ಸೇಡಂ; ತಾಲೂಕಿನ ಮಳಖೇಡ ಸ್ಟೇಷನ ತಾಂಡಾದಲ್ಲಿ ಹಾಗೂ ನೃಪತುಂಗಾ ನಗರದಲ್ಲಿ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಅಭ್ಯರ್ಥಿ ಬಾಲರಾಜ ಗುತ್ತೇದಾರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾರ್ಯಕ್ರಮ ವನ್ನು ಉದ್ದೇಶಿಸಿ ಜೆಡಿಎಸ್ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ಅವರು ಮಾತನಾಡಿ ರಾಷ್ಟ್ರೀಯ ಪಕ್ಷದ ನಾಯಕರುಗಳಿಗೆ ಯುವಕರ ಬಗ್ಗೆ ಸ್ವಲ್ಪ ಕೂಡಾ ಕಾಳಜಿ ವಹಿಸುತ್ತಿಲ್ಲ. ಸೇಡಂ ತಾಲ್ಲೂಕಿನಲ್ಲಿ ಇಷ್ಟೊಂದು ಕಾರ್ಖಾನೆಗಳು ಇದ್ದರೂ ಸ್ಥಳೀಯರಿಗೆ ಉದ್ಯೋಗ ಒದಗಿಸುವಲ್ಲಿ ಮಲತಾಯಿ ಧೋರಣೆ ಮಾಡುತ್ತಿದ್ದಾರೆ.
ಯುವಕರು ಉದ್ಯೋಗವಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ಸೇಡಂನಲ್ಲಿ ಖಾಸಗಿ ಕಾರ್ಖಾನೆಗಳು ನಡೆಯುತ್ತಿದ್ದು ಅವುಗಳು ಉತ್ತಮ ಲಾಭದಲ್ಲಿದೆ ಆದರೆ ಕುರುಕುಂಟದಲ್ಲಿರುವ ಸರ್ಕಾರಿ ಸಿಮೆಂಟ್ ಕಾರ್ಖಾನೆ ಯಾಕೆ ಚಾಲ್ತಿಯಲ್ಲಿ ಇಲ್ಲ . ತಾಲೂಕಿನಲ್ಲಿ ಐದು ಖಾಸಗಿ ಕಾರ್ಖಾನೆಗಳು ಇದ್ದರೂ ಕೂಡ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿವೆ ಬೇರೆ ರಾಜ್ಯಗಳಿಂದ ಬಿಹಾರ್, ರಾಜಸ್ಥಾನ್, ಗುಜರಾತ್ ಇನ್ನು ಅನೇಕ ಹೊರ ರಾಜ್ಯದಿಂದ ಬಂದವರಿಗೆ ನೌಕರಿ ಸಿಗುತ್ತಿದೆ. ಸ್ಥಳೀಯರಿಗೆ ಮಾತ್ರ ಪ್ರತಿಶತ 20% ಕೂಡ ನೌಕರಿ ಇಲ್ಲ.
ಯಾಕೆ ಈ ರೀತಿ ನಮ್ಮ ಜನರಿಗೆ ಆಗುತ್ತಿದೆ ಯಾರು ಇಲ್ಲಿ ಹೇಳೋರು ಕೇಳೋರು ಇಲ್ವಾ. ಎರಡು ರಾಷ್ಟ್ರೀಯ ಪಕ್ಷದ ನಾಯಕರು ಇದರ ಬಗ್ಗೆ ಮಾತಾಡೋದು ಇಲ್ಲ. ಅದೇ ರೀತಿ ರೈತರ ಸಮಸ್ಯೆಗಳು ಸೇಡಂ ಮತಕ್ಷೇತ್ರದಲ್ಲಿ ನೀರಾವರಿ ಬಗ್ಗೆ ಇಷ್ಟು ವರ್ಷವಾದರೂ ಕೆರೆ ನಿರ್ಮಾಣವಾಗಿಲ್ಲ, ಕೇನಲ್ ನಿರ್ಮಾಣವಾಗಿಲ್ಲ, ಕೆರೆಗಳಿದ್ದರು ಕೂಡ ಮುಚ್ಚಿಹೋಗಿವ ಪರಿಸ್ಥಿತಿ ಬಂದಿದೆ. ಕೆಲವು ಒಂದಿಷ್ಟು ಕೆರೆಗಳ ಇದ್ದರೂ ಹೂಳು ಎತ್ತುವ ಕೆಲಸವಾಗಿಲ್ಲ ಎಂದು ಆರೊಪಿಸಿದರು. ಒಂದು ಸಲ ನಮಗೆ ಆಶೀರ್ವಾದ ಮಾಡಿ ನೋಡಿ ನಾನು ಹೇಳೋದಿಲ್ಲ ಮಾಡಿ ತೋರಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸುಭಾಷ ರಾಢೋಡ್ ,ರಾಜು ನಿಲಂಗಿ. ಶಿವಕುಮಾರ ಅಪ್ಪಾಜಿ, ಪಲ್ಲವಿ ಬಾಲರಾಜ್ ಗುತ್ತೇದಾರ, ಶಂಭುಲಿಂಗ ನಾಟೀಕರ್, ಸೇರಿದಂತೆ ಅನೇಕರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…