ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ, ಯಾದಗರಿ, ರಾಯಚೂರು ಹಾಗೂ ಮುಂಬೈ ಕರ್ನಾಟಕದ ವಿಜಯಪುರ ಜಿಲ್ಲೆಗಳ 52,072 ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಗಮನಕ್ಕೆ ರಾಷ್ಟ್ರಕೂಟರ ನಾಡು ಮಳಖೇಡ ಸಜ್ಜುಗೊಂಡಿದ್ದು, ಎಲ್ಲಾ ರೀತಿಯ ಸಿದ್ಧತೆ ಅಂತಿಮಗೊಂಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.
ಬುಧವಾರ ಮಳಖೇಡದಲ್ಲಿ ಕಾರ್ಯಕ್ರಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದ ಇತಿಹಾಸದಲ್ಲಿಯೇ ಐತಿಹಾಸಿಕವಾಗಿ ರಾಜ್ಯದಾದ್ಯಂತ ಲಂಬಾಣಿ ತಾಂಡಾ, ಹಟ್ಟಿ, ಆಡಿ, ಗೊಲ್ಲರಹಟ್ಟಿ, ವಡ್ಡರ ಹಟ್ಟಿಯಲ್ಲಿರುವ ಅಲೆಮಾರಿ ಜನಾಂಗದವರಿಗೆ ಖಾಯಂ ಸೂರು ಒದಗಿಸುವ ದೃಷ್ಠಿಯಿಂದ ಕಲಬುರಗಿ-27,267, ಬೀದರ-7,500, ರಾಯಚೂರು-3,500, ಯಾದಗಿರಿ-11,200 ಹಾಗೂ ವಿಜಯಪುರ-2,605 ಸೇರಿದಂತೆ ಒಟ್ಟು 52,072 ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ. ಇದು ಗಿನ್ನಿಸ್ ದಾಖಲೆಯಾಗಲಿದೆ. ಶತಮಾನದಿಂದ ಸೂರಿನಿಂದ ವಂಚಿತ ಸಮುದಾಯಕ್ಕೆ ಪಕ್ಕಾ ಸೂರು ಕಲ್ಪಿಸುವ ಅಮೃತ ಘಳಿಗೆ ಇದಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ನೇರವಾಗಿ ಯಾದಗಿರಿ ಜಿಲ್ಲೆಯ ಕೊಡೆಕಲ್ ತೆರಳಿ ನಾರಾಯಣಪುರ ಎಡದಂಡೆ ನಾಲೆ ನವೀಕರಣ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆ, ಚೈನೈ-ಸುರತ್ ಗ್ರೀನ್ ಫೀಲ್ಡ್ ರಾಷ್ಟ್ರೀಯ ಹೆದ್ದಾರಿಯ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ನಂತರ ಮಧ್ಯಾಹ್ನ 2 ಗಂಟೆಗೆ ಸೇಡಂ ಜಿಲ್ಲೆಯ ಮಳಖೇಡಗೆ ಆಗಮಿಸಿ, ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಗೊಂಡ 342 ಗ್ರಾಮಗಳ 52,072 ಜನರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡುವರು ಎಂದರು.
ಕಾರ್ಯಕ್ರಮಕ್ಕೆ 3 ಲಕ್ಷ ಜನ ಸೇರುವುದರಿಂದ ಬೃಹತ್ ಜರ್ಮನ್ ಪೆಂಡಾಲ್ ಹಾಕಲಾಗಿದೆ. ಸಾರ್ವಜನಿಕರಿಗೆ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ. ಲಂಬಾಣಿ ಮಹಿಳೆಯರು ತಮ್ಮ ವಿಶೇಷ ಉಡುಪಿನಲ್ಲಿ ಗಮನ ಸೆಳೆಯಲಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ರಾಜ್ಯಪಾಲ ತಾವರಚಂದ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು ಸೇರಿದಂತೆ 18 ಜನ ಗಣ್ಯರು ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದರು.
ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಮಾತನಾಡಿ, ನೃಪತುಂಗ ನಾಡಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಪ್ರಧಾನಮಂತ್ರಿ ಅವರಿಗೆ ವಿವಿಧ ಕಲಾ ತಂಡಗಳಿಂದ ಭವ್ಯ ಸ್ವಾಗತ ನೀಡಲಾಗುತ್ತದೆ. ಒಂದು ಲಕ್ಷ ಯುವಕರು ಬೈಕ್ ರ್ಯಾಲಿ ನಡೆಸಲಿದ್ದು, ಕಾರ್ಯಕ್ರಮ ಐತಿಹಾಸಿಕವಾಗಲಿದೆ ಎಂದರು.
ಖಾಕಿ ಸರ್ಪಗಾವಲು: ಮಳಖೇಡದಲ್ಲಿ ನಡೆಯುವ ಪ್ರಧಾನಮಂತ್ರಿಗಳ ಕಾರ್ಯಕ್ರಮ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ಒಂಬತ್ತು ಐ.ಪಿ.ಎಸ್. ಪೆÇೀಲಿಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎ.ಡಿ.ಜಿ.ಪಿ. ಅಲೋಕ ಕುಮಾರ ಹೇಳಿದರು.
ಕಲಬುರಗಿ ಮತ್ತು ಬೆಳಗಾವಿ ಐ.ಜಿ.ಪಿ., ಕಲಬುರಗಿ ಎಸ್.ಪಿ., ನಾಗನಹಳ್ಳಿ ಪಿ.ಟಿ.ಸಿ. ಎಸ್.ಪಿ. ಸೇರಿದಂತೆ 9 ಜನ ಐ.ಎ.ಎಸ್ ಅಧಿಕಾರಿಗಳು, 13 ಡಿ.ಎಸ್ಪಿ, 30 ಸಿಪಿಐ, 108 ಪಿ.ಎಸ್.ಐ., 16 ಕೆಎಸ್.ಆರ್.ಪಿ. ತುಕಡಿ, 6 ಡಿಎಆರ್ ತುಕುಡಿಗಳು ಬಂದೋಬಸ್ತ್ ಸಲುವಾಗಿ ನಿಯೋಜಿಸಲಾಗಿದೆ. ಇದಲ್ಲದೆ ಹೆಚ್ಚುರಿಯಾಗಿ ಗರುಡಾ ಫೋರ್ಸ್ ಸಹ ಇರಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮೂಡ, ಕರ್ನಟಕ ತಾಮಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ, ಐ.ಜಿ.ಪಿ. ಅನುಪಮ ಅಗರವಾಲ್, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಎಸ್.ಪಿ. ಇಶಾ ಪಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹ ಅಧಿಕಾರಿ ಡಾ.ಗಿರೀಶ್ ಡಿ. ಬದೋಲೆ ಇದ್ದರು.
ಸೂರತ್-ಚೆನ್ನೈ ಗ್ರೀನ್ ಫೀಲ್ಡ್ ಹೈವೇಗೆ ಶಂಕುಸ್ಥಾಪನೆ: ಪ್ರಧಾನಮಂತ್ರಿ ನರೇಂದ್ರ ನೋದಿ ಅವರು ಯಾದಗಿರಿಯ ಕೊಡೇಕಲ್ ಕಾರ್ಯಕ್ರಮದಲ್ಲಿ ಸೂರತ್-ಚೆನ್ನೈ ಗ್ರೀನ್ ಫೀಲ್ಡ್ ಹೈವೇ ವ್ಯಾಪ್ತಿ ಪೈಕಿ ಕಲಬುರಗಿ ಜಿಲ್ಲೆಯಲ್ಲಿ ಹಾದುಹೋಗುವ ಕಿ.ಮೀ.26 ರಿಂದ ಕಿ.ಮೀ.91ರ ವರೆಗಿನ ಒಟ್ಟು 71 ಕಿ.ಮೀ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕಿ.ಮೀ.97 ರಿಂದ ಕಿ.ಮೀ 162.500 ವರೆಗಿನ ಒಟ್ಟು 65.500 ಕಿ.ಮೀ ಆರು ಪಥ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 2,110.52 ಕೋಟಿ ರೂ. ಮತ್ತು ಯಾದಗಿರಿ ಜಿಲ್ಲೆಯಲ್ಲಿ 1,999.24 ಕೋಟಿ ರೂ. ಮೊತ್ತದ ಬೃಹತ್ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.
ಮಹಾರಾಷ್ಟ್ರದ ಗಡಿಯಲ್ಲಿರುವ ಅಫಜಲಪೂರ ತಾಲೂಕಿನ ಬಡದಾಳ ಗ್ರಾಮದಿಂದ ಆರಂಭವಾಗುವ ರಾಜ್ಯದಲ್ಲಿನ ಆರು ಪಥದ ಈ ರಾಷ್ಟ್ರೀಯ ಹೆದ್ದಾರಿ ಮುಂದೆ ಗಾಣಗಾಪೂರ-ಜೇವರ್ಗಿ-ಮರಡಗಿ ಎಸ್.ಆಂದೋಲಾ ಮಾರ್ಗವಾಗಿ ಯಾದಗಿರಿ ಜಿಲ್ಲೆಯ ಅಣಬಿ- ಶಿರವಾಳ-ಬುರುಸಗುಂಡಗಿ-ಖಾನಾಪುರ-ವಡಗೇರಾ-ಬೆಂಡೆಬೆಂಬಳಿ ಮೂಲಕ ರಾಯಚೂರು ಜಿಲ್ಲೆಯ ಬಸವಂತಪೂರ ಪ್ರವೇಶಿಸಿ ಅಲ್ಲಿಂದ ಚಿಕ್ಕಸುಗೂರ-ಚಂದ್ರಬಂಡಾ-ಸಿಂಗಾನೋಡಿ ಮೂಲಕ ತೆಲಾಂಗಾಣದ ಕರ್ನೂಲಕ್ಕೆ ಸಾಗಲಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…