ಆಳಂದ: ಮಂಗಳವಾರ ಆಳಂದ ತಾಲೂಕಿನ ಕಾಮನಳ್ಳಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆಯಿಂದ ಮಂಜೂರಾದ ರೂ. 100.00 ಲಕ್ಷಗಳ ಕಾಮನಳ್ಳಿಯಿಂದ ಹಿರೋಳ್ಳಿವರೆಗಿನ ರಸ್ತೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕರಾದ ಸುಭಾಷ ಆರ್ ಗುತ್ತೇದಾರ ಅವರು ನೆರವೇರಿಸಿದರು.
ನಂತರ ಮಾತನಾಡಿದ ಅವರು, ಹಿಂದಿನ ಶಾಸಕರು 400 ಕೆರೆ ಮಾಡುವುದಾಗಿ ಹೇಳಿ ಒಂದೂ ಕೆರೆ ಮಾಡದೆ ಜನತೆ ಮೋಸ ಮಾಡಿದ್ದಾರೆ. ಆದರೆ ನಾನು ಅಧಿಕಾರಕ್ಕೆ ಬಂದ ಮೇಲೆ 200ಕೋಟಿ ಅನುದಾನದಲ್ಲಿ ಅಂತರ್ಜಲ ವೃದ್ಧಿಯ ಕಾಮಗಾರಿ ಕೈಗೆತ್ತಿಕೊಂಡಿದ್ದು, ಮಾಡಿದ ಅಭಿವೃದ್ಧಿ ಕೆಲಸ ಸಾಕಷ್ಟಾಗಿದ್ದರು ಸಹ ಇನ್ನೂ ಮಾಡುವುದು ಬಹಳಷ್ಟಿದೆ. ಚುನಾವಣೆ ಸಮೀಪಿಸುತ್ತಿದ್ದು ಮುಂದೆಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದ್ದು, ಮತ್ತೊಮ್ಮೆ ಚುನಾವಣೆ ಸ್ಫರ್ಧೆಬಯಸಿದ್ದು, ಹೆಚ್ಚಿನ ಮತಗಳನ್ನು ನೀಡಿ ಆಶೀರ್ವದಿಸಿದರೆ ಕ್ಷೇತ್ರವನ್ನು ನೀರಾವರಿ, ಶಿಕ್ಷಣ, ರಸ್ತೆ ಅಭಿವೃದ್ಧಿಯ ಕ್ರಾಂತಿಯನ್ನು ಮಾಡಲಾಗುವುದು ಎಂದು ಅವರು ಹೇಳಿದರು.
ಪಂಚಾಯತ ರಾಜ ಇಂಜಿನಿಯರಿಂಗ್ ಇಲಾಖೆಯ ಕಿರಿಯ ಅಭಿಯಂತರ ಲಿಂಗರಾಜ ಪೂಜಾರಿ, ಗುತ್ತಿಗೆದಾರ ಅಣ್ಣಾರಾವ ಸಣ್ಣಮನಿ, ಆಳಂದ ಪುರಸಭೆ ಮಾಜಿ ಅಧ್ಯಕ್ಷರು ವಿಠ್ಠಲರಾವ ಪಾಟೀಲ, ಗ್ರಾಮ ಪಂಚಾಯತಿ ಸದಸ್ಯರಾದ ಕಾಶಿನಾಥ ವಾಡೆದ, ಮಲ್ಲಿಕಾರ್ಜುನ ಪಾಟೀಲ, ಶೇಖರ ಪಾಟೀಲ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಅಣ್ಣಪ್ಪ ಶಹಾಪೂರೆ, ಲಕ್ಷ್ಮೀಪುತ್ರ, ದಾನಯ್ಯ ಸ್ವಾಮಿ, ಪರಮೇಶ್ವರ, ಚಂದ್ರಕಾಂತ ಬಿಂದಗೆ, ಮಹಾದೇವಪ್ಪ ಬೆಳಮಗಿ, ಮಲ್ಲಿಕಾರ್ಜುನ ಸರಡಗಿ, ಚಂದ್ರಕಾಂತ ನಿಂಬಾಳೆ, ಮಲ್ಲಿಕಾರ್ಜುನ ಅಳ್ಳಗಿ, ಗುಂಡೇರಾವ ಬಿರಾದಾರ, ಸಿದ್ದರಾಮ ಬೆಳಮಗಿ, ಮಲ್ಲಿನಾಥ ಪಾಟೀಲ, ಅಜೀತ ಕುಲ್ಕರ್ಣಿ, ಮಹಾದೇವ ಕುಮಟಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…