ಬಿಸಿ ಬಿಸಿ ಸುದ್ದಿ

ಮದನಹಿಪ್ಪರಗಿ: ಜೆಸ್ಕಾಂ ಗ್ರಾಹಕರ ಸಂವಾದ ಸಭೆ

ಮಾದನಹಿಪ್ಪರಗಿ: ಸ್ಥಳೀಯ ಜೆಸ್ಕಾಂ ಶಾಖಾ ಕಚೇರಿಯಲ್ಲಿ ಕಲಬುರಗಿಯ ಕಾರ್ಯನಿರ್ವಾಹಕ ಅಭಿಯಂತರರಾದ ಸಂತೋಷ ಚವ್ಹಾಣ ಹಾಗೂ ಆಳಂದದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ನಟರಾಜ ಇವರ ನೇತೃತ್ವದಲ್ಲಿ ಮಾದನಹಿಪ್ಪರಗಿ ಅಡಿಯಲ್ಲಿ ಬರುವ ಸುತ್ತಮುತ್ತಲಿನ ಹಳ್ಳಿಗಳ ವಿದ್ಯುತ ಗ್ರಾಹಕರ ಸಂವಾದ ಸಭೆ ಇಂದು ಜರುಗಿತು.

ಕೇರೂರ ಗ್ರಾಮದ ರೈತ ಮುಖಂಡ ರಾಹುಲ ಪಾಟೀಲ ಮಾತನಾಡಿ, ಪದೆ ಪದೇ ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗುತ್ತಿವೆ. ಆರ್‍ಆರ್ ನಂಬರ ಇಲ್ಲದ ಸಂಪರ್ಕಗಳನ್ನು ಕಟ್ ಮಾಡಿರಿ ಇಲ್ಲವೆ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿರಿ. ರೈತರ ಕಬ್ಬು ಒಣಗಿ ಹೋಗುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವದನ್ನು ತಪ್ಪಿಸಿರಿ ನಿಮ್ಮ ಕಾಲಿಗೆ ಬೀಳುತ್ತೇನೆಂದು ಭಾವುಕರಾಗಿ ಹೇಳಿದರು.

ಚಂದ್ರಕಾಂತ ಕಡಗಂಚಿ, ನಿಂಗದಳ್ಳಿ ಗ್ರಾಮದಲ್ಲಿ 15 ದಿನಗಳ ಹಿಂದೆ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದೆ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ ಎಂದರು. ಮದಗುಣಕಿಯ ಬಾಬುಗೌಡ ಪಾಟೀಲ ಮಾತನಾಡಿ ನನ್ ಕಬ್ಬಿಗೆ 15 ದಿನದಿಂದ ನೀರು ಇಲ್ಲ.ನನ್ನ ಹೊಲಕ್ಕೆ ಬರುವ ವಾಯರ ಕಟ್ ಮಾಡಿದ್ದಾರೆ. ವರ್ಷದ ಬೆಳೆ ಕಣ್ಣ ಮುಂದೆ ಒಣಗಿ ಹೋಗುತ್ತಿರುವುದು ನೋಡಿದರೆ ಹೊಟ್ಟೆಯಲ್ಲಿ ಸಂಕಟವಾಗುತ್ತದೆ. ವಾಯರ ಹಾಕಿಕೊಡಿ ಎಂದು ಸಿಬ್ಬಂಧಿಗಳಿಗೆ ಹೇಳಿದರೂ ಏನು ಪ್ರಯೋಜನವಿಲ್ಲ ಎಂದರು.

ಇನ್ನು ಹಲವಾರು ರೈತರ ಸಮಸ್ಯೆಗಳನ್ನು ಆಲಿಸಿದ ಕಾರ್ಯನಿರ್ವಾಹಕ ಅಭಿಯಂತರರು ಮಾತನಾಡಿ ಶೀಘ್ರ ಸಂಪರ್ಕ ಯೋಜನೆಯಲ್ಲಿ 25 ಕೆವಿ ಟ್ರಾನ್ಸಫಾರ್ಮಗಳು ಎರಡು ಮೂರು ರೈತರು ಸೇರಿಕೊಂಡು ಮಾಡಿಕೊಳ್ಳಬೇಕು. ಇನ್ನು ಮುಂದೆ ಮಾದನಹಿಪ್ಪರಗಿ ವಿದ್ಯುತ್ ಕೇಂದ್ರಕ್ಕೆ 13 ಕಿ.ಮೀ ದೂರದ ಮಾಡಿಯಾಳದಿಂದ ಸಂಪರ್ಕ ನೀಡಲಾಗುವುದು. ಕಾಮಗಾರಿ ಮಾರ್ಚ ಅಥವಾ ಏಪ್ರಿಲ್ ತಿಂಗಳಲ್ಲಿ ಮುಗಿಯುತ್ತದೆ. ಇನ್ನು ನಾಲ್ಕು ದಿನಗಳಲ್ಲಿ ಮಾದನಹಿಪ್ಪರಗಿ ಶಾಖೆಯಡಿಯಲ್ಲಿ ಬರುವ ಗ್ರಾಮಗಳಿಗೆ ಲೋಡ ಶೆಡ್ಡಿಂಗ ಇರುವುದಿಲ್ಲ. ಇದು ರೈತರಿಗೆ ಅನುಕೂಲವಾಗಲಿದೆ ಎಂದರು.

ಆಳಂದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಾತನಾಡಿ ಪರವಾನಗಿ ಇಲ್ಲದೆ, ಆರ್‍ಆರ್ ನಂಬರ ಇಲ್ಲದೆ ಅಕ್ರಮವಾಗಿ ಪಂಪಸೆಟ್‍ಗಳಿಗೆ ಸಂಪರ್ಕ ಪಡೆದಿದ್ದಾರೆ ಎಂದು ದೂರು ಬಂದರೆ ಮುಲಾಜಿಲ್ಲದೆ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದರು.

ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮಲ್ಲಿನಾಥ ಪಾಟೀಲ, ಜಿಲ್ಲಾ ಕಾಂಗ್ರೆಸ್ ಕಿಸಾನ ಘಟಕದ ಪ್ರಧಾನ ಕಾರ್ಯದರ್ಶಿ ನಿಲೇಶ ತೋಳನೂರ, ಸೀತಾರಾಮ ಜಮಾದಾರ, ಅಮೃತ ಟೋಣ್ಣೆ, ಇತರ ರೈತರು ಹಾಜರಿದ್ದರು. ಜೆಇಗಳಾದ ಪರಮೇಶ್ವರ ಬಡಿಗೇರ, ಯಲ್ಲಾಲಿಂಗ ಶಿರೂರ, ಸಿದ್ದರಾಮ ದೇವಣಗಿ, ಎಒ ನಿಂಬೆಣ್ಣ ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago