ಸುರಪುರ: ಶ್ರೀಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ ಪ್ರಥಮ ವರ್ಷ, ಬಿ.ಎ ಹಾಗೂ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಹಾಗೂ ಪ್ರವೇಶಕ್ಕೊಂದು ಸಸಿ ಎಂಬ ವಿಶೇಷ ಕಾರ್ಯಕ್ರಮವನ್ನು ಹÀಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಸುರಪುರ ಪೋಲಿಸ್ ಸಬ್ ಇನ್ಸ್ಪೆಕ್ಟರಾದ ಕೃಷ್ಣಾ ಸುಬೇದಾರ್ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಎನ್ನುವುದೇ ಮಾನವನಿಗೆ ಆಮ್ಲಜನಕವಿದ್ದಂತೆ ಅದರಲ್ಲಿ ಪದವಿ ಶಿಕ್ಷಣ ಎನ್ನುವುದು ಶಿಕ್ಷಣದ ಬಹು ದೊಡ್ಡ ಘಟ್ಟ ಈ ಮಹತ್ವದ ಘಟ್ಟದಲ್ಲಿ ಆಸಕ್ತಿಯಿಂದ ಯಾವುದೇ ಬೇರೆ ಬೇರೆ ರೀತಿಯ ಋಣಾತ್ಮಕ ಶಕ್ತಿಯಕಡೆಗೆ ನಿಮ್ಮ ಗಮನವನ್ನು ಹರಿಸದೆ ಯಶಸ್ವಿ ಪದವಿಧರರಾಗಿ ಸಮಾಜದಲ್ಲಿನ ಇತರ ಮಹಿಳೆಯರಿಗೆ ಮಾದರಿಯಾಗಬೇಕು. ಪ್ರತಿಯೊಬ್ಬರು ವೈಚಾರಿಕವಾಗಿ ವೈಜ್ಞಾನಿಕ ಮನೋಭಾವನ್ನು ಬೆಳೆಸಿಕೊಂಡು ಸಮಾಜವನ್ನು ತಿದ್ದುವ ತೀಡುವ ವ್ಯಕ್ತಿಗಳಾಗಬೇಕು ಮಹಿಳಾ ಶಕ್ತಿಗಳಾಗಬೇಕು ಎಂದು ಕರೆನೀಡಿದರು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸಹಾಯಕ ಖಜಾನೆ ಅಧಿಕಾರಿ ಹಾಗು ಇತಿಹಾಸ ಸಂಶೋಧಕÀ ಡಾ ಎಂ.ಎಸ್ ಸಿರವಾಳ ಮಾತನಾಡಿ. ಯಾವಾಗಲೂ ವಿದ್ಯಾರ್ಥಿನಿಯರು ನಾವು ದುರ್ಬಲರು ಅಸಮರ್ಥರು ಎಂದು ಋಣಾತ್ಮಕ ಆಲೋಚನೆಗಳನ್ನೆ ಮನದಲ್ಲಿ ತುಂಬಿಕೊಂಡಿರುತ್ತಾರೆ. ಇದನ್ನು ಬಿಟ್ಟು ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲೆ ಸಾಧನೆ ಮಾಡಿರುವ ಸಾವಿರಾರು ಮಹಿಳೆಯರು ಇದ್ದಾರೆ ಅವರನ್ನು ಮಾದರಿಯಾಗಿಟ್ಟುಕೊಂಡು ನಾವುಕೂಡ ಅವರ ಮಾರ್ಗದಲ್ಲಿ ಸಾಗಿ ಯಶಸ್ಸಿನ ಕಡೆಗೆ ಸಾಗಬೇಕು ಎಂದು ವಿವರಿಸಿದರು.
ಈ ಕಾರ್ಯಕ್ರಮದ ವೇದಿಕೆಯಮೇಲೆ ಅಮರೇಶ್ವರ ಗ್ರಾಮಿಣ ಅಭಿವೃಧ್ಧಿ ಮತ್ತು ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಶೇಖರ ನೀಲಗಾರ ಅತಿಥಿ ಸ್ಥಾನವನ್ನು ವಹಿಸಿಕೊಂಡಿದ್ದರು. ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ ಅಧ್ಯಕ್ಷತೆ ವಹಿಸಿದ್ದರು ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ತಿರುಪತಿ ಕೆಂಭಾವಿ ಪ್ರಾಸ್ಥಾವಿಕ ಮಾತನಾಡಿದರು.ಅಂಗವಾಗಿ ಬಿ.ಎ ಮತ್ತು ಬಿ.ಕಾಂ, ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ವಿವಿಧ ಸಾಂಸ್ಕøತಿಕ ಸ್ಫರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು ಅವುಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು ಹಾಗೂ ವಿದ್ಯಾರ್ಥಿನಿಯರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಆದಿಶೇಷ ನೀಲಗಾರ, ಉಪನ್ಯಾಸಕರಾದ ವೆಂಕಟೇಶ ಜಾಲಗಾರ,ಬೀರೇಶ ದೇವತ್ಕಲ್, ಅಂಬ್ರೇಶ ಚಿಲ್ಲಾಳ, ಮಹೇಶ ಗಂಜಿ,ನಬಿಸಾಬ ನಾಯ್ಕೋಡಿ, ಶ್ರೀದೇವಿ ನಾಯಕ, ಪ್ರಿಯಾ. ನಂದಿನಿ ಅಸಗಳ್ಳಿ. ಭೀಮಬಾಯಿ. ಪ್ರಥಮ ದರ್ಜೆ ಸಹಾಯಕರಾದ ಶೃತಿಗೌಡ. ಉಪಸ್ಥಿತರಿದ್ದರು ಅಯ್ಯಮ್ಮ ಹಾಗೂ ರೇಖಾ ಕಾರ್ಯಕ್ರಮವನ್ನು ನಿರೂಪಿಸಿದರು, ದೇವಮ್ಮ ಸ್ವಾಗತಿಸಿದರು, ಪ್ರಿಯಾಂಕ ವಂದಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…