ಸುರಪುರ:ತಾಲೂಕಿನ ಖಾನಾಪುರ ಎಸ್.ಹೆಚ್ (ರುಕ್ಮಾಪುರ) ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುರಪುರ ಹಾಗೂ ಅಜೀಮ್ ಪ್ರೇಮಜೀ ಫೌಂಡೇಷನ್ ಸಹಯೋಗದಲ್ಲಿ ಬಾಲ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅಜೀಮ್ ಪ್ರೇಮಜೀ ಫೌಂಡೆಷನನ್ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ ಮಾತನಾಡುತ್ತಾ, ಮೂರು ವರ್ಷದ ಬುದ್ಧಿ ನೂರು ವರುಷದತನಕ ಎಂಬಂತೆ, ಮಕ್ಕಳು ದೈಹಿಕವಾಗಿ, ಭೌಧ್ದಿಕವಾಗಿ ಬೆಳೆಯುವಲ್ಲಿ ಉತ್ತಮವಾಗಿರುವಂತಹ ಕಲಿಕಾ ಪರಿಸರ ಅಂಗನವಾಡಿಗಳಲ್ಲಿ ಲಭಿಸುವುದು ತುಂಬಾ ಮುಖ್ಯವಾಗಿದೆ. ಮಕ್ಕಳಿಗೆ ಆರಂಭಿಕ ದಿನಗಲ್ಲಿ ಕಲಿಕೆಗೆ ಸಿದ್ಧಗೊಳಿಸುವಂತಹ ವಾತಾವರಣ ನಿರ್ಮಿಸುವುದು ಅವಶ್ಯಕವಾಗಿದೆ. ರುಕ್ಮಾಪುರದ ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ ತುಂಬಾ ಉತ್ತಮವಾದಂತಹ ಕಲಿಕಾ ಪರಿಸರವನ್ನು ನಿರ್ಮಾಣ ಮಾಡಿವೆ ಎಂದು ಅಭಿಪ್ರಾಯಪಟ್ಟರು.
ಅಂಗನವಾಡಿ ಮೇಲ್ವಿಚಾರಕಿ ಶಶಿಕಲಾ ಗಾಳಿ ಮಾತನಾಡಿ, ಅಜೀಮ್ ಪ್ರೇಮಜೀ ಫೌಂಡೇಷನ ಸಹಯೋಗದಲ್ಲಿ ಅಂಗನವಾಡಿ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಬಾಲ ಮೇಳ ಯಾದಗಿರಿ ಜಿಲ್ಲೆಯಲ್ಲಿಯೇ ಪ್ರಥಮವಾಗಿದೆ. ಬಹಳಷ್ಟು ಪಾಲಕರು, ಮಕ್ಕಳೊಂದಿಗೆ ಭಾಗವಹಿಸಿ ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಿಪಡಿಸಿರುವುದು ಅತ್ಯಂತ ಸಂತೋಷವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪಿಡಿಓ ಸಂಗೀತಾ, ಗಾಮ ಪಂಚಾಯಿತಿ ಅಧ್ಯಕ್ಷರಾದ ಶರಣಮ್ಮ ಕುದುರೆ, ಉಪಧ್ಯಾಕ್ಷರು ಯಂಕೋಬಾ ದಾಸರು, ಮುಖ್ಯ ಗುರು ಶರಣಬಸಮ್ಮ ಭಾಗವಹಿಸಿ ಮಾತನಾಡಿದರು.ಅಂಗನವಾಡಿ ಮಹಿಳಾ ಮೇಲ್ವಿಚಾರಕಿಯರಾದ ಪದ್ಮಾನಾಯಕ, ಜಯಶ್ರೀ ಬಿರಾದಾರ,ಬಾಗಮ್ಮ,ಶರಣಮ್ಮ ದೇಸಾಯಿ,ಮಹಾದೇವಿ, ಅಂಗನವಾಡಿ ಶಿಕ್ಷಕಿಯರಾದ ಸಂಗೀತಾ, ಅಕ್ಕಮಹಾದೇವಿ, ಸರಸ್ವತಿ, ಜಯಶ್ರೀ, ಸಿ ಆರ್.ಪಿ ಶಿವುಕುಮಾರ ಕಮತಗಿ, ಅಂಗನವಾಡಿ ಸಹಾಯಕಿಯರು, ಆಶಾ ಕಾಯಕರ್ತೆಯರು, ಅರೋಗ್ಯ ಇಲಾಖೆಯ ಸವಿತಾ ಲೋಖರೆ, ಮಾಲಾ ನಾಯಕ ಅಜೀಮ್ ಪ್ರೇಮಜೀ ಫೌಂಡೇಷನನ್ ಸಂಪನ್ಮೂಲ ವ್ಯಕ್ತಿಗಳಾದ ಕವಿತಾ, ಮುತ್ತುರಾಜು, ರಾಜಶೇಖರ ರಾಜೇಶ, ಜಗದೇವಿ, ವಿನೋದಕುಮಾರ, ಶರಣ್ಯ, ಚಂದನಾ, ಪರಮಣ್ಣ ತೇಜಸ್ವಿನಿ, ಕೃಷ್ಣಯ್ಯ, ಅಕ್ಷರ, ರುಕ್ಮಾಪುರ ಗ್ರಾಮದ ಪಾಲಕ ಪೋಷಕರು ಭಾಗವಹಿಸಿದ್ದರು.ಮಹಿಳಾ ಮೇಲ್ವಿಚಾರಕಿ ಸಾವಿತ್ರಿ ಗಾಳಿ ಕಾರ್ಯಕ್ರಮದ ಕುರಿತು ನಿರೂಪಿಸಿ ವಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…