ನಿತ್ಯ ಜೀವನದಲ್ಲಿ ವಚನಗಳ ಅನುಕರಣೆ ಅತ್ಯಗತ್ಯ

ಕಮಲಾಪುರ: 12 ನೇ ಶತಮಾನದಲ್ಲಿ ಭದ್ರವಾಗಿ ಬೇರೂರಿದ್ದ ಜಾತಿಯತೆ, ಸಾಮಾಜಿಕ ಅಸಮಾನತೆ, ಮೌಢ್ಯತೆಯ ವಿರುದ್ದ ಸಮರ ಸಾರಿದ ಬಸವಾದಿ ಶರಣರು ಸಮಾನ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದ್ದರು, ಶರಣರ ಸಾಮಾಜಿಕ ನ್ಯಾಯ ಮತ್ತು ವಾಸ್ತವಿಕತೆಯ ಆಧಾರದ ಮೇಲೆ ರಚಿತಗೊಂಡ ವಚನಗಳು ಇಂದಿಗೂ ಪ್ರಸ್ತುತ, ಕೇವಲ ವಚನ ಪಠಣ ಮಾಡಿದರೆ ಸಾಲದು ನಿತ್ಯ ಜೀಓವನದಲ್ಲಿ ಅನುಕರಣೆ ಮಾಡುವುದು ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಡಾ.ಶಿವರಂಜನ ಸತ್ಯಂಪೇಟೆ ಹೇಳಿದರು

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿಕೆ ಸಲಗರ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ನೂತನ ಕಸಾಪ ವಲಯ ಉದ್ಘಾಟನೆ, ವಚನ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸ, ನೂತನ ವಲಯ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿಕೆ ಸಲಗರ ವಲಯದಲ್ಲಿ ಸ್ಪರ್ದಾತ್ಮಕ ಪರಿಕೇಯಲ್ಲಿ ಪಾಸಾದ ಸಾಧಕರಿಗೆ ಸತ್ಕಾರ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು ಶರಣರು ಸಕಲ ಜೀವರಾಶಿಗಳಿಗೆ ಲೇಸನ್ನೆ ಬಯಸುವ ಮನೋಭಾವ ಅವಶ್ಯಕತೆ ಬಗ್ಗೆ ಹೆಚ್ಚಿನ ಮುತುರ್ವಜಿ ವಹಿಸಿದ್ದರು, ಇಂದು ರಾಜಕೀಯ ವ್ಯವಸ್ಥೆಯಲ್ಲಿ ಸ್ವಾರ್ತ, ಮೋಸ, ಸುಳ್ಳು, ಭ್ರಷ್ಟಾಚಾರ ಮತ್ತಿತರ ಸಮಾಜ ಘಾತುಕ ಕಾರ್ಯಗಳಿಗೆ ಹೆಚ್ಚಿನ ಪ್ರಾಸಸ್ತ್ಯ ನೀಡುತ್ತಿರುವುದು ಉತ್ತಮವಲ್ಲ,

ಕಬುರಗಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಶರಣಗೌಡ ಡಿ.ಪಾಟೀಲ, ಮಾತನಾಡಿ ಕನ್ನಡ ಭಾಷೆ ಕೇವಲ ಭಾಷೆಯಲ್ಲ, ನಮ್ಮೆಲ್ಲರ ಉಸಿರಾಗಿದೆ, ವಿಕೆ ಸಲಗರದಲ್ಲಿ ಹೆಚ್ಚಿನ ಪ್ರಮಾಣದ ಸಾಹಿತ್ಯಾಸಕ್ತರಿದ್ದಾರೆ, ಸಾಹಿತ್ಯಕ್ಕೂ ನಮ್ಮ ಗ್ರಾಮಕ್ಕೂ ಅವಿನಾಭವ ಸಂಬಂಧವಿದೆ, ಕಮಲಾಪುರ ತಾಲೂಕು ಕಸಾಪ ಕಾರ್ಯ ಸಂತಸ ತಮದಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕನ್ನಡ ಕಟ್ಟುವ ಕೆಲಸ ಮುಡಿಬರಲಿ ಎಂದು ಸಲಹೆ ನೀಡಿದರು.

ಮಾಜಿ ಕಮಲಾಪುರ ತಾಪಂ ಉಪಾಧ್ಯಕ್ಷ ದೀಪಕ ಸಲಗರ, ಕಮಲಾಪುರ ಸರಕಾರಿ ಪ್ರಾಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ನರೋಣಾ, ವಿಕೆ ಸಲಗರ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಅಜೀಜ್ ಸಾಬ,ಬಾಬುರಾವ ಗುಬ್ಬನ ಮಾತನಾಡಿದರು.

ವಿಕೆ ಸಲಗರ ಕಸಾಪ ವಲಯದ ನೂತನ ಅಧ್ಯಕ್ಷ ಬಂಡಪ್ಪ ಚೀಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಪ್ರಾಸ್ತವಿಕವಾಗಿ ಮಾತನಾಡಿದರು, ಜಿಲ್ಲಾ ಕಾರ್ಮಿಕ ಮುಖಂಡ ಸುನೀಲ ಮಾನಪಡೆ ನಿರೂಪಿಸಿದರು, ಗುಂಡಪ್ಪ ಕೊಳ್ಳುರೆ ಸ್ವಾಗತಿಸಿದರು.

ಕಬುರಗಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಶರಣಗೌಡ ಡಿ.ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ಕಾಂಗ್ರೇಸ್ ಮುಖಮಡ ಮಲ್ಲಿಕಾರ್ಜುನ ರಾಜಗಿರಿ, ಬಿಜೆಪಿ ಮುಖಂಡ ದೀಪಕ ಹೊಡಲ, ಗ್ರಾಪಂ ಅಧ್ಯಕ್ಷೇ ಸುಕ್ಷತಾ ಕಾಂಬ್ಳೆ, ವಿಕೆ ಸಲಗರ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರು ರಾಮಣ್ಣ, ಮುದ್ದಡಗಾ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರು ಆನಂದಕುಮಾರ ಕುಲಕರ್ಣಿ, ಸುಜಾತಾ ವಗ್ಗಿ, ಸೋಮಶೇಕರ ಸಿಂಗೆ, ದಿಲೀಪ ಸರಡಗಿ, ಗುಂಡಪ್ಪ ಕೊಳ್ಳುರೆ, ಇಸ್ಮಾಯಿಲ್ ಶ್ರೀಂಚಂದ, ರವಿಕುಮಾರ ಕಾಂಬ್ಳೆ, ಸುರೇಶ ಹೊಡಲ್, ಅನಂತ ಪಾಟೀಲ, ಬಸವರಾಜ ಪಾರಾ, ಸಾಯಿಬಣ್ಣ ಪುಜಾರಿ, ಸುನೀಲ ಪೀರಪ್ಪ, ಶ್ರೀನಾಥ ಇತರರು ಇದ್ದರು.

ವಿಕೆ ಸಲಗರ ಐತಿಹಾಕ ಹಜಿನ್ನೆಲೆ ಹೊಂದಿದ ಹೋಬಳಿಯಾಗಿದ್ದು, ಹಲವಾರು ಸಾಹಿತಿಗಳಿಗೆ ಜನ್ಮ ನೀಡಿ ಪುಣ್ಯ ಭೂಮಿಯಲ್ಲಿ ಸಾಹಿತ್ಯಿಕ ವಾತಾವರನ ಮೂಡಿಸಿ, ಸಹೋದರತ್ವ, ಸಾಮರಸ್ಯದ ಮನೋಭಾವ ಬೆಳೆಸಲು ತಾಲುಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಾಮಾನಿಕವಾದ ಪ[ರಯತ್ನ ಮಾಡುತ್ತೇವೆ.- ಸುರೇಶ ಲೇಂಗಟಿ ತಾಲೂಕು ಅಧ್ಯಕ್ಷ, ಕಸಾಪ ಕಮಲಾಪುರ.

emedialine

Recent Posts

ಇಂದಿನಿಂದ ಸೂಗೂರ (ಕೆ ) ನವರಾತ್ರಿ ಬ್ರಹ್ಮೋತ್ಸವ

ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ )…

7 mins ago

ಕಾಳಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿವ್ಯ…

47 mins ago

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

14 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

17 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

22 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420