ಸಮಾನತೆ ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ನಿರಂತರ ಕೆಲಸ ಮಾಡುತ್ತೆವೆ

ಶಹಾಬಾದ: ಸಮಾಜದಲ್ಲಿ ಬೇರೂರಿರುವ ನೋವು, ಅಸಮಾನತೆ, ಅಸ್ಪಶ್ಯತೆ, ಜಾತೀಯತೆಯ ಕಳೆಯನ್ನು ಕಿತ್ತೊಗೆಯುವ ಸಂದೇಶದ ಮೂಲಕ ಸಮಾನತೆಯನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಕನ್ನಡ ದಲಿತ ಸಾಹಿತ್ಯ ಪರಿಷತ್ತ್ ನಿರಂತರವಾಗಿ ಕೆಲಸ ಮಾಡುತ್ತದೆ ಎಂದು ಕನ್ನಡ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹನುಮಂತರಾವ. ಬಿ. ದೊಡ್ಡಮನಿ ಹೇಳಿದರು.

ಅವರು ರವಿವಾರ ನಗರದ ಶಮ್ಸ್ ಸಭಾಂಗಣದಲ್ಲಿ ಆಯೋಜಿಸಲಾದ ಕನ್ನಡ ದಲಿತ ಸಾಹಿತ್ಯ ಪರಿಷತ್ ಶಹಾಬಾದ ತಾಲೂಕ ಘಟಕದ ಉದ್ಘಾಟನಾ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಅಡಿಪಾಯದಲ್ಲಿ ಸಿಲುಕಿದ ಕಟ್ಟ ಕಡೆಯ ಮನುಷ್ಯನ ಬದುಕಿನ ಧಾವಂತ, ಸಿಟ್ಟು, ದುಃಖ ದುಮ್ಮಾನ ಹಾಗೂ ಭವಿಷ್ಯದ ಕಾಣ್ಕೆಯನ್ನು ದಲಿತ ಸಾಹಿತ್ಯ ನೀಡುತ್ತ ಬಂದಿದೆ. ದಲಿತ ಸಾಹಿತ್ಯ ಪರಿಷತ್ ವೈಜ್ಞಾನಿಕ ಮನೋಭಾವನೆ, ವೈಚಾರಿಕತೆಯ ತಳಹದಿಯನ್ನು ಬದುಕಿನ ಸಂಘರ್ಷಗಳನ್ನು ಒಳ ಹಾಗೂ ಹೊರಪದರಗಳನ್ನು ತೆರೆದು ಪರಿಕಲ್ಪನೆ ಗಳನ್ನು ಮೂಡಿಸುವ, ಅದಕ್ಕೆ ಪೂರಕವಾದ ಅವಕಾಶಗಳನ್ನು ಕಲ್ಪಿಸುವ ವ್ಯವಸ್ಥೆಯನ್ನು ಹುಟ್ಟುಹಾಕುವ ಮೂಲ ಉದ್ದೇಶವನ್ನು ಹೊಂದಿದೆ ಎಂದರು.

ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಸಹಕಾರ್ಯದರ್ಶಿ ಡಾ. ಕೈಲಾಸ್ ಎಸ್. ಡೋಣಿ ಮಾತನಾಡಿ, ದಲಿತ ಸಾಹಿತ್ಯದ ಮೂಲಬೇರುಗಳು ಹಳೆಗನ್ನಡ ಸಾಹಿತ್ಯದಲ್ಲಿ ದೊರೆಯುತ್ತವೆ. ಆದರೆ ಅವು ಮುನ್ನೆಲೆಗೆ ಬಾರದ ವೈದಿಕ ಧರ್ಮದ ಕಪಿ ಮುಷ್ಟಿಯಲ್ಲಿ ಕಾಣೆಯಾಗಿದ್ದವು. ನಂತರ 12ನೇ ಶತಮಾನದ ಶರಣ ಚಳುವಳಿಯಲ್ಲಿ ದಲಿತರು ಮತ್ತು ದಲಿತೇತರು ಬರೆದ ಸಾಹಿತ್ಯ ಜನಮಾನಸವನ್ನು ಸೂರೆ ಗೊಂಡಿತ್ತು. ದುರಂತೆ ವೆಂದರೆ ನಂತರ ದಿನದಲ್ಲಿ ವೈದ್ಯಿಕೆ ಸಂಸ್ಕøತಿಯ ಆಡಳಿತದ ತುಳಿತಕ್ಕೆ ಒಳಗಾಯಿತು. ಶರಣ ಸಾಹಿತ್ಯವು ಶರಣರ ವಚನ, ತತ್ವ ಮತ್ತು ಆದರ್ಶಗಳು ನಡೆದು ಬಂದ ದಾರಿ, ಸಾಧನೆ ಇವುಗಳನ್ನು ಅಧ್ಯಯನ ಮಾಡಿ ಸಮಾಜದ ನೆಲೆಗಟ್ಟಿಗೆ ನೀಡುತ್ತಿದೆ.ಮಹಾಭಾರತ, ರಾಮಾಯಣ ಬರೆದವರು ದಲಿತರೇ.ಈ ದೇಶದ ಸಂವಿಧಾನ ಬರೆದವರು ದಲಿತರೇ ಎಂಬುದನ್ನು ಮನಗಾಣಬೇಕಿದೆ.ಆ ನಿಟ್ಟಿನಲ್ಲಿ ದಲಿತ ಸಾಹಿತ್ಯ ಪರಿಷತ್ ಯುವಕವಿಗಳಿಗೆ ಹೊಸ ಆಲೋಚನೆಯನ್ನು ತುಂಬುವ ಕೆಲಸ ಮಾಡುತ್ತದೆ ಎಂದರು.

ದಲಿತ ಚಳುವಳಿ ನಾಯಕ ಸುರೇಶ ಮೆಂಗನ, ಕಾರ್ಯನಿರತ ಪತ್ರಕರ್ತ ಸಂಘದ ತಾಲೂಕಾಧ್ಯಕ್ಷ ರಘುವೀರಸಿಂಗ್ ಠಾಕೂರ್ ಮಾತನಾಡಿದರು. ಕರ್ನಾಟಕ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಡಾ. ಶಾಂತಮಲ್ಲಪ್ಪ.ವಾಯ್. ಹೊನ್ನುಂಗರ, ದಲಿತ ಮುಖಂಡ ಮಲ್ಲೇಶಿ ಸಜ್ಜನ್, ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ, ಕನ್ನಡ ದಲಿತ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ಅಧ್ಯಕ್ಷ ಶಂಕರ ಜಾನಾ, ಕಾರ್ಯಾಧ್ಯಕ್ಷ ಹಾಜಪ್ಪ ಬಿಳಾರ ವೇದಿಕೆಯ ಮೇಲಿದ್ದರು.

ಮರಲಿಂಗ ಯಾದಗಿರಿ ನಿರೂಪಿಸಿದರು,ಪ್ರವೀಣ ರಾಜನ್ ಸ್ವಾಗತಿಸಿದರು, ಯಶೋದಾ ಮಸ್ಕಿ ಪ್ರಾರ್ಥಿಸಿದರು, ಅನೀಲಕುಮಾರ ಮೈನಾಳಕರ್ ವಂದಿಸಿದರು.

ಪ್ರಮುಖರಾದ ಶಿವಲಿಂಗಪ್ಪ ಹೆಬ್ಬಾಳಕರ್,ರವಿ ಮುತ್ತಗಿಕರ್, ಶರಣಬಸಪ್ಪ ಧನ್ನಾ, ಅಣ್ಣಪ್ಪ ಸರಡಗಿ, ಭೀಮಯ್ಯ ಗುತ್ತೆದಾರ ಸೇರಿದಂತೆ ಪರಿಷತ್ತಿನ ಸರ್ವ ಸದಸ್ಯರು ಹಾಜರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಮಲ್ಲೇಶಿ ಸಜ್ಜನ್ (ಸಂಘಟನೆ ಕ್ಷೇತ್ರ), ಕು.ಯಶೋಧ.ಎ.ಮಸ್ಕಿ(ಸಂಗೀತ ಕ್ಷೇತ್ರ), ಡಾ.ಪಿಎಂ ಸಜ್ಜನ್ (ವೈದ್ಯಕೀಯ ಕ್ಷೇತ್ರ), ವರುಣಕುಮಾರ ಘಾಣದಾಳ (ಶಿಕ್ಷಣ ಕ್ಷೇತ್ರ), ಈರಣ್ಣ ಗುಡೂರ್(ಕೃಷಿ ಕ್ಷೇತ್ರ), ಪ್ರಮೋದ.ಎ.ನಾಟಿಕರ್ (ನೃತ್ಯ) ಇವರನ್ನು ವಿಶೇಷ ಸನ್ಮಾನ ಮಾಡಲಾಯಿತು.

emedialine

Recent Posts

ಇಂದಿನಿಂದ ಸೂಗೂರ (ಕೆ ) ನವರಾತ್ರಿ ಬ್ರಹ್ಮೋತ್ಸವ

ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ )…

2 hours ago

ಕಾಳಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿವ್ಯ…

3 hours ago

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

16 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

19 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

23 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

24 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420