ಕಲಬುರಗಿ: ತನ್ನನ್ನು ತಾನು ಪರಿಶುದ್ಧ ಮಾಡಿಕೊಳ್ಳುವ ಧಾರ್ಮಿಕ ತಾತ್ವಕತೆ ಹೊಂದಿರುವ ಶರಣ ಧರ್ಮ ಇತರ ಧರ್ಮಗಳಿಗಿಂತ ಭಿನ್ನವಾಗಿ ಬೆಳೆದು ಬಂದಿದೆ ಎಂದು ಶರಣ ಸಾಹಿತಿ ಡಾ. ಸೋಮನಾಥ ಯಾಳವಾರ ತಿಳಿಸಿದರು.
ನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂ. ಜಗದೇವಪ್ಪ ರೇವಪ್ದಪ ಮೋತಕಪಳ್ಳಿ ಸ್ಮರಣಾರ್ಥ 739ನೇ ಅರಿವಿನ ಮನೆ ಕಾರ್ಯಕ್ರಮದಲ್ಲಿ “ಶರಣ ಸಂಸ್ಕøತಿ-ತಾತ್ವಿಕ ನಿಲುವುಗಳು” ವಿಷಯ ಕುರಿತು ಅನುಭಾವ ನೀಡಿದ ಅವರು, ಶರಣ ಸಂಸ್ಕøತಿಯನ್ನು ಪರಿಶೀಲನೆ ಮಾಡುವಾಗ ಬಸವÀ ಧರ್ಮ ಸಾಮಾನ್ಯ ಧರ್ಮವಲ್ಲ. ವೈಚಾರಿಕ ವೈಜ್ಞಾನಿಕ ಅಂಶಗಳಿರುವುದಲ್ಲದೆ ಮಾನವೀಯ ನೆಲೆಯಲ್ಲಿ ರೂಪುಗೊಂಡ ಧರ್ಮ ಎಂಬುದು ಅರಿವಿಗೆ ಬರುತ್ತದೆ ಎಂದು ತಿಳಿಸಿದರು.
ಯಾರು ತನಗಿಂತ ದೊಡ್ಡ ಶಕ್ತಿಯಿದೆ ಎಂದು ತಿಳಿದು ತನ್ನನ್ನು ತಾನು ಸಮರ್ಪಿಸಿಕೊಳ್ಳುವುದೇ ಮಾನವ ಸಂಸ್ಕøತಿಯ ಜೀವಾಳ. ಇಂತಹ ಲೋಕಹಿತ ಬಯಸುವ ನೆಲೆಯಲ್ಲಿ ಬದುಕಿದ ಶರಣರು ಅದೇ ನೆಲೆಯಲ್ಲಿ ಬದುಕುವಂತೆ ಬೋಧಿಸಿದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಣಮಂತರಾವ ಮೋತಕಪಳ್ಳಿ ಮಾತನಾಡಿ, ಕಾಯಕ-ದಾಸೋಹದ ತಳಹದಿಯಲ್ಲಿ ಬೆಳೆದು ನಿಂತಿರುವ ಲಿಂಗಾಯತ ಧರ್ಮ ಮನುಷ್ಯನನ್ನು ಆತ್ಮೋನ್ನತಿಯ ಕಡೆಗೆ ಕರೆದೊಯುತ್ತದೆ ಎಂದು ವಿವರಿಸಿದರು.
ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಹಾಗೂ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ ವೇದಿಕೆಯಲ್ಲಿದ್ದರು. ದತ್ತಿ ದಾಸೋಹಿ ಕಾಶಿನಾಥ ಮೋತಕಪಳ್ಳಿ ಸ್ವಾಗತಿಸಿದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿ ವಂದಿಸಿದರು.
ಜೀವ ಕಾರಣ್ಯ ಹೊಂದಿರುವ ಶರಣ ಸಂಸ್ಕøತಿಯ ತಾತ್ವಿಕತೆಯನ್ನು ಗಮನಿಸುವಾಗ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸೇರಿದಂತೆ ಅನೇಕ ತಾತ್ವಿಕ ಚಿಂತನೆಗಳು ಗೋಚರವಾಗುತ್ತವೆ. ಆತ್ಮ-ಪರಮಾತ್ಮವಾಗಿ ಬೆಳೆಯುವ ಅಪೂರ್ವ ಸಾಧನಾ ಕ್ರಮ ಇದಾಗಿದೆ. -ಡಾ. ಸೋಮನಾಥ ಯಾಳವಾರ, ಹುಮನಾಬಾದ
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…