸುರಪುರ: ಸಾರ್ವಜನಿಕರು ತಮ್ಮ ಯಾವುದೇ ಕೆಲಸಗಳಿಗೆ ಕಚೇರಿಗೆ ಬಂದರೆ ವಿಳಂಬ…

3 hours ago