ಬಿಸಿ ಬಿಸಿ ಸುದ್ದಿ

ಕೇಂದ್ರ ಕಾರಾಗೃಹದಲ್ಲಿ ಮಾನಸಿಕ ಆರೋಗ್ಯ ಮತ್ತು ಜಾಗೃತಿ ಕಾರ್ಯಕ್ರಮ

ಕಲಬುರಗಿ: ಕೇಂದ್ರ ಕಾರಾಗೃಹ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕ ಹಾಗೂ ಕೇಂದ್ರ ಕಾರಾಗೃಹ ಸಹಯೋಗದೊಂದಿಗೆ ಕಾರಾಗೃಹದ ಬಂದಿಗಳಿಗೆ ತಂಬಾಕು ಸೇವೆನೆಯ ದುಷ್ಪರಿಣಾಮ, ಮಾನಸಿಕ ಆರೋಗ್ಯ ಅರಿವು ಮತ್ತು ಹೆ.ಚ್.ಐ.ವಿ ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು. ಆರೋಗ್ಯ ಇಲಾಖೆ ವತಿಯಿಂದ ಆಗಮಿಸಿದ ತಂಬಾಕು ಸಮಾಜಿಕ ಕಾರ್ಯಕರ್ತರಾದ ಕು|| ಆರತಿರವರು ಮಾತನಾಡುತ್ತಾ, ತಂಬಾಕು ಸೇವೆನೆಯಿಂದ ನೀವು ಬೀಡಿ ಸಿಗರೇಟ್‍ನಿಂದ ಬಿಡುವ ಹೊಗೆ ನಿಮ್ಮ ಶರೀರದ ಒಳಗಡೆ ಅಲ್ಲದೇ ನಿಮ್ಮ ಪಕ್ಕದಲ್ಲಿರುವ ಇತರೇ ಜನರಿಗೆ ಗಾಳಿಯ ಮೂಲಕ ನೇರವಾಗಿ ತಂಬಾಕು ಸೇವೆನೆಯ ಹೊಗೆಯನ್ನು ಅವರು ಪಡೆದು ಅನಾರೋಗ್ಯಕ್ಕೆ ತುತ್ತಾಗಿ ಹಲವಾರು ರೋಗಗಳಿಗೆ ಕಾರಣಿಭೂತರಾಗುತ್ತೀರಿ (ಉದಾ: ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸ ಕೋಶದ ಕಾಯಿಲೆಗಳು, ತಂಬಾಕು ಸೇವನೆಯೇ ಪ್ರಮುಖ ಕಾರಣಾವಾಗಿದೆ ಎಂದು ತಿಳಿಸಿದರು.

ಮನ ಶಾಸ್ತ್ರಜ್ಞರಾದ ಮತಿ ಸಂತೋಷಿ ಗುಳೆ, ಮಾತನಾಡುತ್ತಾ, ತಂಬಾಕು ಸೇವನೆಯು ಶೋಕಿಗೋ ಅಥವಾ ಗೆಳೆಯರ ಒತ್ತಡಕ್ಕೊ ಹಾಗೂ ಮಾನಸಿಕ ಒತ್ತಡಕ್ಕೆ ತಂಬಾಕು ಸೇವನೆಯನ್ನು ಮಾಡುತ್ತೀರಿ. ಇವುಗಳಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುವುದನ್ನು ಮನಗೊಂಡರು ಕೂಡ ತಂಬಾಕು ಸೇವನೆಗೆ ತುತ್ತಾಗುತ್ತೀರಿ. ಅದರ ಬದಲಾಗಿ ವೈದ್ಯರ ಹತ್ತಿರ ಅಥವಾ ಮಾನಸಿಕ ತಜ್ಞರ ಹತ್ತಿರ ಆಪ್ತ ಸಮಾಲೋಚಿಸಿ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಸಲಹೆ ಸೂಚನೆಯನ್ನು ಪಡೆದುಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು.

ಸುಗಲಾ ರಾಣಿ, ಐ.ಸಿ.ಟಿ.ಸಿ ಆಪ್ತ ಸಮಾಲೋಚಕರು, ಮಾತನಾಡುತ್ತಾ, ಹೆಚ್.ಐ.ವಿ. ಬಗ್ಗೆ ಏಡ್ಸ್ ರೋಗ ಹರಡುವ ವಿಧಗಳು ಹಾಗೂ ಇವುಗಳಿಂದ ನಿಯಂತ್ರಣವನ್ನು ಪಡೆಯುವ ಬಗ್ಗೆ ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಪಿ.ರಂಗನಾಥ್, ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗೃಹ ರವರು ಮಾತನಾಡುತ್ತಾ, ವಿವಿಧ ರೀತಿಯ ತಂಬಾಕು ಸೇವೆನೆ ಮಾಡುವುದರಿಂದ ಚಟಕ್ಕೆ ಬಿದ್ದು, ವ್ಯಸನಿಗಳಾಗಿ ದೈಹಿಕ ಮತ್ತು ಮಾನಸಿಕ ದುರ್ಬಲರಾಗಿ ಆಗುವುದರ ಜೊತೆಗೆ ಅರ್ಥಿಕವಾಗಿ ನಷ್ಟ ಹೊಂದಿ ಕುಟುಂಬ ನಿರ್ವಹಣೆ ಮಾಡುವುದು ಕೂಡ ದುಸ್ತರವಾಗುತ್ತದೆ ಮತ್ತು ತಂಬಾಕು ಸೇವನೆಗಳನ್ನು ನೀವು ದೂರು ಮಾಡಲು ಕಾರಾಗೃಹದಲ್ಲಿರುವ ವೃತ್ತಿಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ವ್ಯಸನಿಗಳಿಂದ ಮುಕ್ತಿಪಡೆದು ಒಳ್ಳೆಯ ಮತ್ತು ಸದೃಡ ಆರೋಗ್ಯವನ್ನು ಪಡೆದು ಒಳ್ಳೆಯ ಜೀವನವನ್ನು ನಡೆಸಲು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಹಾಯಕ ಅಧೀಕ್ಷಕರಾದ  ವಿ.ಕೃಷ್ಣಮೂರ್ತಿ, ಕೇಂದ್ರ ಕಾರಾಗೃಹ, ವೈದ್ಯಾಧಿಕಾರಿಗಳಾದ ಡಾ. ರವೀಂಧ್ರ ಬನ್ನೇರಿ, ಡಾ. ಬಸವರಾಜ ಕಿರಣಗಿ, ಕೇಂದ್ರ ಕಾರಾಗೃಹ, ರವಿ ಪೂಜಾರಿ ಕಂಪ್ಯೂಟರ್ ಆಪರೇಟರ್ ಕಾರಾಗೃಹದ ಎಲ್ಲಾ ಜೈಲರ್ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದರು.

ಸ್ವಾಗತ ಕಾರ್ಯಕ್ರಮವನ್ನು ಮಹಾದೇವಿ, ಸೈಕ್ಯಾಟ್ರಿಕ್ ಕೌನ್ಸಲರ್ ಕೇಂದ್ರ ಕಾರಾಗೃಹ ಕಲಬುರಗಿ ರವರು ನಡೆಸಿಕೊಟ್ಟರು. ಪ್ರಾರ್ಥನಾ ಗೀತೆಯನ್ನು ಬಂದಿಯಾದ ವಿಶ್ವರಾಜ್ ಇವರು ನಡೆಸಿದರು. ನಿರೂಪಣೆಯನ್ನು ನಾಗರಾಜ ಮುಲಗೆ ಶಿಕ್ಷಕರು ಕೇಂದ್ರ ಕಾರಾಗೃಹ ಕಲಬುರಗಿ ರವರು ನೇರವೆರಿಸಿದರು.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

3 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

14 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 day ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 day ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago