ಕಲಬುರಗಿ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ (ರಿ), ವಿಕಾಸ ಅಕಾಡೆಮಿ, ಗುಲಬರ್ಗಾ ವಿಶ್ವವಿದ್ಯಾಲಯ , ಚೈತನ್ಯಮಯಿ ಆರ್ಟ್‍ಗ್ಯಾಲರಿ, ಕಲಬುರಗಿ, ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆ, ಕಲಬುರಗಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಮತ್ತು ದಿ ಆರ್ಟ್ ಇಂಟಿಗ್ರೇಷನ್ ಸೊಸಾಯಿಟಿ, ಇವುಗಳ ಸಂಯುಕ್ತಾಶ್ರಯದಲ್ಲಿ 2023ರ ಫೆಬ್ರುವರಿ 19 ರಂದು ಒಂದು ದಿನದ 10ನೇ ಚಿತ್ರಸಂತೆಯನ್ನು ನಗರದ ಮಹಾನಗರ ಪಾಲಿಕೆಯ ಸಾರ್ವಜನಿಕ ಉದ್ಯಾನವನದಲ್ಲಿ ಆಯೋಜಿಸಲಾಗಿದೆ..
ಚಿತ್ರಸಂತೆಯಲ್ಲಿ ಚಿತ್ರಕಲಾವಿದರು ತಮ್ಮ ಚಿತ್ರ-ಶಿಲ್ಪಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಸ್ಥಳಾವಕಾಶ ಮಾಡಿಕೊಡಲಾಗುವುದು. ಚಿತ್ರಸಂತೆಯಲ್ಲಿ ಭಾಗವಹಿಸಲು ಆಸಕ್ತಿವುಳ್ಳ ಚಿತ್ರಕಲಾವಿದರು ಮತ್ತು ಕಲಾ ಸಂಸ್ಥೆಗಳು, ಕಲಬುರಗಿಯ ದಿ ಆರ್ಟ್ ಇಂಟಿಗ್ರೇಷನ್ ಫೈನ್ ಆರ್ಟ್ ಕಾಲೇಜು ಅಗ್ನಿಶಾಮಕ ಕೇಂದ್ರದ ಎದುರುಗಡೆ ಎಸ್.ಬಿ.ಟೆಂಪಲ್ ರಸ್ತೆ, ಕಾಳೇ ಲೇಔಟ್ ಕಲಬುರಗಿ ಇವರಿಗೆ ಬೆಳಿಗ್ಗೆ 10:30 ರಿಂದ ಸಂಜೆ 5:30ರ ವರೆಗೆ ಅರ್ಜಿ ನಮೂನೆ ಪಡೆದು, ಒಂದು ಭಾವಚಿತ್ರ, ಸ್ವಪರಿಚಯ ಮತ್ತು ಚಿತ್ರಕಲಾಕೃತಿಯ ಎರಡು ಛಾಯಾಚಿತ್ರದೊಂದಿಗೆ 2023ರ ಫೆಬ್ರುವರಿ 15 ರೊಳಗಾಗಿ ತಲುಪಿಸಬೇಕು. ಚಿತ್ರಸಂತೆಯಲ್ಲಿನ 5 ಅತ್ಯುತ್ತಮವಾದ ಕಲಾ ಮಳಿಗೆಗಳಿಗೆ ತಲಾ 5000/- ರೂ. ಗಳಂತೆ ನಗದು ಬಹುಮಾನ ನೀಡಲಾಗುವುದು.
ಈ ಚಿತ್ರಸಂತೆಯಲ್ಲಿ ಚಿತ್ರ, ಶಿಲ್ಪ, ಗ್ರಾಫಿಕ್ ಮಾಧ್ಯಮದ ಕಲಾಕೃತಿಗಳಲ್ಲದೆ, ವಿವಿಧ ಶೈಲಿಯ ಸಾಂಪ್ರದಾಯಿಕ ಚಿತ್ರಗಳನ್ನು ಈ ಚಿತ್ರಸಂತೆಯಲ್ಲಿ ಮಾರಾಟ ಮತ್ತು ಪ್ರದರ್ಶನಕ್ಕೆ ಇಡಬಹುದಾಗಿದೆ. ಈ ಬೃಹತ್ ಚಿತ್ರಕಲಾ ಪ್ರದರ್ಶನದಿಂದ ಜನಸಾಮಾನ್ಯರಲ್ಲಿ ಕಲಾಸಕ್ತಿಯು ಬೆಳೆಯುವುದರ ಜೊತೆಗೆ ಈ ಭಾಗದ ಕಲಾವಿದರಿಗೂ ಪ್ರೋತ್ಸಾಹ ದೊರೆಯುತ್ತದೆ.
ನೋಂದಣಿ ಶುಲ್ಕ 250/- ರೂಪಾಯಿ ಇದ್ದು ದಿ ಆರ್ಟ್ ಇಂಟಿಗ್ರೇಷನ್ ಫೈನ್ ಆರ್ಟ್ ಕಾಲೇಜಿನಲ್ಲಿ ನಗದು ಸಂದಾಯ ಮಾಡಬಹುದು. ಅಥವಾ ದೃಶ್ಯಬೆಳಕು ಸಾಂಸ್ಕøತಿಕ ಸಂಸ್ಥೆ, ಕಲಬುರಗಿ ಹೆಸರಿನಲ್ಲಿ ಡಿ.ಡಿ. ಕಳುಹಿಸಿಕೊಡಬಹುದು.
ಹೆಚ್ಚಿನ ಮಾಹಿತಿಗಾಗಿ: ಚಿತ್ರಸಂತೆ ಸಂಯೋಜಕರಾದ ಡಾ. ಪರಶುರಾಮ ಪಿ.: 9901360105, ಡಾ. ಎ.ಎಸ್. ಪಾಟೀಲ: 94492 91682, ಎಮ್.ಎಚ್.ಬೆಳಮಗಿ: 9448585796, ವಿ. ಬಿ. ಬಿರಾದಾರ : 9845634358 ಅವರನ್ನು ಸಂಪರ್ಕಿಸಬಹುದು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…