ಶಹಾಬಾದ: ಪ್ರಜಾಪ್ರಭುತ್ವದ ಮುಖವಾಡವನ್ನು ಹೊತ್ತಿರುವ ಇಂದಿನ ಬಂಡವಾಳಶಾಹಿ ವ್ಯವಸ್ಥೆಯಿಂದ್ದಾಗಿ ದೇಶದಲ್ಲಿ ನಿರುದ್ಯೋಗ, ಬಡತನ, ಅನಕ್ಷರತೆ, ಭ್ರಷ್ಟಾಚಾರ, ಕೋಮುವಾದ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚಾಗುತ್ತಿದ್ದು ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಆಳ್ವಿಕೆ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಟಾಟಾ, ಬಿರ್ಲಾ, ಅಂಬಾನಿ. ಆದಾನಿಯಂತಹ ಬಂಡವಾಳಶಾಹಿಗಳ ಪಾದಸೇವೆಯಲ್ಲಿಯೇ ನಿರತರಾಗಿದ್ದು ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಎ.ಐ.ಡಿ.ಎಸ್.ಓ ನ ಅಖಿಲ ಭಾರತ ಅಧ್ಯಕ್ಷರಾದ ಕಾಮ್ರೇಡ್ ವಿ.ಎನ್.ರಾಜಶೇಖರ ರವರು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಜನ ಎದುರಿಸುತ್ತಿರು ಜ್ವಲಂತ ಸಮಸ್ಯೆಗಳಿಗೆ ನೇತಾಜಿ ಸುಭಾಷಚಂದ್ರ ಬೋಸರವರು ಕಂಡಂತಹ ಸಮಾನತೆಯ ಸಮಾಜವನ್ನು ಸ್ಥಾಪಿಸಲು ವಿದ್ಯಾರ್ಥಿ-ಯುವಜನರು ಜಾತಿ-ಧರ್ಮದ ಭೇದ-ಭಾವಗಳನ್ನು ತೊರೆದು ಒಗ್ಗಟ್ಟಾಗಿ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಟದ ಕಣಕ್ಕೆ ಧುಮುಕಬೇಕೆಂದು ಕರೆ ನೀಡಿದರು.
ನಗರದ ಸಿದ್ದರಾಮೇಶ್ವ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಂIಆSಔ), ಆಲ್ ಇಂಡಿಯಾ ಡೆಮಾಕ್ರೇಟಿಕ್ ಯೂತ್ ಆರ್ಗನೈಜೇಷನ್ (ಂIಆಙಔ) ಹಾಗೂ ಆಲ್ ಇಂಡಿಯಾ ಮಹಿಳಾ ಸಾಂಸ್ಕøತಿಕ ಸಂಘಟನೆ (ಂIಒSS) ಶಹಾಬಾದ ಸ್ಥಳೀಯ ಸಮಿತಿಗಳ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಷಚಂದ್ರ ಬೋಸ್‍ರವರ 125ನೇ ಜನ್ಮ ವಾರ್ಷಿಕೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಂಗವಾಗಿ 10ನೇ ಸಾಂಸ್ಕøತಿಕ ಜನೋತ್ಸವದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು ನಮ್ಮನ್ನಾಳುವ ಸರಕಾರಗಳು ವ್ಯವಸ್ಥಿತವಾಗಿ ಜಾತಿ, ಧರ್ಮ, ಭಾಷಾ ಹಾಗೂ ಪ್ರದೇಶಗಳ ಆಧಾರದ ಮೇಲೆ ವಿಭಜನಸೂತ್ರವನ್ನು ಆಳವಡಿಸುತ್ತಿದ್ದು ಜನರ ಐಕ್ಯತೆಯನ್ನು ಛದ್ರಗೊಳಿಸುತ್ತಿದೆ. ಮತ್ತೊಡೆ ಶಿಕ್ಷಣದಲ್ಲಿ ಧಾರ್ಮಿಕ ವಿಷಯಗಳನ್ನು ತುರುಕಿ ಶಿಕ್ಷಣವನ್ನು ಕೋಮುವಾದಿಕರಣಗೊಳಿಸುತ್ತಿದೆ. ಬಾಲ್ಯಾವಸ್ಥೆಯಲ್ಲಿ ವಿದ್ಯಾರ್ಥಿ-ಯುವಜನರಲ್ಲಿ ದ್ವೇಷದ ಮನೋಭಾವನೆಯನ್ನು ಬೆಳೆಸುತ್ತಿರುವುದು ದೇಶಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ನೇತಾಜಿಯವರು ಯಾವುದೇ ಜಾತಿ-ಧರ್ಮವನ್ನು ಪ್ರೋತ್ಸಾಯಿಸದೆ ತಮ್ಮ ಸೈನ್ಯದಲ್ಲಿ ಒಂದೇ ಅಡುಗೆಮನೆಯ ಮೂಲಕ ಎಲ್ಲಾ ಜಾತಿ-ಧರ್ಮದವರು ಸಮಾನವಾಗಿ ಸಹಭೋಜನದ ವ್ಯವಸ್ಥೆ ಮಾಡಿದ್ದರು. ಇದು ಅವರಲ್ಲಿದ್ದ ನಿಜವಾದ ಜಾತ್ಯಾತೀತ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ. ಇದು ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಸುಭಾಷಚಂದ್ರ ಬೋಸರವರ ಹೆಸರನ್ನು ಚುನಾವಣೆಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳತ್ತಿವೆ ಎಂದು ಹೇಳಿದರು.
ಭಂಕೂರಿನ ಕರ್ನಾಟಕ ಪದವಿ ಕಾಲೇಜ್‍ನ ಪ್ರಾಂಶುಪಾಲರಾದ ಪ್ರೋ, ಬಾಲರಾಜ್ ಮಾಚನೂರು ರವರು ಕಾರ್ಯಕ್ರಮವನ್ನು ಡೋಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ಅಗ್ರಗಣ್ಯ ನಾಯಕರು ನೇತಾಜಿಯವರು ಬ್ರಿಟಿಷರನ್ನು ದೇಶದಿಂದ ಹೊರದೂಡುವುದರೊಂದಿಗೆ ನಮ್ಮ ಕರ್ತವ್ಯ ಕೊನೆಗೊಳ್ಳುವುದಿಲ್ಲ, ನವಸಮಾಜದ ಸೃಷ್ಟಿಗೆ ಇನ್ನೊಂದು ಕ್ರಾಂತಿಯನ್ನು ಸಂಘಟಿಸಬೇಕೆಂದು ಹೇಳಿದ್ದರು. ಬಡತನ, ಅನಕ್ಷರತೆ, ಜಾತಿವಾದ, ಕೋಮುವಾದಗಳಿಂದ ಜರ್ಜರಿತವಾಗಿರುವ ನಮ್ಮ ಸಮಾಜದಲ್ಲಿ ಮೂಲಭೂತ ಬದಲಾವಣೆಯಾಗಬೇಕು. ಮಾನವನಿಂದ ಮಾನವನ ಶೋಷಣೆಯಿಲ್ಲದ ಸಮಾಜ ನಿರ್ಮಾಣವಾಗಬೇಕು ಎಂಬುದು ಅವರ ಕನಸಾಗಿತ್ತು. ಅದಕ್ಕಾಗಿ ಇನ್ನೊಂದು ಕ್ರಾಂತಿಯ ಅಗತ್ಯತೆಯನ್ನು ಅವರು ಪ್ರತಿಪಾದಿಸಿದರು ಎಂದು ಹೇಳಿದರು.
ಭಾಷಣಕಾರರಾಗಿ ಂIಒSS ಕಲಬುರಗಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಕಾಮ್ರೇಡ್ ಗುಂಡಮ್ಮ ಮಡಿವಾಳರವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸುತ್ತ ನೇತಾಜಿರವರ ವಿಚಾರವನ್ನು ಜನರ ಹತ್ತಿರ ತೆಗೆದುಕೊಂಡು ಹೋಗಲು ನಮ್ಮ ಸಂಘಟನೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆನರಿಗೆ ಉನ್ನತ ನೀತಿ ಉನ್ನತ ಸಂಸ್ಕøತಿಯನ್ನು ಬೆಳೆಸಲು ನೇತಾಜಿರವರ ಜನ್ಮ ದಿನದ ಪ್ರಯುಕ್ತ ಇಂದು 10ನೇ ಸಾಂಸ್ಕøತಿಕ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿ-ಯುವಜನರು ನೇತಾಜಿ ಸುಭಾಷಚಂದ್ರ ಬೋಸ್ ರಂತಹ ಕ್ರಾಂತಿಕಾರಿಗಳನ್ನು ಆದರ್ಶವಾಗಿ ತೆಗೆದುಕೊಳ್ಳಬೇಕೆಂದು ಕರೆನೀಡಿದರು.
ಅಧ್ಯಕ್ಷತೆಯನ್ನು ಂIಆಙಔ ಸ್ಥಳೀಯ ಸಮಿತಿಯ ಕಾರ್ಯದರ್ಶಿಯಾದ ಕಾಮ್ರೇಡ್ ರಮೇಶ ದೇವಕರರವರು ವಹಿಸಿಕೊಂಡಿದ್ದರು. ಂIಆSಔ ಶಹಾಬಾದ ಸ್ಥಳೀಯ ಸಮಿತಿಯ ಕಾರ್ಯದರ್ಶಿಯಾದ ಕಾಮ್ರೇಡ್ ಅಜಯ ಗುರಜಾಲಕರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನೆರೆದಿದ್ದ ನೂರಾರು ಜನರ ಮನಸೂರೆಗೊಳಿಸಿತು. ಎಸ್.ಎಸ್. ಮರಗೋಳ ಕಾಲೇಜಿನ ವಿದ್ಯಾರ್ಥಿಗಳಿಂದ ಡೊಳ್ಳಿನ ಕುಣಿತಾ, ಶಿಕ್ಷಕಿಯಾದ ಶ್ರೀಮತಿ ಜಿ.ಎಸ್.ಪಲ್ಲವಿಯವರಿಂದ ಪ್ರಗತಿಪರ ಗೀತೆಗಳು, ಯು.ಎಮ್.ಇ ಶಾಲೆಯ ಮಕ್ಕಳು ನೇತಾಜಿ ಸುಭಾಷಚಂದ್ರ ಬೋಸರವರ ಕಿರುನಾಟಕ, ಸ್ವಾಮಿ ವಿವೇಕಾನಂದ ಶಾಲೆಯ ಮಕ್ಕಳು ಜನಪದ ನೃತ್ಯ, ಕುಮಾರಿ ಬೃಂದಾ ಗುರುಜಾಲಕರ್ ರವರ ಕಿತ್ತೂರುರಾಣಿ ಚೆನ್ನಮ್ಮನ ಏಕಪಾತ್ರಾಭಿನಯ, ದಿ ಸ್ಪಿರೀಟ್ ನೃತ್ಯ ಶಾಲೆಯ ದೇಶಭಕ್ತಿ ಗೀತೆಯ ನೃತ್ಯ, ಹನುಮಾನ ನಗರದ ಬಾಲಕಿಯರಿಂದ ಜನಪದ ನೃತ್ಯ ಹಾಗೂ ಕುಮಾರಿ ವಿಜಯಲಕ್ಷ್ಮೀಯ ನೃತ್ಯಗಳು ಜನರನ್ನು ಸಂತೋಷಗೊಳಿಸದವು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…