ಜೇವರ್ಗಿ: ಜೇವರ್ಗಿ ಮತಕ್ಷೇತ್ರದಡಿಯಲ್ಲಿ ಬರುವ ಯಡ್ರಾಮಿ ತಾಲೂಕಿನ ಸಾತಖೇಡ್ ಗ್ರಾಮದಲ್ಲಿ ಕೆಕೆಆರ್‍ಡಿಬಿ ಯೋಜನೆ ಅಡಿಯಲ್ಲಿ ಸುಮಾರು 25 ಲP್ಷÀ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಜೇವರ್ಗಿ ಶಾಸಕರು ಹಾಗೂ ವಿರೋಧ ಪP್ಷÀದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಶುಕ್ರವಾರ ನೆರವೇರಿಸಿದರು.
ತಾವು ಶಾಸಕರಾದ ಈ ಅವಧಿಯಲಿ ಕ್ಷೇತ್ರದ ಪ್ರಮುಖ ಹಳ್ಳಿಗಳಲ್ಲಿ ಸಿಸಿ ರಸ್ತೆ, ಒಳ ಚರಂಡಿ ಯೋಜನೆ ಜಾರಿಗೆ ತರಲು ಹೆಚ್ಚಿನ ಆದ್ಯತೆ ನೀಡುತ್ತಿರೋದಾಗಿ ಹೇಳಿದ ಡಾ. ಅಜಯ್ ಸಿಂಗ್ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯವೆಂದರು.
ಈ ಸಂದರ್ಭದಲ್ಲಿ ಈರಣ್ಣ ಮುತ್ಯಾ ಸಾಥಖೇಡ್, ಪP್ಷÀದ ಹಿರಿಯ ಮುಖಂಡರಾದ ಕಾಶೀಮ್ ಪಟೇಲ್ ಮುದಬಾಳ, ಚಂದ್ರಶೇಖರ್ ಹರನಾಳ, ಮುನ್ನಾ ಪಟೇಲ್ ಯಾಳವಾರ, ಸೋಮರಾಯ ಪೂಜಾರಿ, ಚಕ್ರವರ್ತಿ ಸಾಥಖೇಡ್, ಎ.ಬಿ.ಪಾಟೀಲ ಪಡದಳ್ಳಿ, ಮಂಜು ನೇರಡಗಿ, ನಾಗರೆಡ್ಡಿ ನೆರಡಗಿ, ಅಯ್ಯನಗೌಡ ವಡಗೇರಿ, ಭೀಮನಗೌಡ ಬಳಬಟ್ಟಿ, ತಿಪ್ಪಣ್ಣ ಬಳಬಟ್ಟಿ, ಸಂಗಮೇಶ ಕೊಂಬುನ್, ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಹೆದ್ದಾರಿ ಅಭಿವೃದ್ಧಧಿ ಯೋಜನೆಗೆ ಇಜೇರಿಯಲ್ಲಿ ಶಾಸಕ ಡಾ. ಅಜಯ್ ಸಿಂಗ್ ಚಾಲನೆ
ಜೇವರ್ಗಿ ಮತಕ್ಷೇತ್ರದಡಿಯಲ್ಲಿ ಬರುವ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2022-23ನೇ ಸಾಲಿನ ರಾಜ್ಯ ಹೆz್ದÁರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಜೇವರ್ಗಿ ತಾಲೂಕಿನ ರಾಸ-218 ಕಟ್ಟಸಂಗಾವಿ ದಿಂದ ಯಂಕಂಚಿ (ರಾ.ಹೆ-16) ವಾಯಾ ಮದರಿ, ನರಿಬೋಳ, ಬಿರಾಳ (ಬಿ), ಗಂವ್ಹಾರ, ಚಿಗರಳ್ಳಿ, ಇಜೇರಿ, ಯಡ್ರಾಮಿ, ಮಾನಶಿವಣಗಿ ಕಿ.ಮೀ. 42.00 ರಿಂದ 48.00 ರ ವರೆಗೆ (ಅಯ್ದ ಭಾಗಗಳಲ್ಲಿ) ರಸ್ತೆ ಅಭಿವೃದ್ಧಿ ಕಾಮಗಾರಿಯ ಅಂದಾಜು 9 ಕೋಟಿ ವೆಚ್ಚದ ಕಾಮಗಾರಿಗೆ ಜೇವರ್ಗಿ ಶಾಸಕರು ಹಾಗೂ ವಿರೋಧ ಪಕ್ಷ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಭೂಮಿ ಪೂಜನೆ ಮಾಡಿದರು.
ಇದೇ ಸಂದರ್ಭದಲ್ಲಿ 2021-22ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಮೌಲಾನಾ ಆಜಾದ ಮಾದರಿ ಶಾಲೆಗೆ 04 ಕೋಣೆಗಳ ನಿರ್ಮಾಣ ಕಾಮಗಾರಿ ಅಂದಾಜು ವೆಚ್ಚ 60.00 ಲP್ಷÀದ ಕಾಮಗಾರಿಯ ಅಡಿಗಲ್ಲು ಸಮಾರಂಭದ ಉದ್ಘಾಟನೆಯನ್ನೂ ಡಾ. ಅಜಯ್ ಸಿಂಗ್ ನೆರವೇರಿಸಿದರು.
ಈ ಸಂರ್ಭದಲ್ಲಿ ಮಾತನಾಡಿದ ವಿರೋಧ ಪP್ಷÀದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ತಮ್ಮ ಅವಧಿಯಲ್ಲಿ ಹೆಚ್ಚಿನ ಪ್ರಗತಿ ಯೋಜನೆಗಳನ್ನು ಕೈಗೊಳ್ಳುತ್ತಿರೋದಾಗಿ ಹೇಳಿದರಲ್ಲದೆ ಹೆದ್ದಾರಿ ಆಯ್ದ ಭಾಗ ಅಭಿವೃದ್ಧಿ ಪಡಿಸುವ ಮೂಲಕ ಸುರಕ್ಷಿತ ಸಂಚಾರಕ್ಕೆ õÉಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು. ಇಜೇರಿಯಲ್ಲಿರುವ ಮೌಲಾನಾ ಅಜಾದ್ ಶಾಲೆಗೆ ಹೆಚ್ಚಿನ 4 ಕೋಣೆಗಳ ಕಾಮಗಾರಗೂ ತಾವು ಅಡಿಗಲ್ಲು ಹಾಕಿರೋದಾಗಿ ಹೇಳಿದ ಅವರು ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಮುಂದೆಯೂ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿ, ಶಕುಂತಲಾ, ಕಾಂಗ್ರೆಸ್ ಪP್ಷÀದ ಹಿರಿಯ ಮುಖಂಡರಾದ ರುಕ್ಕುಂ ಪಟೇಲ್ ಇಜೇರಿ, ಕಾಶೀಮ್ ಪಟೇಲ್ ಮುದಬಾಳ, ಚಂದ್ರಶೇರ್ಖ ಹರನಾಳ, ಶಾಂತಪ್ಪ ಕೂಡಲಗಿ, ನಾಗಣ್ಣ ಗುತ್ತೇದಾರ, ತಿಮ್ಮವ್ವ ಕಲ್ಲಪ್ಪ ಗ್ರಾಂ.ಪ.ಅದ್ಯಕ್ಷೇ,ಅಂಜನಾ ಮುತ್ತಕೋಡ, ಶಾಬೂದಿನ್ನ ಇಜೇರಿ, ಚಂದ್ರಕಾಂತ ಯಂಕಂಚಿ, ಅಯ್ಯನಗೌಡ ಪಾಟೀಲ ಪಡದಳ್ಳಿ, ಅಯ್ಯನ ಪಾಟೀಲ ವಡಗೇರಾ, ಶಾಂತಪ್ಪ ಯಲಗೋಡ, ಶೇಕ್ ಫರಿದ್ ಮಲ್ಲಿರ್ಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…